ಟಿ20 ಇತಿಹಾಸದಲ್ಲೇ ಮೊದಲು: ಓವರ್‌ನ 7ನೇ ಎಸೆತದಲ್ಲಿ ಔಟಾದ ನತದೃಷ್ಟ ಬ್ಯಾಟ್ಸ್‌ಮನ್!
ಮೈದಾನದ ಅಂಪೈರ್ ಮಾಡಿದ ಎಡವಟ್ಟಿನಿಂದಾಗಿ ಓವರ್ ನ 7ನೇ ಎಸೆತದಲ್ಲಿ ಬ್ಯಾಟ್ಸ್ ಮನ್ ಔಟ್ ಆಗಿರುವ ಘಟನೆ ಆಸ್ಟ್ರೇಲಿಯಾದ ಟಿ20 ಬಿಗ್ ಬ್ಯಾಶ್ ಲೀಗ್ ನಲ್ಲಿ ನಡೆದಿದೆ.

Published On :
ಪರ್ತ್: ಮೈದಾನದ ಅಂಪೈರ್ ಮಾಡಿದ ಎಡವಟ್ಟಿನಿಂದಾಗಿ ಓವರ್ ನ 7ನೇ ಎಸೆತದಲ್ಲಿ ಬ್ಯಾಟ್ಸ್ ಮನ್ ಔಟ್ ಆಗಿರುವ ಘಟನೆ ಆಸ್ಟ್ರೇಲಿಯಾದ ಟಿ20 ಬಿಗ್ ಬ್ಯಾಶ್ ಲೀಗ್ ನಲ್ಲಿ ನಡೆದಿದೆ.
ಹೌದು ಪರ್ತ್ ಸ್ಕೋಚರ್ಸ್ ಹಾಗೂ ಸಿಡ್ನಿ ಸಿಕ್ಸರ್ಸ್ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಪರ್ತ್ ತಂಡದ ಆರಂಭಿಕ ಆಟಗಾರ ಮೈಕೆಲ್ ಕ್ಲಿಂಗೆರ್ 2 ರನ್ ಗಳಿಸಿ ಔಟ್ ಆಗಿದ್ದಾರೆ. ಇದು ಅಂಪೈರ್ ಮಾಡಿದ ಎಡವಟ್ಟಿನಿಂದ.
ಒಂದು ಓವರ್ ನಲ್ಲಿ 6 ಎಸೆತಗಳು ಮಾತ್ರ ಇರುತ್ತದೆ. ಆದರೆ ಅಂಪೈರ್ ಎಸೆತಗಳನ್ನು ಲೆಕ್ಕ ಹಾಕುವುದರಲ್ಲಿ ತಪ್ಪು ಮಾಡಿದ್ದರಿಂದ ಬೌಲರ್ 7ನೇ ಎಸೆತ ಮಾಡಬೇಕಾಯಿತು. ವಿಪರ್ಯಾಸ ಎಂದರೆ ಅದೇ ಎಸೆತದಲ್ಲಿ ಮೈಕೆಲ್ ಅವರು ಒ ಕೇಫೆ ಅವರಿಗೆ ಕ್ಯಾಚ್ ನೀಡಿ ನಿರ್ಗಮಿಸಿದರು.
ಒಟ್ಟಿನಲ್ಲಿ ಅಂಪೈರ್ ಆರು ಎಸೆತಗಳಿಗೆ ಸರಿಯಾಗಿ ಓವರ್ ಎಂದು ಹೇಳಿದ್ದರೆ. ಕ್ಲಿಂಗೆರ್ ಔಟಾಗುತ್ತಿರಲಿಲ್ಲ ಎಂಬ ಮಾತುಗಳು ವ್ಯಕ್ತವಾಗಿದೆ.
ಇನ್ನು ಪಂದ್ಯದಲ್ಲಿ ಸಿಡ್ನಿ ಸಿಕ್ಸರ್ಸ್ 5 ವಿಕೆಟ್ ನಷ್ಟಕ್ಕೆ 177 ರನ್ ಸಿಡಿಸಿದ್ದರು, 178 ರನ್ ಗಳ ಗುರಿ ಬೆನ್ನಟ್ಟಿದ ಪರ್ತ್ ತಂಡ 3 ವಿಕೆಟ್ ನಷ್ಟಕ್ಕೆ 18.5ನೇ ಓವರ್ ನಲ್ಲಿ 178 ರನ್ ಸಿಡಿಸುವ ಮೂಲಕ ಗೆಲುವಿನ ನಗೆ ಬೀರಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
ಆಸ್ಟ್ರೇಲಿಯಾAustraliaBig Bash LeagueCricket Offbeatಕ್ರಿಕೆಟ್ ಸ್ವಾರಸ್ಯಬಿಗ್ ಬ್ಯಾಶ್ ಲೀಗ್Perth ScorchersMichael Klingerಪರ್ತ್ ಸ್ಕೋಚರ್ಸ್ಮೈಕೆಲ್ ಕ್ಲಿಂಗೆರ್
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


