ಶಂಕಾಸ್ಪದ ಬೌಲಿಂಗ್ ವಿವಾದದ ಸುಳಿಗೆ ಸಿಲುಕಿದ ಅಂಬಟಿ ರಾಯುಡು!
ಅಸಭ್ಯ ಹೇಳಿಕೆ ನೀಡಿ ನಿಷೇಧದ ಭೀತಿ ಎದುರಿಸುತ್ತಿರುವ ಹಾರ್ದಿಕ್ ಪಾಂಡ್ಯಾ ಮತ್ತು ಕೆಎಲ್ ರಾಹುಲ್ ಪ್ರಕರಣ ಹಸಿರಾಗಿರುವಂತೆಯೇ ಇದೀಗ ಮತ್ತೋರ್ವ ಟೀಂ ಇಂಡಿಯಾ ಆಟಗಾರ ವಿವಾದದ ಸುಳಿಗೆ ಸಿಲುಕಿದ್ದಾರೆ.

Published On :
ಸಿಡ್ನಿ: ಅಸಭ್ಯ ಹೇಳಿಕೆ ನೀಡಿ ನಿಷೇಧದ ಭೀತಿ ಎದುರಿಸುತ್ತಿರುವ ಹಾರ್ದಿಕ್ ಪಾಂಡ್ಯಾ ಮತ್ತು ಕೆಎಲ್ ರಾಹುಲ್ ಪ್ರಕರಣ ಹಸಿರಾಗಿರುವಂತೆಯೇ ಇದೀಗ ಮತ್ತೋರ್ವ ಟೀಂ ಇಂಡಿಯಾ ಆಟಗಾರ ವಿವಾದದ ಸುಳಿಗೆ ಸಿಲುಕಿದ್ದಾರೆ.
ಟೀಂ ಇಂಡಿಯಾ ಆಟಗಾರ ಅಂಬಟಿ ರಾಯುಡು ವಿರುದ್ಧ ಇದೀಗ ಶಂಕಾಸ್ಪದ ಬೌಲಿಂಗ್ ಶೈಲಿಯಂತಹ ಗಂಭೀರ ಆರೋಪ ಕೇಳಿಬಂದಿದ್ದು, ಆಸ್ಟ್ರೇಲಿಯಾ ವಿರುದ್ದ ಸಿಡ್ನಿಯಲ್ಲಿ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಆಸಿಸ್ ಬ್ಯಾಟಿಂಗ್ ವೇಳೆ ಎರಡು ಓವರ್ ಗಳನ್ನು ಎಸೆದಿದ್ದರು. ಇದೀಗ ರಾಯುಡು ಬೌಲಿಂಗ್ ಶೈಲಿಯ ಬಗ್ಗೆ ಐಸಿಸಿ ಮ್ಯಾಚ್ ರೆಫರಿ ಮತ್ತು ಇತರೆ ಅಧಿಕಾರಿಗಳು ಶಂಕೆ ವ್ಯಕ್ತಪಡಿಸಿದ್ದಾರೆ.
ಹೀಗಾಗಿ 33ರ ಹರೆಯದ ಅರೆಕಾಲಿಕ ಬೌಲರ್ ಆಗಿರುವ ರಾಯುಡು, ಮುಂದಿನ 14 ದಿನಗಳೊಳಗೆ ಪರೀಕ್ಷೆಗೆ ಒಳಗಾಗಬೇಕಿದೆ ಎಂದು ಐಸಿಸಿ ಪ್ರಕಟಣೆಯಲ್ಲಿ ತಿಳಿಸಿದೆ. ಹಾಗೊಂದು ವೇಳೆ ಬೌಲಿಂಗ್ ಆ್ಯಕ್ಷನ್ ನಲ್ಲಿ ತೊಂದರೆ ಕಂಡುಬಂದರೆ ಬೌಲಿಂಗ್ ಮಾಡುವುದರಿಂದ ಅಮಾನತುಗೊಳಿಸುವಗೊಳಿಸುವ ಸಾಧ್ಯತೆಯಿದೆ.
ಈಗಾಗಲೇ ದೇಶೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿರುವ ರಾಯುಡು ಏಕದಿನ ಕ್ರಿಕೆಟ್‌ನತ್ತ ಹೆಚ್ಚಿನ ಗಮನ ಹಾಯಿಸಿದ್ದಾರೆ. ಅಲ್ಲದೆ ಇದುವರೆಗೆ 46 ಏಕದಿನ ಹಾಗೂ ಆರು ಟ್ವೆಂಟಿ-20 ಪಂದ್ಯಗಳಲ್ಲಿ ದೇಶವನ್ನು ಪ್ರತಿನಿಧಿಸಿದ್ದಾರೆ. ಮುಂಬರುವ ವಿಶ್ವಕಪ್ ಹಿನ್ನಲೆಯಲ್ಲಿ ನಂ.4 ಸ್ಥಾನಕ್ಕೆ ರಾಯುಡು ಸೂಕ್ತ ಆಯ್ಕೆ ಎಂದು ನಾಯಕ ವಿರಾಟ್ ಕೊಹ್ಲಿ ಈ ಹಿಂದೆಯೇ ಸ್ಪಷ್ಟನೆ ನೀಡಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Cricketಕ್ರಿಕೆಟ್Team IndiaAmbati Rayuduಅಂಬಟಿ ರಾಯುಡುSydneyಸಿಡ್ನಿಶಂಕಾಸ್ಪದ ಬೌಲಿಂಗ್ ಶೈಲಿಟೀಮ್ ಇಂಡಿಯಾSuspect Bowling Action
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


