ರೋಹಿತ್ ಶರ್ಮಾ ಜೊತೆಗೆ ಮುನಿಸು: ಹಾಸ್ಯಾಸ್ಪದ- ವಿರಾಟ್ ಕೊಹ್ಲಿ
ರೋಹಿತ್ ಜೊತೆಗೆ ಯಾವುದೇ ಭಿನ್ನಾಭಿಪ್ರಾಯವಿಲ್ಲ, ಆದಾಗ್ಯೂ, ಇಂತಹ ವರದಿಗಳು ಗೊಂದಲವನ್ನುಂಟು ಮಾಡುವ ಸುಳ್ಳುಗಳು ಹಾಗೂ ಹಾಸ್ಯಾಸ್ಪದ ಎಂದು ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹೇಳಿದ್ದಾರೆ

Published On :
ನವದೆಹಲಿ: ಟೀಂ ಇಂಡಿಯಾ ಉಪನಾಯಕ ರೋಹಿತ್ ಶರ್ಮಾ ಜೊತೆಗಿನ ಮುನಿಸು ಬಗ್ಗೆ ಎದ್ದಿರುವ ಊಹಾಪೋಹಗಳನ್ನು ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅಲ್ಲಗಳೆದಿದ್ದಾರೆ.
ರೋಹಿತ್ ಶರ್ಮಾ ಜೊತೆಗೆ ಯಾವುದೇ ಭಿನ್ನಾಭಿಪ್ರಾಯವಿಲ್ಲ, ಆದಾಗ್ಯೂ, ಇಂತಹ ವರದಿಗಳು ಗೊಂದಲವನ್ನುಂಟು ಮಾಡುವ ಸುಳ್ಳುಗಳು ಹಾಗೂ ಹಾಸ್ಯಾಸ್ಪದ ಎಂದು ಅವರು ಹೇಳಿದ್ದಾರೆ.
ವಿಶ್ವಕಪ್ ಟೂರ್ನಿಯ ಬಳಿಕ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ನಡುವೆ ಸಂಬಂಧ ಹದಗೆಟ್ಟಿದೆ. ಒಬ್ಬರನೊಬ್ಬರು ಮುಖಕ್ಕೆ ಮುಖ ಕೊಟ್ಟು ಮಾತನಾಡುತ್ತಿಲ್ಲ. ಕ್ಯಾಪ್ಟನ್ ವಿಚಾರವಾಗಿ ಈ ಇಬ್ಬರ ನಡುವೆ ವೈಮನಸ್ಸು ಮೂಡಿದೆ ಎಂಬಂತಹ ವರದಿಗಳು ಕೇಳಿಬರುತ್ತಿವೆ.
ವೆಸ್ಟ್ ಇಂಡೀಸ್ ಪ್ರವಾಸಕ್ಕೂ ಮುನ್ನ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಸ್ಪಷ್ಟನೆ ನೀಡಿದ ವಿರಾಟ್ ಕೊಹ್ಲಿ, ಇಂತಹ ವರದಿಗಳು ಗೊಂದಲಕಾರಿ ಹಾಗೂ ಹಾಸ್ಯಾಸ್ಪದವಾಗಿದೆ. ಈ ರೀತಿಯ ವದಂತಿಗಳು ಮೂರ್ಖತನದಿಂದ ಕೂಡಿದ್ದಾಗಿವೆ ಎಂದರು.
ರೋಹಿತ್ ಜೊತೆಗೆ ಸಂಬಂಧ ಉತ್ತಮವಾಗಿದೆ. ನಮ್ಮಿಬ್ಬರ ನಡುವೆ ಯಾವುದೇ ಭಿನ್ನಾಭಿಪ್ರಾಯವಿಲ್ಲ. ಹಿಂದಿನ ಕೆಲ ದಿನಗಳಲ್ಲಿ ಅನೇಕ ವಿಚಾರಗಳ ಬಗ್ಗೆ ಕೇಳಿದ್ದೇನೆ. ಆದರೆ, ಟೀಂ ನಲ್ಲಿ ಸಂಬಂಧ ಸರಿಯಿಲ್ಲದಿದ್ದರೆ , ಚೆನ್ನಾಗಿ ಪ್ರದರ್ಶನ ನೀಡಲು ಸಾಧ್ಯವಿಲ್ಲ ಎಂದು ಕೊಹ್ಲಿ ಹೇಳಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Cricketಟೀಂ ಇಂಡಿಯಾTeam IndiaVirat Kohliವಿರಾಟ್ ಕೊಹ್ಲಿRohit Sharmaರೋಹಿತ್ ಶರ್ಮಾಭಿನ್ನಾಭಿಪ್ರಾಯRift ಕ್ರಿಕೆಟ್
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


