ಸ್ಲೆಡ್ಜಿಂಗ್ ಜಟಾಪಟಿ: ಆಸ್ಟ್ರೇಲಿಯಾ ಪ್ರಧಾನಿ ರಿಷಬ್ ಪಂತ್‌ಗೆ ಹೇಳಿದ್ದೇನು ಗೊತ್ತಾ?
ಆಸ್ಟ್ರೇಲಿಯಾದ ನಾಯಕ ಟಿಮ್ ಪೈನ್ ಹಾಗೂ ಟೀಂ ಇಂಡಿಯಾ ಯುವ ಆಟಗಾರ ರಿಷಬ್ ಪಂತ್ ನಡುವಿನ ಸ್ಲೆಡ್ಜಿಂಗ್ ಜಟಾಪಟಿ ತಾರಕ್ಕೇರಿದ್ದು ಈ ಮಧ್ಯೆ ರಿಷಬ್ ಪಂತ್ ಗೆ ಆಸ್ಟ್ರೇಲಿಯಾ ಪ್ರಧಾನಿ...

Published On :
ಸಿಡ್ನಿ: ಆಸ್ಟ್ರೇಲಿಯಾದ ನಾಯಕ ಟಿಮ್ ಪೈನ್ ಹಾಗೂ ಟೀಂ ಇಂಡಿಯಾ ಯುವ ಆಟಗಾರ ರಿಷಬ್ ಪಂತ್ ನಡುವಿನ ಸ್ಲೆಡ್ಜಿಂಗ್ ಜಟಾಪಟಿ ತಾರಕ್ಕೇರಿದ್ದು ಈ ಮಧ್ಯೆ ರಿಷಬ್ ಪಂತ್ ಗೆ ಆಸ್ಟ್ರೇಲಿಯಾ ಪ್ರಧಾನಿ ಕೆಲ ಮಾತುಗಳನ್ನು ಹೇಳಿದ್ದಾರೆ.
ಸದ್ಯ ಟೀಂ ಇಂಡಿಯಾ ಆಸ್ಟ್ರೇಲಿಯಾ ಪ್ರವಾಸದಲ್ಲಿದ್ದು ಹೊಸ ವರ್ಷವನ್ನು ಅಲ್ಲೇ ಆಚರಿಸಿದರು. ಇನ್ನು ಆಸ್ಟ್ರೇಲಿಯಾ ಪ್ರಧಾನಿ ಸ್ಕಾಟ್ ಮೊರಿಸನ್ ಹೊಸ ವರ್ಷದ ದಿನ ಆಸ್ಟ್ರೇಲಿಯಾ ಹಾಗೂ ಟೀಂ ಇಂಡಿಯಾ ಆಟಗಾರರನ್ನು ತಮ್ಮ ಸರ್ಕಾರಿ ನಿವಾಸ ಕ್ರಿಬಿಲ್ಲಿಗೆ ಆಹ್ವಾನಿಸಿದ್ದು ಎಲ್ಲ ಆಟಗಾರರ ಜತೆ ಮಾತುಕತೆ ನಡೆಸಿದ್ದರು.
ಬಳಿಕ ಟೀಂ ಇಂಡಿಯಾ ಆಟಗಾರರು ಒಬ್ಬೊಬ್ಬರಾಗಿ ಪ್ರಧಾನಿ ಅವರಿಗೆ ಶುಭಾಶಯ ಹೇಳುತ್ತಾ ಬಂದರು. ಅಂತೆಯೇ ಟೀಂ ಇಂಡಿಯಾದ ಮ್ಯಾನೇಜರ್ ಸುನಿಲ್ ಸುಭ್ರಮಣ್ಯಂ ಅವರು ರಿಷಬ್ ಪಂತ್ ಅವರನ್ನು ಪ್ರಧಾನಿಗೆ ಪರಿಚಯಿಸಿದ್ದಾರೆ.
ಈ ಸಂದರ್ಭದಲ್ಲಿ ಪ್ರಧಾನಿ ಸ್ಕಾಟ್ ಅವರು, ಪಂತ್ ಅವರ ನೆನಪು ನನಗೆ ಈಗಲೂ ಇದೆ. ಪಂದ್ಯದ ಮಧ್ಯೆ ಸ್ಲೆಡ್ಜಿಂಗ್ ಮಾಡುತ್ತಿದ್ದವರು ನೀವೇ ಅಲ್ವಾ? ನಿಮಗೆ ಗೌರವಯುತ ಸ್ವಾಗತ, ನಾವು ನಿಮ್ಮಂತೆ ಸ್ಪರ್ಧಾತ್ಮಕ ಆಟವನ್ನು ಇಷ್ಟಪಡುತ್ತೇವೆ ಎಂದಿದ್ದಾರೆ.
ಆಸ್ಟ್ರೇಲಿಯಾ ವಿರುದ್ಧದ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದಲ್ಲಿ ರಿಷಬ್ ಪಂತ್ ಬ್ಯಾಟಿಂಗ್ ಮಾಡುವಾಗ ಆಸೀಸ್ ನಾಯಕ ಟಿಮ್ ಪೈನ್ ವಿಕೆಟ್ ಹಿಂದೆ ನಿಂತು ಪಂತ್ ರನ್ನು ಕಿಚಾಯಿಸಿದ್ದರು. ಇದಕ್ಕೆ ಪಂತ್ ಸಹ ಪೈನ್ ಮಾಡುತ್ತಿದ್ದಾಗ ಅವರ ಕಾಲೆಳೆದು ಸೇಡು ತೀರಿಸಿಕೊಂಡಿದ್ದರು.
Tim Paine doing some recruiting for the @HurricanesBBL out in the middle of the 'G...
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
ಆಸ್ಟ್ರೇಲಿಯಾಟೀಂ ಇಂಡಿಯಾAustraliaTeam IndiaRishabh PantCricket Offbeatಕ್ರಿಕೆಟ್ ಸ್ವಾರಸ್ಯರಿಷಬ್ ಪಂತ್Tim Paineಟಿಮ್ ಪೈನ್Scott Morrisonಸ್ಕಾಟ್ ಮೊರಿಸನ್
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


