ಧೋನಿಯ ಸಮಯೋಚಿತ ಆಟ: ರೋಚಕ ಹಂತದತ್ತ ಭಾರತ-ಆಸ್ಟ್ರೇಲಿಯಾ 3 ನೇ ಏಕದಿನ ಪಂದ್ಯ
ಆಸ್ಟ್ರೇಲಿಯಾ ವಿರುದ್ಧದ 2 ನೇ ಏಕದಿನ ಪಂದ್ಯವನ್ನು ಗೆದ್ದು ಸರಣಿ ಸಮಬಲ ಮಾಡಿಕೊಂಡಿದ್ದ ಭಾರತದ ಬ್ಯಾಟ್ಸ್ ಮನ್ ಗಳು 3 ನೇ ಏಕದಿನ ಪಂದ್ಯದಲ್ಲಿ ಆಸ್ಟ್ರೇಲಿಯಾ ಬೌಲರ್ ಗಳನ್ನು ಎದುರಿಸಲು ಪರದಾಡುತ್ತಿದ್ದಾರೆ.

Published On :
ಮೆಲ್ಬೋರ್ನ್: 231 ರನ್ ಗಳ ಗುರಿ ಬೆನ್ನಟ್ಟಿದ್ದ ಭಾರತಕ್ಕೆ ಮೊದಲ 16 ಓವರ್ ಗಳಲ್ಲಿ 59 ರನ್ ಗಳಿಸಿ 2 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. 34 ಓವರ್ ಗಳಿಗೆ 129 ರನ್ ಗಳಿಸಿ 3 ನೇ ವಿಕೆಟ್ ಕಳೆದುಕೊಂಡಿದ್ದ ಭಾರತ ಸ್ವಲ್ಪ ಸಮಯ ರನ್ ಪೇರಿಸಲು ಪರದಾಡುತ್ತಿತ್ತು. ಈ ಹಂತದಲ್ಲಿ ನಂಬಿಕಸ್ಥ ಬ್ಯಾಟ್ಸ್ ಮನ್ ವಿರಾಟ್ ಕೊಹ್ಲಿ ಸಹ 46 ರನ್ ಗಳಿಸಿ ರಿಚರ್ಡ್ ಸನ್ ಗೆ ವಿಕೆಟ್ ಒಪ್ಪಿಸಿ ಪೆವಿಲಿಯನ್ ನತ್ತ ನಡೆದರು.
ಆದರೆ ಧೋನಿಯ ಸಮಯೋಚಿತ ಆಟದಿಂದ ಭಾರತದ ಗೆಲುವಿನ ಆಸೆ ಜೀವಂತವಾಗಿದ್ದು, ರೋಚಕ ಹಂತ ತಲುಪಿದೆ ಧೋನಿ ಮೇಲೆ ಈಗ ಒತ್ತಡ ಹೆಚ್ಚಿದ್ದು, ಮತ್ತೆ ಭಾರತದ ಪಾಲಿಗೆ ಆಪತ್ಬಾಂಧನವಾಗುತ್ತಾರೆಯೇ ಎಂಬ ಕುತೂಹಲ ಮೂಡಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


