ಕ್ರಿಕೆಟ್

ಮೊದಲ ಏಕದಿನ: ಕುಲದೀಪ್ ಮಾರಕ ಬೌಲಿಂಗ್, ಟೀಂ ಇಂಡಿಯಗೆ 158 ರನ್ ಟಾರ್ಗೆಟ್

ನ್ಯೂಜಿಲೆಂಡ್ ನಲ್ಲಿ ನಡೆಯುತ್ತಿರುವ ಭಾರತ-ನ್ಯೂಜಿಲೆಂಡ್ ನಡುವಿನ ಪ್ರಥಮ ಏಕದಿನ ಹಣಾಹಣಿಯಲ್ಲಿ ಅತಿಥೇಯ ನ್ಯೂಜಿಲೆಂಡ್ 157 ರನ್ ಗಳ ಅಲ್ಪ ಮೊತ್ತಕ್ಕೆ ಆಲೌಟ್ ಆಗಿದೆ.

ಮೊದಲ ಏಕದಿನ: ಕುಲದೀಪ್ ಮಾರಕ ಬೌಲಿಂಗ್, ಟೀಂ ಇಂಡಿಯಗೆ 158 ರನ್ ಟಾರ್ಗೆಟ್
ಮೊದಲ ಏಕದಿನ: ಕುಲದೀಪ್ ಮಾರಕ ಬೌಲಿಂಗ್, ಟೀಂ ಇಂಡಿಯಗೆ 158 ರನ್ ಟಾರ್ಗೆಟ್
Published On :
ನೇಪಿಯರ್: ನ್ಯೂಜಿಲೆಂಡ್ ನಲ್ಲಿ ನಡೆಯುತ್ತಿರುವ ಭಾರತ-ನ್ಯೂಜಿಲೆಂಡ್ ನಡುವಿನ   ಪ್ರಥಮ ಏಕದಿನ ಹಣಾಹಣಿಯಲ್ಲಿ ಅತಿಥೇಯ ನ್ಯೂಜಿಲೆಂಡ್ 157 ರನ್ ಗಳ ಅಲ್ಪ ಮೊತ್ತಕ್ಕೆ ಆಲೌಟ್ ಆಗಿದೆ. ಭಾರತಕ್ಕೆ ಗೆಲ್ಲಲು 158 ರನ್ ಬೇಕಿದೆ.
ಟಾಸ್ ಗೆದ್ದು ಬ್ಯಾಟಿಂಗ್ ನಡೆಸಿದ್ದ ನ್ಯೂಜಿಲೆಂಡ್ ಗೆ ಪಂದ್ಯದ ಪ್ರಾರಂಭದಲ್ಲೇ ಮೊಹಮ್ಮದ್ ಶಮಿ ಎರಡು ವಿಕೆಟ್ ಕಬಳಿಸಿ ಆಘಾತ ನಿಡಿದ್ದರು.
ಪ್ರಾರಂಭದಲ್ಲಿ ಕ್ರೀಸ್ ಗಿಳಿದಿದ್ದ  ಮಾರ್ಟಿನ್ ಗಪ್ಟಿಲ್ (5) ಹಾಗೂ ಕಾಲಿನ್ ಮನ್ರೊ (8) ಔಟ್ ಆದ ಬಳಿಕ ಜತೆಯಾದ ನಾಯಕ ಕೇನ್ ವಿಲಿಯಮ್ಸನ್ ಹಾಗೂ ರಾಸ್ ಟೇಲರ್ ಜೋಡಿ ಸಹ ಹೆಚ್ಚು ಕಾಲ ಉಳಿಯಲಿಲ್ಲ ಟೇಲರ್ 24 ರನ್ ಗಳಿಸುವಷ್ಟರಲ್ಲಿ ಚಹಲ್ ಗೆ ಬಲಿಯಾದರು.ಅಲ್ಲದೆ ವಿಕೆಟ್ ಕೀಪರ್ ಆಗಿರುವ  ಟಾಮ್‌ ಲೇಥಮ್‌ (11) ಸಹ ಚಹಲ್ ಮಾರಕ ದಾಳಿಗೆ ತುತ್ತಾಗಿ ಪೆವಿಲಿಯನ್ ಹಾದಿ ಹಿಡಿದರು.
ಇನ್ನು  ಹೆನ್ರಿ ನಿಕೋಲಸ್‌ಗೂ (12), ಮಿಚೆಲ್‌ ಸ್ಯಾಂಟ್ನರ್‌ (14) , ವಿಲಿಯಮ್ಸನ್ (64)ಡೌಗ್ ಬ್ರೇಸ್‌ವೆಲ್‌ (7), ಲೂಕಿ ಫೆರ್ಗ್ಯೂಸನ್ (0), ಟ್ರೆಂಟ್ ಬೌಲ್ಟ್ (1) ಟಿಮ್ ಸೌಥಿ (9) ರನ್ ಗಳಿಸಿದ್ದರು.
ನಾಯಕ ವಿಲಿಯಮ್ಸ್ ಹೊರತು ಇನ್ನಾರೂ ಉತ್ತಮ ರನ್ ಸಾಧನೆ ಮಾಡುವಲ್ಲಿ ವಿಫಲವಾಗಿದ್ದು ತಂಡಕ್ಕೆ ಬೃಹತ್ ಮೊತ್ತ ಕಲೆಹಾಕುವಲ್ಲಿ ಎರವಾಗಿತ್ತು.
ಭಾರತ ಪರ  ಕುಲ್‌ದೀಪ್ ನಾಲ್ಕು ವಿಕೆಟ್ ಗಳಿಸಿ ಸಾಧನೆ ಮಾಡಿದರೆ ಶಮಿ ಮೂರು, ಚಹಲ್ ಎರಡು, ಕೇದಾರ್ ಜಾಧವ್ ಒಂದು ವಿಕೆಟ್ ಗಳಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.