ಅಭಿನಂದನ್ ಎಳೆತಂದು ಟ್ರೋಲ್ ಮಾಡಿದ್ದ ಪಾಕಿಗಳಿಗೆ ಟಕ್ಕರ್ ಕೊಟ್ಟ ಭಾರತೀಯರು, ವಿಡಿಯೋ ವೈರಲ್!
ನಾಳೆ ಬದ್ಧ ವೈರಿಗಳಾದ ಭಾರತ ಮತ್ತು ಪಾಕಿಸ್ತಾನ ತಂಡಗಳು ವಿಶ್ವಕಪ್ ಮಹಾಸಮರದಲ್ಲಿ ಸೆಣೆಸಲಿದ್ದು ಈ ಮಧ್ಯೆ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ರನ್ನು ಎಳೆದು ತಂದು ಜಾಹಿರಾತು ಮಾಡಿ...

Published On :
ನವದೆಹಲಿ: ನಾಳೆ ಬದ್ಧ ವೈರಿಗಳಾದ ಭಾರತ ಮತ್ತು ಪಾಕಿಸ್ತಾನ ತಂಡಗಳು ವಿಶ್ವಕಪ್ ಮಹಾಸಮರದಲ್ಲಿ ಸೆಣೆಸಲಿದ್ದು ಈ ಮಧ್ಯೆ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ರನ್ನು ಎಳೆದು ತಂದು ಜಾಹಿರಾತು ಮಾಡಿ ಬಿಟ್ಟಿದ್ದ ಪಾಕಿಗರಿಗೆ ಭಾರತೀಯರು ಸಖತ್ ತಿರುಗೇಟು ನೀಡಿದ್ದಾರೆ.
ಸಂಪ್ರದಾಯಿಕ ಬದ್ಧ ವೈರಿಗಳಾದ ಪಾಕಿಸ್ತಾನ ಮತ್ತು ಟೀಂ ಇಂಡಿಯಾ ನಾಳೆ ಸೆಣೆಸಾಡಲಿದೆ. ಚಾಂಪಿಯನ್ಸ್ ಟ್ರೋಫಿ ಬಳಿಕ ಇದೇ ಮೊದಲ ಬಾರಿಗೆ ಉಭಯ ತಂಡಗಳು ಮುಖಾಮುಖಿಯಾಗಿದ್ದು ಪಂದ್ಯದ ಕುರಿತಂತೆ ನಿರೀಕ್ಷೆಗಳು ಹೆಚ್ಚಾಗಿವೆ.
ಇನ್ನು ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ರನ್ನು ಹೋಲುವ ವ್ಯಕ್ತಿಯನ್ನು ಮುಂದಿಟ್ಟು ಜಾಹಿರಾತು ಮಾಡಿ ಪಾಕಿಗರು ಭಾರತೀಯರನ್ನು ಅಪಮಾನಿಸಿತ್ತು. ಇದಕ್ಕೆ ಭಾರತೀಯರು ಸಹ ತೀವ್ರ ತಿರುಗೇಟು ನೀಡಿದ್ದಾರೆ.
ಕ್ಷೌರಿಕ ಅಂಗಡಿಗೆ ಬರುವ ಪಾಕ್ ಅಭಿಮಾನಿಯೊಬ್ಬ ಭಾರತೀಯ ಅಭಿಮಾನಿಗೆ ಫಾದರ್ಸ್ ಡೇ ಸ್ಪೇಷಲ್ ಎಂದು ಗಿಫ್ಟ್ ವೊಂದನ್ನು ನೀಡುತ್ತಾನೆ. ಅದರಲ್ಲಿ ಕರವಸ್ತವಿರುತ್ತದೆ. ಇದು ಏನು ಎಂದು ಪ್ರಶ್ನಿಸಿದ್ದಾಗ ಪಾಕಿಸ್ತಾನ ವಿರುದ್ಧ ಭಾರತ ಸೋತಾಗ ಇದು ನಿಮ್ಮ ಮುಖ ಮುಚ್ಚಿಕೊಳ್ಳಲು ಬೇಕಾಗುತ್ತದೆ ಎಂದು ಹೇಳುತ್ತಾನೆ.
ಈ ವೇಳೆ ಕ್ಷೌರಿಕ ಪಾಕ್ ಅಭಿಮಾನಿಗೆ ಅಭಿನಂದನ್ ರೀತಿ ಶೇವ್ ಮಾಡುತ್ತಾನೆ. ಹಾಗ ಪಾಕ್ ಅಭಿಮಾನಿ ಆತಂಕದಿಂದ ಏನಿದು ಎಂದು ಪ್ರಶ್ನಿಸಿದಾಗ ಇದು ನಮ್ಮ ದೇಶದ ಹೀರೋ ಅಭಿನಂದನ್ ಸ್ಟೈಲ್ ಎಂದು ಉತ್ತರಿಸುತ್ತಾನೆ. ಅಲ್ಲದೆ ಈ ಕರವಸ್ತ್ರ ತಗೋ ನಿನಗೆ ಮುಖ ಮುಚ್ಚಿಕೊಳ್ಳಲು ಬೇಕಾಗುತ್ತದೆ ಎಂದು ಹೇಳುತ್ತಾನೆ. ಹೀಗೆ ಪಾಕ್ ಅಭಿಮಾನಿಗೆ ತಿರುಗೇಟು ನೀಡಿರುವ ವಿಡಿಯೋ ಇದೀಗ ವೈರಲ್ ಆಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
ಟೀಂ ಇಂಡಿಯಾPakistanಪಾಕಿಸ್ತಾನCricket Offbeatಕ್ರಿಕೆಟ್ ಸ್ವಾರಸ್ಯAbhinandan Varthamanಅಭಿನಂದನ್ ವರ್ಧಮಾನ್Team India Fans
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


