ರಿಷಬ್ ಪಂತ್ ದಾಖಲೆ ಮೇಲೆ ದಾಖಲೆ; ಈ ಬಾರಿ ಗ್ಲೌಸ್ ನಿಂದಲ್ಲ, ಬದಲಿಗೆ ಬ್ಯಾಟ್ ನಿಂದ!
ಆಸ್ಟ್ರೇಲಿಯಾ ನೆಲದಲ್ಲಿ ಭಾರಿ ಸುದ್ದಿಗೆ ಗ್ರಾಸವಾಗುತ್ತಿರುವ ಭಾರತೀಯ ಆಟಗಾರ ರಿಷಬ್ ಪಂತ್ ದಾಖಲೆ ಮೇಲೆ ದಾಖಲೆ ಬರೆಯುತ್ತಿದ್ದು ಈ ಹಿಂದೆ ತಮ್ಮ ಗ್ಲೌಸ್ ಮೂಲಕ ದಾಖಲೆ ನಿರ್ಮಿಸಿದ್ದ ಪಂತ್ ಈ ಬಾರಿ ತಮ್ಮ ಬ್ಯಾಟ್ ಮೂಲಕವೂ ದಾಖಲೆಯೊಂದನ್ನು ಬರೆದಿದ್ದಾರೆ.

Published On :
ಸಿಡ್ನಿ: ಆಸ್ಟ್ರೇಲಿಯಾ ನೆಲದಲ್ಲಿ ಭಾರಿ ಸುದ್ದಿಗೆ ಗ್ರಾಸವಾಗುತ್ತಿರುವ ಭಾರತೀಯ ಆಟಗಾರ ರಿಷಬ್ ಪಂತ್ ದಾಖಲೆ ಮೇಲೆ ದಾಖಲೆ ಬರೆಯುತ್ತಿದ್ದು ಈ ಹಿಂದೆ ತಮ್ಮ ಗ್ಲೌಸ್ ಮೂಲಕ ದಾಖಲೆ ನಿರ್ಮಿಸಿದ್ದ ಪಂತ್ ಈ ಬಾರಿ ತಮ್ಮ ಬ್ಯಾಟ್ ಮೂಲಕವೂ ದಾಖಲೆಯೊಂದನ್ನು ಬರೆದಿದ್ದಾರೆ.
ಹೌದು ಸಿಡ್ನಿಯಲ್ಲಿ ನಡೆಯುತ್ತಿರುವ ಆಸ್ಟ್ರೇಲಿಯಾ ವಿರುದ್ಧದ ಅಂತಿಮ ಟೆಸ್ಟ್ ಪಂದ್ಯದಲ್ಲಿ ರಿಷಬ್ ಪಂತ್ ಅಮೋಘ ಬ್ಯಾಟಿಂಗ್ ಮಾಡಿ ಆಕರ್ಷಕ ಶತಕ ಸಿಡಿಸಿದ್ದಾರೆ. 165 ಎಸೆತಗಳನ್ನು ಎದುರಿಸಿರುವ ಪಂತ್ 11 ಬೌಂಡರಿಗಳ ಸಹಾಯದಿಂದ 128 ರನ್ ಗಳಿಸಿದ್ದು, ಆ ಮೂಲಕ ರಿಷಬ್ ಪಂತ್ ಆಸಿಸ್ ನೆಲದಲ್ಲಿ ಶತಕ ಸಿಡಿಸಿದ ಮೊದಲ ಭಾರತೀಯ ವಿಕೆಟ್ ಕೀಪರ್ ಎಂಬ ಕೀರ್ತಿಗೆ ಭಾಜನರಾಗಿದ್ದಾರೆ. ಈ ಹಿಂದೆ ಆಸಿಸ್ ನೆಲದಲ್ಲಿ ಸಾಕಷ್ಟು ವಿಕೆಟ್ ಕೀಪರ್ ಗಳು ಶತಕ ಸಿಡಿಸಿದ್ದಾರೆಯಾದರೂ, ಭಾರತ ತಂಡದ ವತಿಯಿಂದ ವಿಕೆಟ್ ಕೀಪರ್ ಶತಕ ಸಿಡಿಸಿದ ಸಾಧನೆ ಮಾಡಿರಲಿಲ್ಲ.
ಇದೀಗ ಈ ದಾಖಲೆಯನ್ನು ಪಂತ್ ಮಾಡಿದ್ದು, ಆಸಿಸ್ ನೆಲದಲ್ಲಿ ಶತಕ ಸಂಭ್ರಮ ಆಚರಿಸಿದ್ದಾರೆ. ಅಂತೆಯೇ ಭಾರತ ಹೊರತು ಪಡಿಸಿ ವಿದೇಶಗಳಲ್ಲಿ ಶತಕ ಸಿಡಿಸಿದ ಲೆಜೆಂಡ್ ಆಟಗಾರರ ಪಟ್ಟಿಗೆ ಪಂತ್ ಸೇರ್ಪಡೆಯಾಗಿದ್ದಾರೆ. ಇದಕ್ಕೂ ಮೊದಲು 1959ರಲ್ಲಿ ವಿಂಡೀಸ್ ವಿರುದ್ಧ ವಿ ಮಂಜ್ರೇಕರ್ (118 ರನ್) ಅವರು ಶತಕ ಸಾಧನೆ ಮಾಡಿದ್ದರು. ಆ ಬಳಿಕ 2002ರಲ್ಲಿ ವಿಂಡೀಸ್ ವಿರುದ್ಧ ಎ ರಾತ್ರಾ (115 ರನ್) ಅವರು ಅಜೇಯ ಶತಕ ಸಿಡಿಸಿದ್ದರು. ಬಳಿಕ 2016ರಲ್ಲಿ ಮತ್ತದೇ ವಿಂಡೀಸ್ ತಂಡದ ವಿರುದ್ಧ ವೃದ್ದಿಮಾನ್ ಸಾಹ (104 ರನ್) ಶತಕ ಸಾಧನೆಗೈದಿದ್ದರು.
ಆ ಬಳಿಕ 2018ರಲ್ಲಿ ಇಂಗ್ಲೆಂಡ್ ವಿರುದ್ಧ ಇದೇ ಪಂತ್ (114 ರನ್) ಶತಕ ಸಾಧನೆಗೈದಿದ್ದರು. ಇದೀಗ ಆಸಿಸ್ ನೆಲದಲ್ಲೂ ಪಂತ್ ಶತಕ ಸಾಧನೆ ಗೈದಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
indiaAustraliaSydneyRecordದಾಖಲೆಸಿಡ್ನಿRishabh PantCricket Offbeatಕ್ರಿಕೆಟ್ ಸ್ವಾರಸ್ಯರಿಷಬ್ ಪಂತ್ಭಾರತ. ಆಸ್ಟ್ರೇಲಿಯಾ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


