ಪಾಕ್ ನಾಯಕ ಸೆಡ್ಜಿಂಗ್ ಹೇಗೆ ಮಾಡಬೇಕು ಎಂಬುದನ್ನು ರಿಷಬ್ ಪಂತ್‌ರಿಂದ ಕಲಿಯಬೇಕು!
ಪಾಕ್ ನಾಯಕ ಸರ್ಫರಾಜ್ ಅಹ್ಮದ್ ಸೆಡ್ಜಿಂಗ್ ಮಾಡುವ ಭರದಲ್ಲಿ ದಕ್ಷಿಣ ಆಫ್ರಿಕಾದ ಆಂಡಿಲೆಯನ್ನು 'ಲೋ ಕರಿಯಾ' ಎಂದು ಹೇಳಿ ಇದೀಗ ಕ್ರಿಕೆಟ್ ದಿಗ್ಗಜರ ಕೆಂಗಣ್ಣಿಗೆ...

Published On :
ಪಾಕ್ ನಾಯಕ ಸರ್ಫರಾಜ್ ಅಹ್ಮದ್ ಸೆಡ್ಜಿಂಗ್ ಮಾಡುವ ಭರದಲ್ಲಿ ದಕ್ಷಿಣ ಆಫ್ರಿಕಾದ ಆಂಡಿಲೆಯನ್ನು 'ಲೋ ಕರಿಯಾ' ಎಂದು ಹೇಳಿ ಇದೀಗ ಕ್ರಿಕೆಟ್ ದಿಗ್ಗಜರ ಕೆಂಗಣ್ಣಿಗೆ ಗುರಿಯಾಗಿದ್ದು ಒಂದು ರೀತಿಯಲ್ಲಿ ಸರ್ಫರಾಜ್ ಅಹ್ಮದ್ ಸೆಡ್ಜಿಂಗ್ ಹೇಗೆ ಮಾಡಬೇಕು ಎಂಬುದನ್ನು ರಿಷಬ್ ಪಂತ್ ರಿಂದ ಕಲಿಯಬೇಕಿದೆ.
ಹೌದು ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ರಿಷಬ್ ಪಂತ್ ರನ್ನು ಆಸ್ಟ್ರೇಲಿಯಾ ನಾಯಕ ಟೀಮ್ ಪೈನ್ ನನ್ನ ಮಕ್ಕಳನ್ನು ನೋಡಿಕೊಳ್ಳುತ್ತೀಯಾ ನಾನು ನನ್ನ ಹೆಂಡಿತ ಜೊತೆ ಸಿನಿಮಾಗೆ ಹೋಗುತ್ತೇನೆ ಎಂದು ಹೇಳಿ ಸೆಡ್ಜಿಂಗ್ ಮಾಡಿದ್ದರು. ಇದಕ್ಕೆ ಪ್ರತಿಯಾಗಿ ರಿಷಬ್ ಪಂತ್ ತಾತ್ಕಾಲಿಕ ನಾಯಕ ಎಂದು ಹೇಳಿ ಟಿಮ್ ಪೈನ್ ಕಾಲೆಳೆದಿದ್ದರು. ಇದು ಉಭಯ ತಂಡಗಳ ಆಟಗಾರರು ಆರೋಗ್ಯಕರವಾಗಿ ಸೆಡ್ಜಿಂಗ್ ಮಾಡಿದ್ದರು.
ಆದರೆ ಪಾಕ್ ನಾಯಕ ವಿಕೆಟ್ ಬೀಳುತ್ತಿಲ್ಲ ಎಂಬ ಕೋಪಗೊಂಡು ಆಂಡಿಲೆರನ್ನು ಲೋ ಕರಿಯಾ, ನಿನ್ನ ಅಮ್ಮ ಎಲ್ಲಿ ಕುಳಿತ್ತಿದ್ದಾಳೆ. ಏನು ಪಾರ್ಥನೆ ಮಾಡಿ ಬಂದಿದ್ದೀಯ ಎಂದು ಹೇಳುವ ಮೂಲಕ ಜನಾಂಗೀಯವಾಗಿ ನಿಂದನೆ ಮಾಡಿದ್ದರು. ಇದು ಕ್ರಿಕೆಟ್ ವಲಯದಲ್ಲಿ ಸಂಚಲನ ಮೂಡಿಸಿತ್ತು. ತಮ್ಮ ವಿರುದ್ಧ ಟೀಕೆಗಳು ವ್ಯಕ್ತವಾಗುತ್ತಿದ್ದಂತೆ ಸರ್ಫರಾಜ್ ಅಹ್ಮದ್ ಸಾರ್ವಜನಿಕವಾಗಿ ಕ್ಷಮೆಯಾಚಿಸಿದ್ದು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Pakistanಪಾಕಿಸ್ತಾನSledgingRishabh PantCricket Offbeatಕ್ರಿಕೆಟ್ ಸ್ವಾರಸ್ಯSarfraz Ahmedರಿಷಬ್ ಪಂತ್ಸರ್ಫರಾಜ್ ಅಹ್ಮದ್Andile Phehlukwayoಆಂಡಿಲೆಸೆಡ್ಜಿಂಗ್
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


