ಕನ್ನಡಿಗ ಮಾಯಾಂಕ್ ಅಗರವಾಲ್ ಆಯ್ಕೆ ಹಿಂದೆ ವಿರಾಟ್ ಕೊಹ್ಲಿ-ರವಿಶಾಸ್ತ್ರಿ ಕೈವಾಡ?
ದೇವರ ಅನುಗ್ರಹವೇನೋ ಎಂಬಂತೆ ಟೂರ್ನಿಯ ಕೊನೆಯಲ್ಲಿ ಕರ್ನಾಟಕ ಆಟಗಾರ ಮಾಯಂಕ್ ಅಗರವಾಲ್ ವಿಶ್ವಕಪ್ ಟೀಂ ಇಂಡಿಯಾಗೆ ಆಯ್ಕೆಯಾಗಿದ್ದು...

Published On :
ನವದೆಹಲಿ: ದೇವರ ಅನುಗ್ರಹವೇನೋ ಎಂಬಂತೆ ಟೂರ್ನಿಯ ಕೊನೆಯಲ್ಲಿ ಕರ್ನಾಟಕ ಆಟಗಾರ ಮಾಯಂಕ್ ಅಗರವಾಲ್ ವಿಶ್ವಕಪ್ ಟೀಂ ಇಂಡಿಯಾಗೆ ಆಯ್ಕೆಯಾಗಿದ್ದು ಇದರ ಹಿಂದೆ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮತ್ತು ಕೋಚ್ ರವಿಶಾಸ್ತ್ರಿ ಕೈವಾಡವಿದೆ ಎಂದು ಹೇಳಲಾಗುತ್ತಿದೆ.
ಮಾಯಾಂಕ್ ಇಲ್ಲಿಯವರೆಗೂ ಒಂದೇ ಒಂದು ಅಂತಾರಾಷ್ಟ್ರೀಯ ಏಕದಿನ ಪಂದ್ಯವನ್ನಾಡಿಲ್ಲ ಆದರೂ ಅಗರವಾಲ್ ಆಯ್ಕೆಗೆ ಕಾರಣವೇನು ಎಂಬ ಮಾತು ಕೇಳಿಬಂದಿತ್ತು. ತಂಡಕ್ಕೆ ಯಾರನ್ನಾದರೂ ಆಯ್ಕೆ ಮಾಡಬೇಕು ಎಂದರೆ ಬಿಸಿಸಿಐ ಆಯ್ಕೆ ಸಮಿತಿ ನಿರ್ಧಾರ ಮಾಡಬೇಕು. ಆದರೆ ಮಾಯಾಂಕ್ ರನ್ನು ಆಯ್ಕೆ ಸಮಿತಿ ಬದಲಿಗೆ ಟೀಂ ಮ್ಯಾನೇಜ್ ಮೆಂಟ್ ಆಯ್ಕೆ ಮಾಡಿದೆ ಎಂದು ಸುದ್ದಿ ಸಂಸ್ಧೆಯೊಂದು ವರದಿ ಮಾಡಿದೆ.
ಮಾಯಾಂಕ್ ಅಗರವಾಲ್ ಇಂಗ್ಲೆಂಡ್ ನಲ್ಲಿ ನಡೆದಿದ್ದ ಭಾರತ ಎ, ವೆಸ್ಟ್ ಇಂಡೀಸ್ ಎ ಮತ್ತು ಇಂಗ್ಲೆಂಡ್ ಎ ಲಯನ್ಸ್ ತಂಡಗಳ ನಡುವಿನ ತ್ರಿಕೋನ ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡಿದ್ದರು.
ನಾಲ್ಕು ಇನ್ನಿಂಗ್ಸ್ ನಲ್ಲಿ ಮಾಯಾಂಕ್ ಎರಡು ಶತಕ ಬಾರಿಸಿದ್ದು ಒಟ್ಟು 287 ರನ್ ಗಳಿಸಿದ್ದರು. ಈ ಪ್ರದರ್ಶನದ ಆಧಾರದ ಮೇಲೆ ಅಗರವಾಲ್ ರನ್ನು ಆಯ್ಕೆ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Cricketಕ್ರಿಕೆಟ್ಟೀಂ ಇಂಡಿಯಾMayank AgarwalVirat Kohliವಿರಾಟ್ ಕೊಹ್ಲಿRavi shastriರವಿಶಾಸ್ತ್ರಿTeam IndianWorld Cup 2019ಮಾಯಾಂಕ್ ಅಗರವಾಲ್ವಿಶ್ವಕಪ್ 2019
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


