ಕೂಡಲೇ ವಿಶ್ವಕಪ್ ತಂಡದಿಂದ ನಿಮ್ಮ ಆಟಗಾರನನ್ನು ಸ್ವದೇಶಕ್ಕೆ ಕಳುಹಿಸಿ, ಐಸಿಸಿ ಕೆಂಗಣ್ಣಿಗೆ ಗುರಿಯಾಗಿದ್ದ ತಂಡವಿದು?
ವಿಶ್ವಕಪ್ ಟೂರ್ನಿ ವೇಳೆ ದಿಢೀರ್ ಬೆಳವಣಿಗೆಯೊಂದು ನಡೆದಿದ್ದು ಒಂದು ವಾರದ ಬಳಿಕ ವಿಷಯ ಬಹಿರಂಗವಾಗಿದೆ. ಹೌದು ಕೂಡಲೇ ವಿಶ್ವಕಪ್ ತಂಡದಿಂದ ನಿಮ್ಮ ಆಟಗಾರನನ್ನು...

Published On :
ವಿಶ್ವಕಪ್ ಟೂರ್ನಿ ವೇಳೆ ದಿಢೀರ್ ಬೆಳವಣಿಗೆಯೊಂದು ನಡೆದಿದ್ದು ಒಂದು ವಾರದ ಬಳಿಕ ವಿಷಯ ಬಹಿರಂಗವಾಗಿದೆ. ಹೌದು ಕೂಡಲೇ ವಿಶ್ವಕಪ್ ತಂಡದಿಂದ ನಿಮ್ಮ ಆಟಗಾರನನ್ನು ಸ್ವದೇಶಕ್ಕೆ ಕಳುಹಿಸಿ ಇಲ್ಲದಿದ್ದರೆ ನಿಮ್ಮ ತಂಡ ಸಂಕಷ್ಟಕ್ಕೆ ಗುರಿಯಾಗಲಿದೆ ಎಂದು ಐಸಿಸಿ ಎಚ್ಚರಿಕೆ ನೀಡಿತ್ತು.
ವಿಶ್ವಕಪ್ ಪಂದ್ಯದ ವೇಳೆ ಆಫ್ಘಾನ್ ತಂಡದ ಬೌಲರ್ ಮಹಿಳೆಯೊಬ್ಬರೊಂದಿಗೆ ಅನುಚಿತವಾಗಿ ವರ್ತಿಸಿದ್ದು ಕೂಡಲೇ ಆಟಗಾರನನ್ನು ಸ್ವದೇಶಕ್ಕೆ ಕಳುಹಿಸಿ ಎಂದು ಐಸಿಸಿ ಆಫ್ಗಾನ್ ಗೆ ಎಚ್ಚರಿಕೆ ನೀಡಿತ್ತು.
ಅಂದೇ ಈ ವಿಚಾರವನ್ನು ಬಹಿರಂಗಪಡಿಸಿದರೆ ಅದು ತಂಡಕ್ಕೆ ತೊಂದರೆಯಾಗುತ್ತದೆ ಎಂದು ಐಸಿಸಿ ಈ ವಿಷಯವನ್ನು ಬಹಿರಂಗಗೊಳಿಸಿರಲಿಲ್ಲ. ಆದರೆ ಇದೀಗ ಆಟಗಾರನ ಕುರಿತು ಮಾಹಿತಿ ಹೊರ ಬಿದ್ದಿದೆ.
ಆಫ್ಗಾನ್ ತಂಡದ ಬೌಲರ್ ಅಫ್ತಾಬ್ ಆಲಂ ಹೊಟೇಲ್ ನಲ್ಲಿ ಮಹಿಳೆಯೊಬ್ಬರೊಂದಿಗೆ ಅಸಭ್ಯವಾಗಿ ವರ್ತಿಸಿದ್ದರು. ಇದನ್ನು ಗಂಭೀರವಾಗಿ ಪರಿಗಣಿಸಿದ ಐಸಿಸಿ ಆಟಗಾರನ ಮೇಲೆ ಶಸ್ತಿನ ಕ್ರಮ ಕೈಗೊಳ್ಳುವಂತೆ ಆಫ್ಗಾನ್ ಕ್ರಿಕೆಟ್ ಮಂಡಳಿಗೆ ಸೂಚಿಸಿತ್ತು. ಅದರಂತೆ ಆಲಂನನ್ನು ಟೂರ್ನಿಯಿಂದ ಕೈ ಬಿಟ್ಟು ಒಂದು ವರ್ಷ ನಿಷೇಧ ಹೇರಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Cricketಕ್ರಿಕೆಟ್ನಿಷೇಧಐಸಿಸಿAfghanistansuspensionICCಆಫ್ಗಾನಿಸ್ತಾನವಿಶ್ವಕಪ್ 2019CWC19Aftab Alamಅಫ್ತಾಬ್ ಆಲಂ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


