ಕ್ರಿಕೆಟ್

ಎಂಎಸ್ ಧೋನಿ ಸ್ಥಾನ ತುಂಬುವುದು ದೊಡ್ಡ ಸವಾಲು: ರಿಷಬ್ ಪಂತ್!

ಟೀಂ ಇಂಡಿಯಾದ ಹಿರಿಯ ಆಟಗಾರ ಎಂಎಸ್ ಧೋನಿ ಅವರ ಜಾಗ ತುಂಬುವುದು ದೊಡ್ಡ ಸವಾಲಿನ ಕೆಲಸ ಎಂದು ಯುವ ಆಟಗಾರ ರಿಷಬ್ ಪಂತ್ ಹೇಳಿದ್ದಾರೆ.

ಎಂಎಸ್ ಧೋನಿ ಸ್ಥಾನ ತುಂಬುವುದು ದೊಡ್ಡ ಸವಾಲು: ರಿಷಬ್ ಪಂತ್!
ರಿಷಬ್ ಪಂತ್-ಎಂಎಸ್ ಧೋನಿ
Published On :
ನವದೆಹಲಿ: ಟೀಂ ಇಂಡಿಯಾದ ಹಿರಿಯ ಆಟಗಾರ ಎಂಎಸ್ ಧೋನಿ ಅವರ ಜಾಗ ತುಂಬುವುದು ದೊಡ್ಡ ಸವಾಲಿನ ಕೆಲಸ ಎಂದು ಯುವ ಆಟಗಾರ ರಿಷಬ್ ಪಂತ್ ಹೇಳಿದ್ದಾರೆ. 
ಸಂದರ್ಶನವೊಂದರಲ್ಲಿ ಮಾತನಾಡಿದ ರಿಷಬ್ ಪಂತ್ ಅವರು, ಬ್ಯಾಟ್ಸ್ ಮನ್ ಮತ್ತು ಕೀಪರ್ ಆಗಿ ಆಡುವುದು ನನಗೆ ದೊಡ್ಡ ಸವಾಲಿನ ಕೆಲಸ ಅದರಲ್ಲೂ ಧೋನಿ ಸ್ಥಾನ ತುಂಬುವುದು ಕಷ್ಟ. ನಾನು ಈ ಬಗ್ಗೆ ಯೋಚಿಸಲು ಪ್ರಾರಂಭಿಸಿದರೆ ಸಮಸ್ಯೆ ಆಗುತ್ತದೆ. ಜನರು ಏನು ಹೇಳುತ್ತಾರೆಂದು ನಾನು ಯೋಚಿಸುತ್ತಿಲ್ಲ. ನಾನು ಏನು ಮಾಡಬೇಕೆಂಬುದರ ಬಗ್ಗೆ ಗಮನ ಹರಿಸುತ್ತಿದ್ದೇನೆ ಎಂದರು.
ದೇಶಕ್ಕಾಗಿ ಆಡುವುದಕ್ಕೆ ನಾನು ಬಯಸುತ್ತೇನೆ. ನಾನು ಕೇಂದ್ರೀಕರಿಸುವ ಏಕೈಕ ವಿಷಯ ಅದು. ನಾನು ಸವಾಲನ್ನು ಸಕಾರಾತ್ಮಕವಾಗಿ ತೆಗೆದುಕೊಳ್ಳುತ್ತೇನೆ. ಈಗ ನಾನು ಏನು ಕಲಿಯಬಹುದು ಮತ್ತು ಸುಧಾರಿಸಲು ಏನು ಮಾಡಬಹುದು ಎಂದು ನೋಡಬೇಕಿದೆ ಎಂದು. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.