ನಿನಗಿನ್ನೂ ಬೋರ್ ಆಗಿಲ್ವಾ? ಪೂಜಾರ ಬ್ಯಾಟಿಂಗ್ ಕಂಡು ದಂಗಾದ ಲಿಯಾನ್
ಆತಿಥೇಯ ಆಸ್ಟ್ರೇಲಿಯನ್ನರ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಟೀಂ ಇಂಡಿಯಾ ಸವಾರಿ ಮುಂದುವರೆದಿದ್ದು, ಪ್ರಮುಖವಾಗಿ 2ನೇ ದಿ ವಾಲ್ ಖ್ಯಾತಿಯ ಚೇತೇಶ್ವರ ಪೂಜಾರ ಬ್ಯಾಟಿಂಗ್ ಅಕ್ಷರಶಃ ಕಾಂಗರೂಗಳ ನಿದ್ದೆಗೆಡಿಸಿದೆ.

Published On :
ಸಿಡ್ನಿ: ಆತಿಥೇಯ ಆಸ್ಟ್ರೇಲಿಯನ್ನರ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಟೀಂ ಇಂಡಿಯಾ ಸವಾರಿ ಮುಂದುವರೆದಿದ್ದು, ಪ್ರಮುಖವಾಗಿ 2ನೇ ದಿ ವಾಲ್ ಖ್ಯಾತಿಯ ಚೇತೇಶ್ವರ ಪೂಜಾರ ಬ್ಯಾಟಿಂಗ್ ಅಕ್ಷರಶಃ ಕಾಂಗರೂಗಳ ನಿದ್ದೆಗೆಡಿಸಿದೆ.
ಹೌದು.. ಮೊದಲ ದಿನದಾಟದಿಂದಲೂ ಆಸಿಸ್ ಬೌಲರ್ ಗಳನ್ನು ಕಾಡುತ್ತಿರುವ ಚೇತೇಶ್ವರ ಪೂಜಾರ ಮ್ಯಾರಥಾನ್ ಬ್ಯಾಟಿಂಗ್ ಮುಂದುವರೆದಿರುವಂತೆಯೇ ಅವರ ಕಂಗೆಡಿಸಲು ಹರಸಾಹಸ ಪಡುತ್ತಿದ್ದಾರೆ. ಪೂಜಾರ ಕಂಗೆಡಿಸಲು ಮುಂದಾಗಿದ್ದ ಆಸಿಸ್ ಬೌಲರ್ ನಥನ್ ಲಿಯಾನ್ ಪೂಜಾರ ಬಳಿ ತೆರಳಿ ನಿನಗೆ ಇನ್ನು ಬೋರ್ ಆಗಿಲ್ವಾ ಎಂದು ಪ್ರಶ್ನೆ ಮಾಡಿದ್ದಾರೆ.
ಸಿಡ್ನಿ ಟೆಸ್ಟ್ ಪಂದ್ಯದ ವೇಳೆ ಲಯನ್ ಬೌಲಿಂಗ್ ಮಾಡುವ ಸಂದರ್ಭದಲ್ಲಿ ಈ ಘಟನೆ ನಡೆದಿದ್ದು, ಮಾಧ್ಯಮವೊಂದು ಈ ಸಂಭಾಷಣೆಯನ್ನು ವರದಿ ಮಾಡಿದೆ. ನಾನ್ ಸ್ಟ್ರೈಕ್ ನಲ್ಲಿದ್ದ ಪೂಜಾರ ಶತಕ ಸಿಡಿಸಿದ ಸಂಭ್ರಮದಲ್ಲಿದ್ದರು. ಆ ವೇಳೆ ನಾಥನ್ ಲಿಯಾನ್ ಪ್ರಶ್ನೆ ಮಾಡಿದ್ದು, ಇದನ್ನು ಕೇಳಿಸಿಕೊಂಡ ಪೂಜಾರ ನಸು ನಕ್ಕು ಸುಮ್ಮನಾಗಿದ್ದಾರೆ.
114 ಇನ್ನಿಂಗ್ಸ್ ಗಳಲ್ಲಿ ವೃತ್ತಿ ಜೀವನದ 18ನೇ ಶತಕ ಪೂರೈಸಿದ ಪೂಜಾರ ಟೀಂ ಇಂಡಿಯಾ ಪರ ವಿವಿಎಸ್ ಲಕ್ಷ್ಮಣ್ ಹಾಗೂ ದಿಲೀಪ್ ವೆಂಗ್‍ಸರ್ಕಾರ್ ದಾಖಲೆಯನ್ನು ಮುರಿದರು. ಅಲ್ಲದೇ ತಂಡದ ಪರ ಅತಿ ಹೆಚ್ಚು ಶತಕಗಳನ್ನು ಸಿಡಿಸಿದ ಪಟ್ಟಿಯಲ್ಲಿ 7ನೇ ಸ್ಥಾನ ಪಡೆದರು. ವಿವಿಎಸ್ ಲಕ್ಷ್ಮಣ್, ದಿಲೀಪ್ ವೆಂಗ್‍ಸರ್ಕಾರ್ ತಲಾ 17 ಶತಕ ಸಿಡಿಸಿದ್ದಾರೆ. ಆಸೀಸ್ ಟೂರ್ನಿಯಲ್ಲಿ ಪೂಜಾರ ಅವರ 3ನೇ ಶತಕ ಇದಾಗಿದೆ.
ದ್ವಿಶತಕದ ಅಂಚಿನಲ್ಲಿ ಜಾರಿದ ಪೂಜಾರ 193 ರನ್ ಗಳಿಗೆ ಔಟ್
ವಿಪರ್ಯಾಸವೆಂದರೆ 2ನೇ ದಿನದಾಟದ ವೇಳೆ 193 ರನ್ ಗಳಿಸಿ ದ್ವಿಶತಕದ ಹೊಸ್ತಿಲಲ್ಲಿದ್ದ ಪೂಜಾರ ಇದೇ ನಾಥನ್ ಲಿಯಾನ್ ಬೌಲಿಂಗ್ ನಲ್ಲಿ ಔಟ್ ಆಗಿ ನಿರಾಸೆ ಮೂಡಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Cricketಕ್ರಿಕೆಟ್indiaಆಸ್ಟ್ರೇಲಿಯಾAustraliaಇಂಡಿಯಾSydneyಸಿಡ್ನಿNathan LyonCheteshwar Pujaraಚೇತೇಶ್ವರ ಪೂಜಾರಾನಾಥನ್ ಲಿಯಾನ್
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


