ಕ್ರಿಕೆಟ್

ಟಿ20ಯಲ್ಲಿ ರೈನಾ ದಾಖಲೆ: 8000 ರನ್ ಪೂರೈಸಿದ ಮೊದಲ ಭಾರತೀಯ, ಇನ್ನು ಯಾರಿದ್ದಾರೆ ಪಟ್ಟಿಯಲ್ಲಿ!

ಚುಟುಕು ಕ್ರಿಕೆಟ್ ನಲ್ಲಿ ಟೀಂ ಇಂಡಿಯಾದ ಸ್ಫೋಟಕ ಬ್ಯಾಟ್ಸ್ ಮನ್ ಸುರೇಶ್ ರೈನಾ ಬರೋಬ್ಬರಿ 8000 ರನ್ ಪೂರೈಸಿದ ಸಾಧನೆ ಮಾಡಿದ್ದು ಈ ಸಾಧನೆ ಮಾಡಿದ ಮೊದಲ ಭಾರತೀಯ ಆಟಗಾರ...

ಟಿ20ಯಲ್ಲಿ ರೈನಾ ದಾಖಲೆ: 8000 ರನ್ ಪೂರೈಸಿದ ಮೊದಲ ಭಾರತೀಯ, ಇನ್ನು ಯಾರಿದ್ದಾರೆ ಪಟ್ಟಿಯಲ್ಲಿ!
ಸುರೇಶ್ ರೈನಾ
Published On :
ನವದೆಹಲಿ: ಚುಟುಕು ಕ್ರಿಕೆಟ್ ನಲ್ಲಿ ಟೀಂ ಇಂಡಿಯಾದ ಸ್ಫೋಟಕ ಬ್ಯಾಟ್ಸ್ ಮನ್ ಸುರೇಶ್ ರೈನಾ ಬರೋಬ್ಬರಿ 8000 ರನ್ ಪೂರೈಸಿದ ಸಾಧನೆ ಮಾಡಿದ್ದು ಈ ಸಾಧನೆ ಮಾಡಿದ ಮೊದಲ ಭಾರತೀಯ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. 
ಮುಷ್ತಾಕ್ ಅಲಿ ಟಿ20 ಪಂದ್ಯದಲ್ಲಿ 12 ರನ್ ಗಳಿಸಿದ ಅವರು ಈ ಮೈಲಿಗಲ್ಲು ದಾಟಿದರು. ಇದೇ ವೇಳೆ ರೈನಾ 300 ಟಿ20 ಪಂದ್ಯಗಳನ್ನು ಪೂರೈಸುವ ಮೂಲಕ ಧೋನಿ ಬಳಿಕ ಈ ಸಾಧನೆ ಮಾಡಿದ ಭಾರತೀಯ ಆಟಗಾರನಾಗಿದ್ದಾರೆ. 
ಸುರೇಶ್ ರೈನಾ 300 ಪಂದ್ಯಗಳಲ್ಲಿ 4 ಶತಕ, 48 ಅರ್ಧ ಶತಕ ಬಾರಿಸಿದ್ದಾರೆ. ಇನ್ನು ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ 7833 ರನ್ ಗಳಿಸಿದ್ದು ಗರಿಷ್ಠ ರನ್ ಸರದಾರರ ಪಟ್ಟಿಯಲ್ಲಿ 7ನೇ ಸ್ಥಾನದಲ್ಲಿದ್ದಾರೆ. ಈ ವರ್ಷದ ಐಪಿಎಲ್ ನಲ್ಲಿ ಕೊಹ್ಲಿ 8000 ರನ್ ಗಡಿ ದಾಟುವ ನಿರೀಕ್ಷೆ ಇದೆ. 
ಟಿ20ಯಲ್ಲಿ ಗರಿಷ್ಠ ರನ್ ದಾಖಲೆ ಬರೆದ ಆಟಗಾರರ ಪಟ್ಟಿ:
* ಕ್ರಿಸ್ ಗೇಯ್ಲ್ - 12,298 ರನ್
* ಬ್ರೆಂಡನ್ ಮೆಕಲಂ - 9922 ರನ್
* ಕಿರೋನ್ ಪೊಲ್ಲಾರ್ಡ್ - 8838 ರನ್  
* ಶೋಯಿಬ್ ಮಲಿಕ್ - 8603 ರನ್
* ಡೇವಿಡ್ ವಾರ್ನರ್ - 8111 ರನ್
* ಸುರೇಶೇ ರೈನಾ 8001 - ರನ್

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.