ಸ್ವಲ್ಪ ಎಡವಿದ್ರೂ ಅಷ್ಟೇ; ಕ್ರಿಸ್ ಮಧ್ಯೆ ನಿಂತು ರನ್‌ಗಾಗಿ ರೋಹಿತ್-ಧೋನಿ ಸರ್ಕಸ್, ವಿಡಿಯೋ ವೈರಲ್!
ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ಗೆಲುವು ಸಾಧಿಸುವ ಮೂಲಕ ಟೀಂ ಇಂಡಿಯಾ ವಿಶ್ವಕಪ್ ನಲ್ಲಿ ಗೆಲುವಿನ ಪಾದಾರ್ಪಣೆ ಮಾಡಿದ್ದು ಈ ಪಂದ್ಯದಲ್ಲಿ ರೋಹಿತ್ ಶರ್ಮಾ...

Published On :
ಲಂಡನ್: ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ಗೆಲುವು ಸಾಧಿಸುವ ಮೂಲಕ ಟೀಂ ಇಂಡಿಯಾ ವಿಶ್ವಕಪ್ ನಲ್ಲಿ ಗೆಲುವಿನ ಪಾದಾರ್ಪಣೆ ಮಾಡಿದ್ದು ಈ ಪಂದ್ಯದಲ್ಲಿ ರೋಹಿತ್ ಶರ್ಮಾ ಮತ್ತು ಎಂಎಸ್ ಧೋನಿ ಕ್ರಿಸ್ ಮಧ್ಯೆ ನಿಂತು ಸಿಂಗಲ್ ರನ್‌ಗಾಗಿ ಸರ್ಕಸ್ ಮಾಡಿದ್ದು ಸ್ವಲ್ಪ ಎಡವಿದ್ರೂ ಪಂದ್ಯದ ಫಲಿತಾಂಶವೇ ಬೇರೆಯಾಗಿರುತ್ತಿತ್ತು.
ದಕ್ಷಿಣ ಆಫ್ರಿಕಾ ನೀಡಿದ 228 ರನ್ ಗಳ ಗುರಿ ಬೆನ್ನಟ್ಟಿದ ಟೀಂ ಇಂಡಿಯಾ ಪ್ರಮುಖ ಮೂರು ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಈ ವೇಳೆ ತಂಡಕ್ಕೆ ಆಸರೆಯಾಗಿದ್ದು ರೋಹಿತ್ ಶರ್ಮಾ ಮತ್ತು ಎಂಎಸ್ ಧೋನಿ. ಇಬ್ಬರು ಒಳ್ಳೆಯ ಜೊತೆಯಾಟ ನೀಡುತ್ತಿದ್ದು 139 ರನ್ ಗಳಿಸಿದ್ದಾಗ ರೋಹಿತ್ ಶರ್ಮಾ ಬಲಭಾಗಕ್ಕೆ ಚೆಂಡನ್ನು ಬಾರಿಸಿದರು. ಈ ವೇಳೆ ರೋಹಿತ್ ಶರ್ಮಾ ಸಿಂಗಲ್ ರನ್ ತೆಗೆದುಕೊಳ್ಳಲು ಮುಂದಾದರೂ. ಎಂಎಸ್ ಧೋನಿ ಅರ್ಧ ಕ್ರಿಸ್ ಗೆ ಬಂದಾಗ ರೋಹಿತ್ ಶರ್ಮಾ ರನ್ ಬೇಡ ಎಂಬಂತೆ ಸೂಚನೆ ನೀಡಿದರು. ಆದರೆ ಅಲ್ಲಿದ್ದ ಫೀಲ್ಡರ್ ಚೆಂಡನ್ನು ಮಿಸ್ ಮಾಡಿದ್ದರಿಂದ ಆರಾಮವಾಗಿ ಸಿಂಗಲ್ ರನ್ ತೆಗೆದುಕೊಂಡರು. ಒಂದು ವೇಳೆ ಫೀಲ್ಡರ್ ಚೆಂಡನ್ನು ಹಿಡಿದಿದ್ದರೇ ವಿಕೆಟ್ ಖಂಡಿತವಾಗಿಯು ಬೀಳುತ್ತಿತ್ತು.
ಸಿಂಗಲ್ ರನ್ ಪಡೆದ ನಂತರ ರೋಹಿತ್ ಶರ್ಮಾ ನಗುತ್ತಲೆ ಎಂಎಸ್ ಧೋನಿಯನ್ನು ಸಾರಿ ಕೇಳಿದರು. ಸದ್ಯ ಈ ವಿಡಿಯೋ ಇದೀಗ ವೈರಲ್ ಆಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
indiaಇಂಡಿಯಾMS DhoniRohit Sharmaರೋಹಿತ್ ಶರ್ಮಾದಕ್ಷಿಣ ಆಫ್ರಿಕಾSouth Africaಎಂಎಸ್ ಧೋನಿCricket Offbeatಕ್ರಿಕೆಟ್ ಸ್ವಾರಸ್ಯICC World Cup 2019ಐಸಿಸಿ ವಿಶ್ವ ಕಪ್ 2019
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


