ಕ್ರಿಕೆಟ್

ಮೊದಲ ಟಿ20: ಭಾರತದ ವಿರುದ್ಧ ಆಸಿಸ್ ಗೆ 3 ವಿಕೆಟ್ ಗಳ ರೋಚಕ ಜಯ

ಆಂಧ್ರ ಪ್ರದೇಶದ ವಿಶಾಖಪಟ್ಟಣದಲ್ಲಿ ನಡೆದ ಮೊದಲ ಟಿ20 ಪಂದ್ಯದಲ್ಲಿ ಪ್ರವಾಸಿ ಆಸ್ಟ್ರೇಲಿಯಾ ತಂಡ 3 ವಿಕೆಟ್ ಗಳ ಅಂತರದಲ್ಲಿ ಭಾರತ ತಂಡವನ್ನು ಮಣಿಸಿದೆ.

ಮೊದಲ ಟಿ20: ಭಾರತದ ವಿರುದ್ಧ ಆಸಿಸ್ ಗೆ 3 ವಿಕೆಟ್ ಗಳ ರೋಚಕ ಜಯ
ಭಾರತದ ವಿರುದ್ಧ ಆಸಿಸ್ ಗೆ 3 ವಿಕೆಟ್ ಗಳ ರೋಚಕ ಜಯ
Published On :
ವಿಶಾಖಪಟ್ಟಣ: ಆಂಧ್ರ ಪ್ರದೇಶದ ವಿಶಾಖಪಟ್ಟಣದಲ್ಲಿ ನಡೆದ ಮೊದಲ ಟಿ20 ಪಂದ್ಯದಲ್ಲಿ ಪ್ರವಾಸಿ ಆಸ್ಟ್ರೇಲಿಯಾ ತಂಡ 3 ವಿಕೆಟ್ ಗಳ ಅಂತರದಲ್ಲಿ ಭಾರತ ತಂಡವನ್ನು ಮಣಿಸಿದೆ.
ಮೊದಲ ಟಿ20ಯಲ್ಲಿ ಆಸ್ಟ್ರೇಲಿಯಾ ತಂಡ ಟೀಂ ಇಂಡಿಯಾ ವಿರುದ್ಧ 3 ವಿಕೆಟ್​ಗಳ ರೋಚಕ ಗೆಲುವು ದಾಖಲಿಸಿದೆ. ಈ ಮೂಲಕ 2 ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ.  ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡ ನಿಗದಿತ 20 ಓವರ್ ಗಳಲ್ಲಿ 126ರನ್ ಗಳಿಸಿ ಆಸಿಸ್ ಪಡೆಗೆ ಗೆಲ್ಲಲು 127 ರನ್ ಗಳ ಗುರಿ ನೀಡಿತು. 127 ರನ್​ಗಳ ಸುಲಭ ಗುರಿ ಬೆನ್ನಟ್ಟಿದ್ದ ಆಸ್ಟ್ರೇಲಿಯಾ ಒಂದು ಹಂತದಲ್ಲಿ ಭರ್ಜರಿ ಗೆಲುವಿನ ಹಾದಿಯಲ್ಲಿತ್ತು. ಆದರೆ ಟೀಮ್ ಇಂಡಿಯಾ ಬೌಲರ್​ಗಳ ಶಿಸ್ತುಬದ್ಧ ದಾಳಿ, ಹಾಗೂ ಪರಿಣಾಮಕಾರಿ​ ಫೀಲ್ಡಿಂಗ್​ನಿಂದಾಗಿ ಪಂದ್ಯದ ಕೊನೆಯ ಓವರ್​ ಕೊನೆಯ ಎಸೆತದವರೆಗೂ ಪಂದ್ಯ ಸಾಗಿತು.

ಪ್ರಮುಖವಾಗದಿ 19ನೇ ಓವರ್​​ನಲ್ಲಿ ಯಾರ್ಕರ್ ಸ್ಪೆಷಲಿಸ್ಟ್​​ ಜಸ್ ಪ್ರೀತ್ ಬುಮ್ರಾ, ಅದ್ಭುತ ಬೌಲಿಂಗ್ ಮೂಲಕ​  ಪಂದ್ಯ ಭಾರತದ ಪರ ವಾಲುವಂತೆ ಮಾಡಿದರು. ಆದರೆ ಕೊನೆಯ ಓವರ್ ನಲ್ಲಿ ಉಮೇಶ್​ ಯಾದವ್​ ಅದೇ ಯಶಸ್ಸು ಮುಂದುವರೆಸುವಲ್ಲಿ ವಿಫಲರಾದರು. ಜೇಯ್ ರಿಚರ್ಡ್​​ಸನ್ ಹಾಗು ಪ್ಯಾಟ್​ ಕಮ್ಮಿನ್ಸ್ ತಂಡಕ್ಕೆ ರೋಚಕ ಗೆಲುವು ತಂದುಕೊಟ್ಟರು. ಮಧ್ಯಮ ಕ್ರಮಾಂಕದ ಬ್ಯಾಟ್ಸ್ ಮನ್ ಗ್ಲೇನ್ ಮ್ಯಾಕ್ಸ್ ​ವೆಲ್, ಅರ್ಧಶತಕ ಬಾರಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ಭಾರತದ ಪರ ಬುಮ್ರಾ 3 ವಿಕೆಟ್​ ಪಡೆದರೆ, ಯಜುವೇಂದರ ಚಹಾಲ್ ಹಾಗು ಕೃಣಾಲ್ ಪಾಂಡ್ಯ ತಲಾ 1 ವಿಕೆಟ್ ಪಡೆದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.