ಕ್ರಿಕೆಟ್

ಆಸಿಸ್ ಮಾಧ್ಯಮಗಳ ಅಪಮಾನಕ್ಕೆ ತಿರುಗೇಟು; ಸರಣಿ ಶ್ರೇಷ್ಠ ಪ್ರಶಸ್ತಿ ಗೆದ್ದ ಭಾರತದ ಮೊದಲ ಹಿರಿಯ ಆಟಗಾರ ಧೋನಿ

2ನೇ ಏಕದಿನ ಪಂದ್ಯದಲ್ಲಿ ಬಳಲಿ ಕ್ರೀಸ್ ನಲ್ಲಿ ಕುಳಿತಿದ್ದ ಧೋನಿಯ ಫೋಟೋವನ್ನು ಅಪ್ಲೋಡ್ ಮಾಡಿ ಧೋನಿ ಧಣಿದಿದ್ದಾರೆ. ಅವರಿಗೆ ವಯಸ್ಸಾಗಿದೆ ಎಂದು ಟೀಕಿಸಿದ್ದ ಆಸಿಸ್ ಮಾಧ್ಯಮಗಳಿಗೆ ಧೋನಿ ಮತ್ತೆ ಮುಟ್ಟಿ ನೋಡಿಕೊಳ್ಳುವಂತೆ ತಿರುಗೇಟು ನೀಡಿದ್ದಾರೆ.

ಆಸಿಸ್ ಮಾಧ್ಯಮಗಳ ಅಪಮಾನಕ್ಕೆ ತಿರುಗೇಟು; ಸರಣಿ ಶ್ರೇಷ್ಠ ಪ್ರಶಸ್ತಿ ಗೆದ್ದ ಭಾರತದ ಮೊದಲ ಹಿರಿಯ ಆಟಗಾರ ಧೋನಿ
ಸಂಗ್ರಹ ಚಿತ್ರ
Published On :
ಮೆಲ್ಬೋರ್ನ್: 2ನೇ ಏಕದಿನ ಪಂದ್ಯದಲ್ಲಿ ಬಳಲಿ ಕ್ರೀಸ್ ನಲ್ಲಿ ಕುಳಿತಿದ್ದ ಧೋನಿಯ ಫೋಟೋವನ್ನು ಅಪ್ಲೋಡ್ ಮಾಡಿ ಧೋನಿ ಧಣಿದಿದ್ದಾರೆ. ಅವರಿಗೆ ವಯಸ್ಸಾಗಿದೆ ಎಂದು ಟೀಕಿಸಿದ್ದ ಆಸಿಸ್ ಮಾಧ್ಯಮಗಳಿಗೆ ಧೋನಿ ಮತ್ತೆ ಮುಟ್ಟಿ ನೋಡಿಕೊಳ್ಳುವಂತೆ ತಿರುಗೇಟು ನೀಡಿದ್ದಾರೆ. 
ಹೌದು.. ಏಕದಿನ ಸರಣಿಯಲ್ಲಿ ಆಸ್ಟ್ರೇಲಿಯಾ ಬೌಲರ್ ಗಳ ನಿದ್ದೆಗೆಡಿಸಿದ್ದ ಭಾರತದ ಮಹೇಂದ್ರ ಸಿಂಗ್ ಧೋನಿ ತಮ್ಮ ವಯಸ್ಸಿನಲ್ಲೂ ದಾಖಲೆ ನಿರ್ಮಾಣ ಮಾಡಿದ್ದು, ಸರಣಿ ಶ್ರೇಷ್ಠ ಪ್ರಶಸ್ತಿ ಗೆದ್ದ ಭಾರತದ ಹಿರಿಯ ಆಟಗಾರ ಎಂಬ ಕೀರ್ತಿಗೆ ಭಾಜನರಾಗಿದ್ದಾರೆ. ಹೌದು ಧೋನಿಗೆ ಈಗ 37 ವರ್ಷ 195ದಿನ ವಯಸ್ಸಾಗಿದ್ದು, ಆ ಮೂಲಕ ಸರಣಿ ಶ್ರೇಷ್ಠ ಪ್ರಶಸ್ತಿ ಗೆದ್ದ ಭಾರತದ ಹಿರಿಯ ಆಟಗಾರ ಎಂಬ ಕೀರ್ತಿಗೆ ಭಾಜನರಾಗಿದ್ದಾರೆ.
ಈ ಹಿಂದೆ ಅಂದರೆ 1987ರಲ್ಲಿ ಭಾರತದ ಕ್ರಿಕೆಟ್ ದಂತಕಥೆ ಸುನಿಲ್ ಗವಾಸ್ಕರ್ ಅವರು ಶ್ರೀಲಂಕಾ ವಿರುದ್ಧದ ಸರಣಿಯಲ್ಲಿ ಸರಣಿ ಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿ, ಸರಣಿ ಶ್ರೇಷ್ಠ ಪ್ರಶಸ್ತಿ ಗೆದ್ದ ಭಾರತದ ಹಿರಿಯ ಆಟಗಾರ ಎಂಬ ಕೀರ್ತಿಗೆ ಭಾಜನರಾಗಿದ್ದರು. ಆಗ ಸನ್ನಿಗೆ 37 ವರ್ಷ 191ದಿನ ವಯಸ್ಸಾಗಿತ್ತು. ಇದೀಗ ಈ ದಾಖಲೆಯನ್ನು ಧೋನಿ ಹಿಂದಿಕ್ಕಿದ್ದಾರೆ.
ಅಲ್ಲದೆ ಧೋನಿಗೆ ಇದು ಏಕದಿನ ಕ್ರಿಕೆಟ್ ವೃತ್ತಿ ಜೀವನದ 7ನೇ ಸರಣಿ ಶ್ರೇಷ್ಠ ಪ್ರಶಸ್ತಿಯಾಗಿದ್ದು, ಆ ಮೂಲಕ ಇಷ್ಟೇ ಪ್ರಮಾಣದ ಸರಣಿ ಶ್ರೇಷ್ಠ ಪ್ರಶಸ್ತಿ ಗೆದ್ದ ಭಾರತದ ಮಾಜಿ ನಾಯಕ ಸೌರವ್ ಗಂಗೂಲಿ ಹಾಗೂ ಯುವಿ ರಾಜ್ ಸಿಂಗ್ ಅವರ ದಾಖಲೆಯನ್ನು ಧೋನಿ ಸರಿಗಟ್ಟಿದ್ದಾರೆ. ಅಲ್ಲದೆ ಅತೀ ಹೆಚ್ಚು ಸರಣಿ ಶ್ರೇಷ್ಠ ಪ್ರಶಸ್ತಿ ಗೆದ್ದ ಭಾರತೀಯ ಆಟಗಾರರ ಪಟ್ಟಿಯಲ್ಲಿ ಧೋನಿ, ಕೊಹ್ಲಿ, ಗಂಗೂಲಿ, ಯುವರಾಜ್ ಸಿಂಗ್ ರೊಂದಿಗೆ ಜಂಟಿ ಎರಡನೇ ಸ್ಥಾನಕ್ಕೇರಿದ್ದಾರೆ. ಅಲ್ಲದೆ ಅತೀ ಹೆಚ್ಚು ಸರಣಿ ಶ್ರೇಷ್ಠ ಪ್ರಶಸ್ತಿಗೆದ್ದ ವಿಶ್ವದ ಆಟಗಾರರ ಪಟ್ಟಿಯಲ್ಲಿ ಕೊಹ್ಲಿ, ಗಂಗೂಲಿ, ಯುವರಾಜ್ ಸಿಂಗ್, ಹಶೀಂ ಆಮ್ಲಾ, ವಿವಿಯನ್ ರಿಚರ್ಜ್ಸ್ ಮತ್ತು ಎಬಿ ಡಿವಿಲಿಯರ್ಸ್ ರೊಂದಿಗೆ ಜಂಟಿ ನಾಲ್ಕನೇ ಸ್ಥಾನಕ್ಕೇರಿದ್ದಾರೆ.
ಇನ್ನು ಈ ಎರಡೂ ಪಟ್ಟಿಯಲ್ಲಿ ಭಾರತದ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅಗ್ರ ಸ್ಥಾನಿಯಾಗಿದ್ದು, 1989 to 2012ರವರೆಗೂ ಸಚಿನ್ 15 ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.