ಕ್ರಿಕೆಟ್

'ಒಂದೇ ಪಂದ್ಯದಲ್ಲಿ 46 ಸಿಕ್ಸರ್, 64 ಬೌಂಡರಿ, 807 ರನ್'; ಬೌಲರ್ ಗಳ ಮಾರಣ ಹೋಮ

ಇಂಗ್ಲೆಂಡ್ ಮತ್ತು ವೆಸ್ಟ್ ಇಂಡೀಸ್ ನಡುವಿನ ನಾಲ್ಕನೇ ಏಕದಿನ ಪಂದ್ಯ ರನ್ ಗಳ ಸುನಾಮಿಯನ್ನೇ ಕಂಡಿದ್ದು, ಅಕ್ಷರಶಃ ಉಭಯ ತಂಡಗಳ ಬೌಲರ್ ಗಳ ಮಾರಣ ಹೋಮ ನಡೆದಿದೆ ಎನ್ನಬಹುದು.

'ಒಂದೇ ಪಂದ್ಯದಲ್ಲಿ 46 ಸಿಕ್ಸರ್,  64 ಬೌಂಡರಿ, 807 ರನ್'; ಬೌಲರ್ ಗಳ ಮಾರಣ ಹೋಮ
ಜಾಸ್ ಬಟ್ಲರ್-ಕ್ರಿಸ್ ಗೇಯ್ಲ್ ಬ್ಯಾಟಿಂಗ್ ಅಬ್ಬರ
Published On :
ಸೆಂಟ್ ಜಾರ್ಜ್: ಇಂಗ್ಲೆಂಡ್ ಮತ್ತು ವೆಸ್ಟ್ ಇಂಡೀಸ್ ನಡುವಿನ ನಾಲ್ಕನೇ ಏಕದಿನ ಪಂದ್ಯ ರನ್ ಗಳ ಸುನಾಮಿಯನ್ನೇ ಕಂಡಿದ್ದು, ಅಕ್ಷರಶಃ ಉಭಯ ತಂಡಗಳ ಬೌಲರ್ ಗಳ ಮಾರಣ ಹೋಮ ನಡೆದಿದೆ ಎನ್ನಬಹುದು.
ಒಟ್ಟು 98 ಓವರ್ ಗಳಲ್ಲಿ 46 ಸಿಕ್ಸರ್ ಗಳು ಮತ್ತು 64 ಬೌಂಡರಿಗಳ ಸಮೇತ ಬರೊಬ್ಬರಿ 807 ರನ್ ಗಳು ಹರಿದು ಬಂದಿವೆ. ಈ ಪೈಕಿ 3 ಶತಕಗಳೂ ಸೇರಿವೆ. ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ ತಂಡ ನಿಗದಿತ 50 ಓವರ್ ಗಳಲ್ಲಿ ನಾಯಕ ಇಯಾನ್ ಮಾರ್ಗನ್ (103 ರನ್), ಜಾಸ್ ಬಟ್ಲರ್ (150 ರನ್), ಅಲೆಕ್ಸ್ ಹೇಲ್ಸ್ (82 ರನ್) ಮತ್ತು ಜಾನಿ ಬೇರ್ ಸ್ಟೋವ್ (56 ರನ್) ಅವರ ಸಿಡಿಲಬ್ಬರದ ಬ್ಯಾಟಿಂಗ್ ನೆರವಿನಿಂದ 6 ವಿಕೆಟ್ ಕಳೆದುಕೊಂಡು 418 ರನ್ ಗಳನ್ನು ಪೇರಿಸಿತು.
ಈ ಬೃಹತ್ ಮೊತ್ತವನ್ನು ಬೆನ್ನು ಹತ್ತಿದ ವೆಸ್ಟ್ ಇಂಡೀಸ್ ತಂಡ ದೈತ್ಯ ಆಟಗಾರ ಕ್ರಿಸ್ ಗೇಯ್ಲ್ (162 ರನ್) ಅವರ ಅದ್ಭುತ ಬ್ಯಾಟಿಂಗ್ ನೆರವಿನಿಂದಾಗಿ 48 ಓವರ್ ಗಳಲ್ಲಿ 389 ರನ್ ಗಳಿಸಿ ತನ್ನೆಲ್ಲಾ ವಿಕೆಟ್ ಕಳೆದುಕೊಂಡು ಕೇವಲ 29 ರನ್ ಗಳ ಅಂತರದಲ್ಲಿ ಇಂಗ್ಲೆಂಡ್ ಶರಣಾಯಿತು. ಒಂದು ಹಂತದಲ್ಲಿಯಂತೂ ಈ ಪಂದ್ಯದಲ್ಲಿ ವಿಂಡೀಸ್ ತಂಡ ಬ್ರಿಟೀಷರಿಗೆ ಸೋಲಿನ ಭೀತಿ ಮೂಡಿಸಿತ್ತು. ಆಂತಿಮ ಕ್ಷಣಗಳಲ್ಲಿ ಕಾರ್ಲೋಸ್ ಬ್ರಾಥ್ ವೇಟ್ (50 ರನ್) ಮಧ್ಯಮ ಕ್ರಮಾಂಕದಲ್ಲಿ ಡರೆನ್ ಬ್ರಾವೋ (61 ರನ್) ಭರ್ಜರಿ ಬ್ಯಾಟಿಂಗ್ ಮೂಲಕ ವಿಂಡೀಸ್ ಗೆ ಗೆಲುವಿನ ಆಸೆ ಚಿಗುರಿಸಿದ್ದರು. ಆದರೆ ಕೆಳ ಕ್ರಮಾಂಕದ ಆಟಗಾರರು ದಿಢೀರ್ ವಿಕೆಟ್ ಒಪ್ಪಿಸಿದ್ದರಿಂದ ವಿಂಡೀಸ್ ತಂಡ ಸೋಲೊಪ್ಪಿಕೊಳ್ಳಬೇಕಾಯಿತು.
ಇಂಗ್ಲೆಂಡ್ ಪರ ಅದಿಲ್ ರಷೀದ್ 5 ವಿಕೆಟ್ ಪಡೆದು ಯಶಸ್ವೀ ಬೌಲರ್ ಎನಿಸಿಕೊಂಡರೆ, ಮಾರ್ಕ್ ವುಡ್ 4 ಮತ್ತು ಬೆನ್ ಸ್ಟೋಕ್ಸ್ 1 ವಿಕೆಟ್ ಪಡೆದು ಇಂಗ್ಲೆಂಡ್ ಗೆ ಗೆಲುವು ತಂದಿತ್ತರು. ಇಂಗ್ಲೆಂಡ್ ಪರ ಭರ್ಜರಿ 150 ರನ್ ಸಿಡಿಸಿದ ಜಾಸ್ ಬಟ್ಲರ್ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.