ತಂಡದ ಒಳಿತಿಗೆ ಯಾವುದೇ ಕ್ರಮಾಂಕದಲ್ಲೂ ಆಡಲು ಸಿದ್ಧ: ಎಂಎಸ್ ಧೋನಿ
ತಂಡದ ಒಳಿತಿಗೆ, ಸಂದರ್ಭಕ್ಕನುಸಾರವಾಗಿ ಯಾವುದೇ ಕ್ರಮಾಂಕದಲ್ಲೂ ಆಡಲು ತಾವು ಸಿದ್ಧ ಮೂರನೇ ಪಂದ್ಯದ ಮ್ಯಾಚ್ ವಿನ್ನರ್ ಮಹೇಂದ್ರ ಸಿಂಗ್ ಧೋನಿ ಹೇಳಿದ್ದಾರೆ.

Published On :
ಮೆಲ್ಬೋರ್ನ್: ತಂಡದ ಒಳಿತಿಗೆ, ಸಂದರ್ಭಕ್ಕನುಸಾರವಾಗಿ ಯಾವುದೇ ಕ್ರಮಾಂಕದಲ್ಲೂ ಆಡಲು ತಾವು ಸಿದ್ಧ ಮೂರನೇ ಪಂದ್ಯದ ಮ್ಯಾಚ್ ವಿನ್ನರ್ ಮಹೇಂದ್ರ ಸಿಂಗ್ ಧೋನಿ ಹೇಳಿದ್ದಾರೆ.
ಇಂದು ಮೆಲ್ಬೋರ್ನ್ ಕ್ರೀಡಾಂಗಣದಲ್ಲಿ ಆಸ್ಟ್ರೇಲಿಯಾ ವಿರುದ್ಧ ನಡೆದ ಅಂತಿಮ ಮತ್ತು ನಿರ್ಣಾಯಕ ಏಕದಿನ ಪಂದ್ಯದಲ್ಲಿ ಅಮೋಘ ಪ್ರದರ್ಶನದ ಮೂಲಕ ತಂಡದ ಗೆಲುವಿಗೆ ಕಾರಣರಾದ ಧೋನಿ ಪಂದ್ಯ ಮುಕ್ತಾಯದ ಬಳಿಕ ಮಾತನಾಡಿದರು. ಈ ಹಿಂದೆ 6ನೇ ಕ್ರಮಾಂಕದಲ್ಲಿ ಆಡುತ್ತಿದ್ದ ಧೋನಿ ಅವರನ್ನು ನಾಯಕ ವಿರಾಟ್ ಕೊಹ್ಲಿ 4ನೇ ಕ್ರಮಾಂಕದಲ್ಲಿ ಆಡುವಂತೆ ಭಡ್ತಿ ನೀಡಿದ್ದರು. ಅದರ ಫಲವೇನೋ ಎಂಬಂತೆ ಧೋನಿ, ತಂಡದ ಬ್ಯಾಟಿಂಗ್ ಗೆ ಆಧಾರ ಸ್ಥಂಭವಾಗಿ ನಿಂತರು. ಒಟ್ಟು 114 ಎಸೆತಗಳನ್ನು ಎದುರಿಸಿದ ಧೋನಿ 6 ಬೌಂಡರಿಗಳ ಸಮೇತ ಅಜೇಯ 87 ರನ್ ಸಿಡಿಸಿದರು.
ಅಲ್ಲದೆ ಸ್ಲೋ ಪಿಚ್ ನಲ್ಲಿ ತಾಳ್ಮೆಯ ಆಟದ ಪ್ರಾಮುಖ್ಯತೆಯನ್ನು ಇಡೀ ತಂಡಕ್ಕೆ ಪರಿಚಯಿಸಿದರು. ಪಂದ್ಯ ಮುಕ್ತಾಯದ ಬಳಿಕ ಪ್ರಶಸ್ತಿ ಪ್ರದಾನದ ವೇಳೆ ಮಾತನಾಡಿದ ಧೋನಿ, ಈ ವೇಳೆ ಯಾವ ಕ್ರಮಾಂಕದಲ್ಲಿ ಆಡಲು ಇಚ್ಛಿಸುತ್ತೀರಿ ಎಂಬ ನಿರೂಪಕರ ಪ್ರಶ್ನೆಗೆ ಉತ್ತರಿಸಿದರು. 'ತಂಡದಲ್ಲಿ ಯಾವುದೇ ಕ್ರಮಾಂಕದಲ್ಲೂ ಆಡಲು ನಾನು ಸಿದ್ಧ. ತಂಡದ ಅಗತ್ಯತೆಗೆ ಅನುಗುಣವಾಗಿ ಯಾವುದೇ ಕ್ರಮಾಂಕದಲ್ಲಿ ಬೇಕಾದರೂ ನಾನು ಕಣಕ್ಕಿಳಿಯುತ್ತೇನೆ' ಎಂದು ಹೇಳಿದರು.
4 ಅಥವಾ 6 ಯಾವುದೇ ಕ್ರಮಾಂಕವಿರಲಿ ನಾನು ಆಡಲು ಸಿದ್ಧ. ತಂಡಕ್ಕಾಗಿ 14 ವರ್ಷಗಳ ಕಾಲ ಆಡಿದ ಬಳಿಕವೂ ನಾನು 6ನೇ ಕ್ರಮಾಂಕದಲ್ಲಿ ಆಡಲಾರೆ ಎಂದು ಹೇಳಲು ಸಾಧ್ಯವಿಲ್ಲ. ನೇ ಕ್ರಮಾಂಕದಲ್ಲೂ ಆಡಲು ನಾನು ಇಷ್ಟ ಪಡುತ್ತೇನೆ ಎಂದು ಧೋನಿ ಹೇಳಿದ್ದಾರೆ.
ಮೆಲ್ಬೋರ್ನ್ ಪಿಚ್ ಸ್ಲೋ ಇರುತ್ತದೆ ಎಂದು ಮೊದಲ ತಿಳಿದಿತ್ತು. ಹೀಗಾಗಿಯೇ ಇದಕ್ಕೆ ತಕ್ಕಂತೆ ನಾವು ಗೇಮ್ ಪ್ಲಾನ್ ರೂಪಿಸಿದ್ದೆವು. ಇಲ್ಲಿ ನಿಮ್ಮ ಇಚ್ಚೆಗನುಗುಣವಾಗಿ ಚೆಂಡನ್ನು ಬಾರಿಸುವ ಅವಕಾಶ ಸಿಗುವುದಿಲ್ಲ. ಅವಕಾಶ ಸಿಕ್ಕಾಗ ಬಳಸಿಕೊಳ್ಳಬೇಕು. ಆದರೆ ಕೇದಾರ್ ಜಾದವ್ ರಿಂದ ತಮಗೆ ಅತ್ಯುತ್ತಮ ಸಾಥ್ ದೊರೆಯಿತು ಎಂದು ಧೋನಿ ಜಾದವ್ ರನ್ನು ಹೊಗಳಿದರು.
ಇನ್ನು ಆಸಿಸ್ ವಿರುದ್ಧ ಮೂರೂ ಪಂದ್ಯಗಳಲ್ಲೂ ಆರ್ಧಶತಕ ಸಿಡಿಸಿದ್ದ ಧೋನಿ ಅರ್ಹವಾಗಿಯೇ ಸರಣಿ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


