ರನೌಟ್‌ನಿಂದ ಮೈದಾನದಲ್ಲೇ ಕಣ್ಣೀರಿಟ್ಟ ಧೋನಿ, ಹಣೆ ಚಚ್ಚಿಕೊಂಡ ಪತ್ನಿ ಸಾಕ್ಷಿ, ಮನಕಲಕುವ ವಿಡಿಯೋ!
ವಿಶ್ವಕಪ್ ಟೂರ್ನಿಯ ಸೆಮಿಫೈನಲ್ ಪಂದ್ಯದಲ್ಲಿ ಟೀಂ ಇಂಡಿಯಾ 18 ರನ್ ಗಳಿಂದ ರೋಚಕ ಸೋಲು ಕಂಡಿದ್ದು ಈ ಮಧ್ಯೆ ತಂಡವನ್ನು ಗೆಲ್ಲಿಸುವ ಭರದಲ್ಲಿ ಎಂಎಸ್ ಧೋನಿ ರನೌಟ್ ಆಗಿದ್ದು...

Published On :
ಲಂಡನ್: ವಿಶ್ವಕಪ್ ಟೂರ್ನಿಯ ಸೆಮಿಫೈನಲ್ ಪಂದ್ಯದಲ್ಲಿ ಟೀಂ ಇಂಡಿಯಾ 18 ರನ್ ಗಳಿಂದ ರೋಚಕ ಸೋಲು ಕಂಡಿದ್ದು ಈ ಮಧ್ಯೆ ತಂಡವನ್ನು ಗೆಲ್ಲಿಸುವ ಭರದಲ್ಲಿ ಎಂಎಸ್ ಧೋನಿ ರನೌಟ್ ಆಗಿದ್ದು ಈ ವೇಳೆ ಮೈದಾನದಲ್ಲೇ ಧೋನಿ ಕಣ್ಣೀರಿಟ್ಟರು. ಇನ್ನು ಇದನ್ನು ಕಂಡ ಸಾಕ್ಷಿ ಹಣೆ ಚಚ್ಚಿಕೊಂಡ ವಿಡಿಯೋ ವೈರಲ್ ಆಗಿದೆ.
ಭಾರತದ ಪರ ಅರ್ಧಶತಕ ಸಿಡಿಸಿ ನಿರ್ಣಾಯಕ ಎನಿಸಿದ್ದ ಮಹೇಂದ್ರ ಸಿಂಗ್ ಧೋನಿ ರನೌಟ್... ಇಡೀ ಪಂದ್ಯದ ಗತಿಯನ್ನು ಬದಲಿಸಿತು. 10 ಎಸೆತದಲ್ಲಿ 25 ರನ್ ಬೇಕಿದ್ದಾಗ ಎಂಎಸ್ ಧೋನಿ ಫರ್ಗ್ಯೂಸನ್ ಎಸೆತದಲ್ಲಿ ಲೆನ್ ಸೈಡ್ ನಲ್ಲಿ ಚೆಂಡನ್ನು ಬಾರಿಸಿದರು. ಈ ವೇಳೆ ಎರಡು ರನ್ ತೆಗೆದುಕೊಳ್ಳುವಾಗ ಮಾರ್ಟಿನ್ ಗುಪ್ಟಿಲ್ ಅವರು ಚೆಂಡನ್ನು ದೂರದಿಂದ ನೇರವಾಗಿ ವಿಕೆಟ್ ಗೆ ಹೊಡೆದು ರನೌಟ್ ಮಾಡಿದರು. ಇದು ಟೀಂ ಇಂಡಿಯಾಗೆ ದೊಡ್ಡ ಹೊಡೆತ ನೀಡಿತು.
ಇನ್ನು ಧೋನಿ ರನೌಟ್ ಆಗುತ್ತಿದ್ದಂತೆ ಮೈದಾನದಿಂದ ನಿರ್ಗಮಿಸುವಾಗ ಧೋನಿ ಕಣ್ಣೀರು ಹಾಕುತ್ತಾ ನಿರ್ಗಮಿಸಿದ್ದರು. ಇನ್ನು ಧೋನಿ ರನೌಟ್ ಆಗುತ್ತಿದ್ದಂತೆ ಧೋನಿ ಪತ್ನಿ ಸಾಕ್ಷಿ ಹಣೆ ಚಚ್ಚಿಕೊಂಡಿದ್ದಾರೆ. ಈ ವಿಡಿಯೋ ಇದೀಗ ವೈರಲ್ ಆಗಿವೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
ಟೀಂ ಇಂಡಿಯಾTeam IndiaMS Dhoniಎಂಎಸ್ ಧೋನಿSakshi Dhoniಸಾಕ್ಷಿ ಧೋನಿCricket Offbeatಕ್ರಿಕೆಟ್ ಸ್ವಾರಸ್ಯWorld Cup 2019ವಿಶ್ವಕಪ್ 2019
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


