ಕ್ರಿಕೆಟ್

ನ್ಯೂಜಿಲ್ಯಾಂಡ್ ನಲ್ಲಿ ನೂತನ ದಾಖಲೆ: ಅತಿ ವೇಗದಲ್ಲಿ ಏಕದಿನ ಪಂದ್ಯಗಳ 100 ವಿಕೆಟ್ ಪಡೆದ ಶಮಿ!

ನ್ಯೂಜಿಲೆಂಡ್ ನಲ್ಲಿ ನಡೆಯುತ್ತಿರುವ ಪ್ರವಾಸಿ ಟೀಂ ಇಂಡಿಯಾ ಹಾಗೂ ನ್ಯೂಜಿಲೆಂಡ್ ವಿರುದ್ಧದ ಏಕದಿನ ಪಂದ್ಯದಲ್ಲಿ ಭಾರತ ಬೌಲರ್ ಮೊಹಮ್ಮದ್ ಶಮಿ ನೂತನ ದಾಖಲೆ ನಿರ್ಮಿಸಿದ್ದಾರೆ.

ನ್ಯೂಜಿಲ್ಯಾಂಡ್ ನಲ್ಲಿ ನೂತನ ದಾಖಲೆ: ಅತಿ ವೇಗದಲ್ಲಿ ಏಕದಿನ ಪಂದ್ಯಗಳ 100 ವಿಕೆಟ್ ಪಡೆದ ಶಮಿ!
ಮೊಹಮ್ಮದ್ ಶಮಿ
Published On :
ನೇಪಿಯರ್: ನ್ಯೂಜಿಲೆಂಡ್ ನಲ್ಲಿ ನಡೆಯುತ್ತಿರುವ ಪ್ರವಾಸಿ ಟೀಂ ಇಂಡಿಯಾ ಹಾಗೂ ನ್ಯೂಜಿಲೆಂಡ್ ವಿರುದ್ಧದ ಏಕದಿನ ಪಂದ್ಯದಲ್ಲಿ ಭಾರತ ಬೌಲರ್ ಮೊಹಮ್ಮದ್ ಶಮಿ ನೂತನ ದಾಖಲೆ ನಿರ್ಮಿಸಿದ್ದಾರೆ. ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್ ನಲ್ಲಿ ಅತಿ ವೇಗವಾಗಿ 100 ವಿಕೆಟ್ ಪಡೆದು ಅವರು ಸಾಧನೆ ಮಾಡಿದ್ದಾರೆ.
ಶಮಿ ಐವತ್ತು ಓವರ್ ಗಳ ಮಾದರಿ ಕ್ರಿಕೆಟ್ ನಲ್ಲಿ 56ನೇ ಪಂದ್ಯವಾಡುತ್ತಿದ್ದಾರೆ. ನ್ಯೂಜಿಲೆಂಡ್ ಪ್ರಾರಂಭಿಕ ಆಟಗಾರ ಮಾರ್ಟಿನ್ ಅವರ ವಿಕೆಟ್ ಪಡೆಯುವುದರೊಡನೆ ಶಮಿ 100 ವಿಕೆಟ್ ಗುರಿ ಪೂರೈಸಿದ್ದಾರೆ.
ಮ್ಯಾಕ್ಲೀನ್ ಪಾರ್ಕ್ ನಲ್ಲಿ ನಡೆದ ಪಂದ್ಯದಲ್ಲಿ 28 ವರ್ಷದ ಶಮಿ ಸೀಮಿತ ಓವರುಗಳ ಕ್ರಿಕೆಟ್ ನಲ್ಲಿ ಉತ್ತಮ ಪ್ರದರ್ಶನವನ್ನು ಮುಂದುವರಿಸಿದ್ದಾರೆ. ಶಮಿ ಇದಕ್ಕೆ ಹಿಂದೆ ನಡೆದಿದ್ದ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಕ್ರಿಕೆಟ್ ನಲ್ಲಿ ಸಹ ಉತ್ತಮ ಪ್ರದರ್ಶನ ನೀಡಿ ಗಮನ ಸೆಳೆದಿದ್ದರು.
ಶಮಿಗೆ ಮೊದಲು ಇರ್ಫಾನ್ ಪಠಾಣ್ ಅವರು 59 ಏಕದಿನ ಪಂದ್ಯಗಳಲ್ಲಿ 100 ವಿಕೆಟ್ ಪಡೆದ ದಾಖಲೆ ಹೊಂದಿದ್ದರು.ಇನ್ನುಳಿದಂತೆ ಜಹೀರ್ ಖಾನ್ (65 ಪಂದ್ಯಗಳು), ಅಜಿತ್ ಅಗರ್ಕರ್ (67) ಮತ್ತು ಜಾವಗಲ್ ಶ್ರೀನಾಥ್ (68) ವೇಗದ ಬೌಲರ್ ಗಳಾಗಿದ್ದಾರೆ..

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.