ಆಸ್ಟ್ರೇಲಿಯಾಗಿಂತ ಕಿವೀಸ್ ಉತ್ತಮ: ಭಜ್ಜಿ ಹೀಗೆ ಹೇಳಿದ್ದೇಕೆ?
ಟೀಂ ಇಂಡಿಯಾ ಈ ಹಿಂದೆ ಆಸ್ಟ್ರೇಲಿಯಾದ ಮೇಲೆ ಗೆಲುವಿನ ಸವಾರಿ ಮಾಡಿ ಇದೀಗ ನ್ಯೂಜಿಲ್ಯಾಂಡ್ ಮೇಲೆ ತನ್ನ ಪಾರುಪತ್ಯವನ್ನು ಮೆರೆದಿದ್ದು ಈ ಮಧ್ಯೆ ಟೀಂ ಇಂಡಿಯಾದ ಮಾಜಿ ಹಿರಿಯ ಸ್ಪಿನ್ನರ್ ಹರ್ಭಜನ್...

Published On :
ಟೀಂ ಇಂಡಿಯಾ ಈ ಹಿಂದೆ ಆಸ್ಟ್ರೇಲಿಯಾದ ಮೇಲೆ ಗೆಲುವಿನ ಸವಾರಿ ಮಾಡಿ ಇದೀಗ ನ್ಯೂಜಿಲ್ಯಾಂಡ್ ಮೇಲೆ ತನ್ನ ಪಾರುಪತ್ಯವನ್ನು ಮೆರೆದಿದ್ದು ಈ ಮಧ್ಯೆ ಟೀಂ ಇಂಡಿಯಾದ ಮಾಜಿ ಹಿರಿಯ ಸ್ಪಿನ್ನರ್ ಹರ್ಭಜನ್ ಸಿಂಗ್ ಆಸ್ಟ್ರೇಲಿಯಾಗೆ ಬಿಸಿ ಮುಟ್ಟಿಸಿದ್ದಾರೆ.
ಆಸ್ಟ್ರೇಲಿಯಾ ವಿರುದ್ಧ ಏಕದಿನ ಸರಣಿ ಗೆದ್ದ ಬಳಿಕ ಇದೀಗ ನ್ಯೂಜಿಲ್ಯಾಂಡ್ ವಿರುದ್ಧವೂ ಟೀಂ ಇಂಡಿಯಾ ಏಕದಿನ ಸರಣಿ ಗೆದ್ದು ದಾಖಲೆ ಬರೆದಿದೆ. ಇನ್ನು ಆಸ್ಟ್ರೇಲಿಯಾಗಿಂತ ನ್ಯೂಜಿಲ್ಯಾಂಡ್ ಉತ್ತಮ ತಂಡ ಎಂದು ಹರ್ಭಜನ್ ಸಿಂಗ್ ಹೇಳಿದ್ದಾರೆ.
ಟೀಂ ಇಂಡಿಯಾ ವಿರುದ್ಧ ಆಸ್ಟ್ರೇಲಿಯಾದಂತೆ ನ್ಯೂಜಿಲ್ಯಾಂಡ್ ಕಳಪೆ ಪ್ರದರ್ಶನ ತೋರಿಲ್ಲ. ಒಂದು ಮಟ್ಟಿಗೆ ಟೀಂ ಇಂಡಿಯಾಗೆ ಸವಾಲಾಗಿ ಆಟವಾಡುತ್ತಿದೆ ಎಂದು ಹೇಳಿದರು.
ಬ್ಯಾಕ್ ಟು ಬ್ಯಾಕ್ ಸರಣಿಗಳನ್ನು ಗೆಲ್ಲುವ ಮೂಲಕ ಉತ್ತಮ ಲಯದಲ್ಲಿರುವ ಟೀಂ ಇಂಡಿಯಾ ಮುಂಬರುವ ವಿಶ್ವಕಪ್ ಟೂರ್ನಿಯಲ್ಲಿ ಗೆಲ್ಲುವ ಫೆವರಿಟ್ ತಂಡ ಎಂದು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Cricketಕ್ರಿಕೆಟ್ಆಸ್ಟ್ರೇಲಿಯಾಟೀಂ ಇಂಡಿಯಾAustraliaTeam IndiaNew ZealandHarbhajan Singhಹರ್ಭಜನ್ ಸಿಂಗ್ನ್ಯೂಜಿಲ್ಯಾಂಡ್
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


