ಐಸಿಸಿ ವಿಶ್ವಕಪ್: ಭಾರತ ವಿರುದ್ಧದ ಪಂದ್ಯಕ್ಕೆ ಲುಂಗಿ ಎನ್‌ಗಿಡಿ ಅಲಭ್ಯ
ಮಂಡಿ ಸ್ನಾಯು ಸೆಳೆತಕ್ಕೆ ಒಳಗಾಗಿರುವ ದಕ್ಷಿಣ ಆಫ್ರಿಕಾ ಯುವ ವೇಗಿ ಲುಂಗಿ ಎನ್‌ಗಿಡಿ ಅವರು ಜೂ.5 ರಂದು ಭಾರತದ ವಿರುದ್ಧದ ಪಂದ್ಯಕ್ಕೆ ಅಲಭ್ಯರಾಗಿದ್ದಾರೆ.

Published On :
ಲಂಡನ್: ಮಂಡಿ ಸ್ನಾಯು ಸೆಳೆತಕ್ಕೆ ಒಳಗಾಗಿರುವ ದಕ್ಷಿಣ ಆಫ್ರಿಕಾ ಯುವ ವೇಗಿ ಲುಂಗಿ ಎನ್‌ಗಿಡಿ ಅವರು ಜೂ.5 ರಂದು ಭಾರತದ ವಿರುದ್ಧದ ಪಂದ್ಯಕ್ಕೆ ಅಲಭ್ಯರಾಗಿದ್ದಾರೆ. ಇದರಿಂದ ಸತತ ಎರಡು ಪಂದ್ಯಗಳಲ್ಲಿ ಸೋಲು ಹಾಗೂ ಸ್ಟೈನ್ ಇನ್ನೂ ಚೇತರಿಕೆ ಕಾಣದೆ ಇರುವುದರ ನಡುವೆ ನಾಯಕ ಡು ಪ್ಲೆಸಿಸ್‌ಗೆ ಇನ್ನಷ್ಟು ತಲೆ ನೋವಾಗಿದೆ.
ಭಾನುವಾರ ದಿ ಓವಲ್ ಕ್ರೀಡಾಂಗಣದಲ್ಲಿ ಬಾಂಗ್ಲಾದೇಶ ವಿರುದ್ಧ ನಾಲ್ಕು ಓವರ್‌ಗಳಿಗೆ 34 ರನ್ ನಿಡಿದ್ದ ಬಳಿಕ ಎನ್‌ಗಿಡಿ ಅವರು ಸ್ನಾಯು ಸೆಳೆತಕ್ಕೆ ಒಳಗಾದರು. ನಂತರ ಅವರು ಬೌಲಿಂಗ್ ಮುಂದುವರಿಸಲಾಗದೆ ಪಂದ್ಯದಿಂದ ಹೊರ ನಡೆದರು. ಅಂತಿಮವಾಗಿ ದಕ್ಷಿಣ ಆಫ್ರಿಕಾ 21 ರನ್‌ಗಳಿಂದ ಸೋಲು ಅನುಭವಿಸಿತು.
"ಎನ್‌ಗಿಡಿ ಅವರ ಎಡಗಾಲಿನಲ್ಲಿ ಸ್ನಾಯುಸೆಳೆತದ ಗಾಯ ಉಂಟಾಗಿದ್ದು, ಚಿಕಿತ್ಸೆ ನೀಡಲಾಗತ್ತಿದೆ. ಹಾಗಾಗಿ ಭಾರತದ ವಿರುದ್ಧ ಪಂದ್ಯಕ್ಕೆ ಅವರು ಅಲಭ್ಯರಾಗಲಿದ್ದಾರೆ ಎಂಬುದನ್ನು ತಂಡದ ವ್ಯವಸ್ಥಾಪಕ ಮೊಹಮ್ಮದ್ ಮೂಸಜೆ ಅವರು ಸ್ಪಷ್ಟಪಡಿಸಿದ್ದಾರೆ.
"ಎನ್‌ಗಿಡಿ ಅವರು ಇನ್ನೂ ಸಂಪೂರ್ಣ ಚೇತರಿಸಿಕೊಳ್ಳಲು ವಾರದಿಂದ 10 ದಿನಗಳ ಕಾಲಾವಕಾಶ ಅಗತ್ಯವಿದೆ. ಇಂದು ಅವರ ಸ್ಕ್ಯಾನ್‌ಗೆ ಒಳಪಡಿಸಲಾಗುತ್ತದೆ. ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯದ ವೇಳೆಗೆ ಅವರನ್ನು ತಯಾರಿ ಮಾಡುವ ಯೋಜನೆ ಇದೆ." ಎಂದು ತಿಳಿಸಿದರು.
ಈಗಾಗಲೇ ಕಳಪೆ ಲಯದಿಂದ ಬಳಲುತ್ತಿರುವ ದಕ್ಷಿಣ ಆಫ್ರಿಕಾಗೆ ಗಾಯದ ಬಿಸಿ ಇನ್ನಷ್ಟು ತಲೆನೋವು ಉಂಟುಮಾಡಿದೆ. ಭುಜದ ಗಾಯದಿಂದ ಚೇತರಿಸಿಕೊಳ್ಳುತ್ತಿರುವ ಹಿರಿಯ ವೇಗಿ ಡೇಲ್ ಸ್ಟೇಯ್ನ್ ಅವರನ್ನು ಲುಂಗಿ ಎನ್‌ಗಿಡಿ ಸ್ಥಾನದಲ್ಲಿ ಕಣಕ್ಕೆ ಇಳಿಯಬಹುದು. ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ತಲೆ ಚೆಂಡು ತಗಿಲಿಸಿಕೊಂಡಿದ್ದ ಹಾಶೀಮ್ ಆಮ್ಲಾ ಬಾಂಗ್ಲಾ ವಿರುದ್ಧ ಆಡಿರಲಿಲ್ಲ. ಭಾರತದ ವಿರುದ್ಧ ಪಂದ್ಯದಲ್ಲಿ ಪ್ಯಾಡ್ ಕಟ್ಟಲಿದ್ದಾ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Cricketಕ್ರಿಕೆಟ್indiaಭಾರತದಕ್ಷಿಣ ಆಫ್ರಿಕಾSouth AfricaWorld Cup 2019ವಿಶ್ವಕಪ್ 2019Lungi Ngidiಲುಂಗಿ ಎನ್‌ಗಿಡಿ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


