ಗಾಯಾಳು ಡೇಲ್ ಸ್ಟೇಯ್ನ್ ವಿಶ್ವಕಪ್ ನಿಂದ ಹೊರಗೆ, ಬ್ಯೂರಾನ್ ಹೆಂಡ್ರಿಕ್ಸ್ ಬದಲಿ ಆಟಗಾರ
ದಕ್ಷಿಣ ಆಫ್ರಿಕಾ ಆಟಗಾರ ಡೇಲ್ ಸ್ಟೇಯ್ನ್ ಗಾಯಗೊಂಡಿದ್ದು, ವಿಶ್ವಕಪ್ ಕ್ರಿಕೆಟ್ ಟೂರ್ನಿ 2019ರಿಂದ ಹೊರ ನಡೆದಿದ್ದಾರೆ.

Published On :
ನವದೆಹಲಿ: ದಕ್ಷಿಣ ಆಫ್ರಿಕಾ ಆಟಗಾರ ಡೇಲ್ ಸ್ಟೇಯ್ನ್ ಗಾಯಗೊಂಡಿದ್ದು, ವಿಶ್ವಕಪ್ ಕ್ರಿಕೆಟ್ ಟೂರ್ನಿ 2019ರಿಂದ ಹೊರ ನಡೆದಿದ್ದಾರೆ.
ಡೇಲ್ ಸ್ಟೇಯ್ನ್ ಶೇಕಡಾ 85 ರಷ್ಟು ಪಿಟ್ ಆಗಿದ್ದಾರೆ.ಸಂಪೂರ್ಣ ಸದೃಢತೆಯ ಸನ್ನಿಹದಲ್ಲಿದ್ದಾರೆ ಎಂದು ದಕ್ಷಿಣ ಆಫ್ರಿಕಾ ತರಬೇತುದಾರ ಒಟ್ಟಿಸ್ ಗಿಬ್ಸಾನ್ ಹೇಳಿಕೆ ನೀಡಿದ್ದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ.ಮೊದಲ ಎರಡು ಪಂದ್ಯಗಳಲ್ಲಿ ಸೋತಿರುವ ದಕ್ಷಿಣ ಆಫ್ರಿಕಾ ಬುಧವಾರ ಸೌಥ್‌ಹ್ಯಾಮ್ಟನ್ ನಲ್ಲಿ ಭಾರತ ವಿರುದ್ಧ ಆಡಲಿದೆ.
ಭುಜದ ಗಾಯದಿಂದಾಗಿ ಈ ಬಾರಿಯ ಐಪಿಎಲ್ ನಲ್ಲಿ ಎರಡು ಪಂದ್ಯಗಳಲ್ಲಿ ಆಡಿದ್ದ 36 ವರ್ಷದ ಡೇಲ್ ಸ್ಟೇಯ್ನ್ ಬಹುತೇಕ ಪಂದ್ಯಗಳಿಂದ ಹೊರಗೆ ಉಳಿದಿದ್ದರು. ಇದೇ ಕಾರಣದಿಂದಾಗಿ ಇಂಗ್ಲೆಂಡ್ ನಿಂದ ನಿರ್ಗಮಿಸಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
ದಕ್ಷಿಣ ಆಫ್ರಿಕಾSouth Africaಡೇಲ್ ಸ್ಟೇಯ್ನ್Cricket OffbeatICC World Cup 2019ಐಸಿಸಿ ವಿಶ್ವ ಕಪ್ 2019Dale Steyn ಕ್ರಿಕೆಟ್
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


