ಟೀಂ ಇಂಡಿಯಾ ಐತಿಹಾಸಿಕ ಸಾಧನೆ; ತಂಡದ ಆಟಗಾರರಿಗೆ ಬಿಸಿಸಿಐ ಭರ್ಜರಿ ಗಿಫ್ಟ್!
ಆಸೀಸ್ ನೆಲದಲ್ಲಿ ಕಾಂಗರೂಗಳನ್ನು ಬಗ್ಗು ಬಡಿಯುವ ಮೂಲಕ 71 ವರ್ಷಗಳ ಬಳಿಕ ಐತಿಹಾಸಿಕ ಸಾಧನೆ ಮಾಡಿರುವ ಟೀಂ ಇಂಡಿಯಾ ಆಟಗಾರರಿಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ)...

Published On :
ನವದೆಹಲಿ: ಆಸೀಸ್ ನೆಲದಲ್ಲಿ ಕಾಂಗರೂಗಳನ್ನು ಬಗ್ಗು ಬಡಿಯುವ ಮೂಲಕ 71 ವರ್ಷಗಳ ಬಳಿಕ ಐತಿಹಾಸಿಕ ಸಾಧನೆ ಮಾಡಿರುವ ಟೀಂ ಇಂಡಿಯಾ ಆಟಗಾರರಿಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಭರ್ಜರಿ ಗಿಫ್ಟ್ ನೀಡಿದೆ.
ಬಿಸಿಸಿಐ ವಿರಾಟ್ ಕೊಹ್ಲಿಗೆ ಪಡೆಗೆ ತಲಾ 15 ಲಕ್ಷ ರುಪಾಯಿ ಬಹುಮಾನ ಘೋಷಿಸಿದೆ. ಇನ್ನು ಕಾಯ್ದಿರಿಸಿದ ಆಟಗಾರರಿಗೆ ತಲಾ 7.5 ಲಕ್ಷ ರುಪಾಯಿ ಬಹುಮಾನ ಘೋಷಣೆ ಮಾಡಿದೆ.
ಇದೇ ವೇಳೆ ಟೀಂ ಇಂಡಿಯಾ ಕೋಚ್ ಗಳಿಗೂ ತಲಾ 25 ಲಕ್ಷ ರುಪಾಯಿ ಹಾಗೂ ನಾನ್ ಕೋಚಿಂಗ್ ಸಪೋರ್ಟ್ ಸಿಬ್ಬಂದಿಗೆ ಅವರ ಪ್ರೋ ರಾಟಾ ಪಗಾರಕ್ಕೆ ಸಮಾನವಾದ ಬಹುಮಾನವನ್ನು ಬಿಸಿಸಿಐ ಘೋಷಿಸಿದೆ.
71 ವರ್ಷಗಳಲ್ಲಿ ಟೀಂ ಇಂಡಿಯಾ ಆಸ್ಟ್ರೇಲಿಯಾ ನೆಲದಲ್ಲಿ 12 ಟೆಸ್ಟ್ ಸರಣಿಗಳನ್ನು ಆಡಿದ್ದು ಆ ಪೈಕಿ ಇದೇ ಮೊದಲ ಬಾರಿಗೆ ಸರಣಿ ಗೆಲ್ಲುವ ಮೂಲಕ ಐತಿಹಾಸಿಕ ಸಾಧನೆ ಮಾಡಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


