ಎಲ್ಲಾ ಮಾದರಿಯ ಕ್ರಿಕೆಟ್ ಗೂ ಅಂಬಟಿ ರಾಯುಡು ನಿವೃತ್ತಿ ಘೋಷಣೆ, ಬಿಸಿಸಿಐಗೆ ಪತ್ರ
ಭಾರತದ ಮಧ್ಯಮ ಕ್ರಮಾಂಕದ ಬ್ಯಾಟ್ಸ್ ಮನ್ ಅಂಬಟಿ ರಾಯುಡು ಐಪಿಎಲ್ ಸೇರಿದಂತೆ ಎಲ್ಲಾ ಮಾದರಿಯ ಕ್ರಿಕೆಟ್ ಗೂ ನಿವೃತ್ತಿ ಘೋಷಿಸಿದ್ದಾರೆ.

Published On :
ಮುಂಬೈ: ಭಾರತದ ಮಧ್ಯಮ ಕ್ರಮಾಂಕದ ಬ್ಯಾಟ್ಸ್ ಮನ್ ಅಂಬಟಿ ರಾಯುಡು ಐಪಿಎಲ್ ಸೇರಿದಂತೆ ಎಲ್ಲಾ ಮಾದರಿಯ ಕ್ರಿಕೆಟ್ ಗೂ ನಿವೃತ್ತಿ ಘೋಷಿಸಿದ್ದಾರೆ.
ವಿಶ್ವ ಕಪ್ ಕ್ರಿಕೆಟ್ ತಂಡದಲ್ಲಿ ಗಾಯಗೊಂಡ ವಿಜಯ್ ಶಂಕರ್ ಬದಲಿಗೆ ಮಯಾಂಕ್ ಅಗರ್ ವಾಲ್ ಅವರಿಗೆ ಸ್ಥಾನ ನೀಡಿರುವ ಆಯ್ಕೆದಾರರ ಸಮಿತಿ ವಿರುದ್ಧ ರಾಯುಡು ಅಸಮಾಧಾನಗೊಂಡು ಈ ನಿರ್ಧಾರ ಕೈಗೊಂಡಿದ್ದಾರೆ.
ಅಂಬಟಿ ರಾಯುಡು ವಿಶ್ವಕಪ್ ಆಟಗಾರರ ಸ್ಟಾಂಡ್ ಬೈ ಪಟ್ಟಿಯಲ್ಲಿದ್ದರು. ಆದರೆ, ಶಿಖರ್ ಧವನ್ ಹಾಗೂ ವಿಜಯ್ ಶಂಕರ್ ಗಾಯಗೊಂಡ ನಂತರ ರಿಷಬ್ ಪಂತ್ ಹಾಗೂ ಅಗರ್ ವಾಲ್ ಅವರನ್ನು ಬದಲಿ ಆಟಗಾರರಾಗಿ ಆಯ್ಕೆದಾರರು ಆಯ್ಕೆ ಮಾಡಿರುವುದರಿಂದ ಲಂಡನ್ ಗೆ ಟಿಕೆಟ್ ಪಡೆಯುವಲ್ಲಿ ಅಂಬಟಿ ರಾಯುಡು ವಿಫಲರಾಗಿದ್ದಾರೆ.
ಅಂಬಟಿ ರಾಯುಡು 55 ಏಕದಿನ ಪಂದ್ಯಗಳಲ್ಲಿ ಮೂರು ಶತಕ, 10 ಅರ್ಧಶತಕದೊಂದಿಗೆ 47. 05 ಸರಾಸರಿಯಲ್ಲಿ 1694 ರನ್ ಗಳಿಸಿದ್ದಾರೆ. ಆರು ಟಿ-20 ಪಂದ್ಯಗಳಲ್ಲಿ 42 ರನ್ ಕಲೆಹಾಕಿದ್ದಾರೆ. ಟೆಸ್ಟ್ ಕ್ರಿಕೆಟ್ ನಲ್ಲಿ ಸ್ಥಾನ ಅವಕಾಶ ಪಡೆಯುವಲ್ಲಿ ರಾಯುಡು ವಿಫಲರಾಗಿದ್ದಾರೆ.
2013 ರಲ್ಲಿ ಜಿಂಬಾಬ್ವೆ ವಿರುದ್ಧದ ಏಕದಿನ ಪಂದ್ಯದ ಮೂಲಕ ಕ್ರಿಕೆಟ್ ಗೆ ಪಾದಾರ್ಪಣೆ ಮಾಡಿದ ಅಂಬಟಿ ರಾಯುಡು ಈ ವರ್ಷ ರಾಂಚಿಯಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧ ಏಕದಿನ ಪಂದ್ಯದಲ್ಲಿ ಆಡಿದ್ದರು.
ಏಕದಿನ ಹಾಗೂ ಟಿ-20 ಪಂದ್ಯಗಳಲ್ಲಿ ಗಮನ ನೀಡುವ ನಿಟ್ಟಿನಲ್ಲಿ ಪ್ರಥಮ ದರ್ಜೆ ಕ್ರಿಕೆಟ್ ಗೆ ಕಳೆದ ವರ್ಷ ರಾಯುಡು ನಿವೃತ್ತಿ ಘೋಷಿಸಿದ್ದರು. 17 ವರ್ಷಗಳ ಪ್ರಥಮ ದರ್ಜೆ ಕ್ರಿಕೆಟ್ ನಲ್ಲಿ 97 ಪಂದ್ಯಗಳಲ್ಲಿ 6151 ರನ್ ಗಳನ್ನು ರಾಯುಡು ಗಳಿಸಿದ್ದಾರೆ.
ಐಪಿಎಲ್ ಟೂರ್ನಿಯಲ್ಲಿ ಚೆನ್ನೆ ಸೂಪರ್ ಕಿಂಗ್ಸ್ ಪರವಾಗಿ ಉತ್ತಮ ಪ್ರದರ್ಶನ ತೋರಿದ ರಾಯುಡು, ವಿಶ್ವಕಪ್ ನಲ್ಲಿ ಟೀಂ ಇಂಡಿಯಾದ ನಂಬರ್ ನಾಲ್ಕರ ಬ್ಯಾಟ್ಸ್ ಮನ್ ಆಗಿ ಕಾಣಿಸಿಕೊಳ್ಳಬೇಕಿತ್ತು. ಆದಾಗ್ಯೂ, ಸ್ಟಾಂಡ್ ಬೈ ಆಟಗಾರರ ಪಟ್ಟಿಯಲ್ಲಿದ್ದರೂ ಅವಕಾಶ ಪಡೆಯುವಲ್ಲಿ ಅವರು ವಿಫಲರಾಗಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


