ಕಿವೀಸ್ ಬೌಲರ್ ಚಾಪೆ ಕೆಳಗೆ ನುಗ್ಗಿದರೆ, ಎಂಎಸ್ ಧೋನಿ ರಂಗೋಲಿ ಕೆಳಗೆ ನುಗ್ತಾರೆ, ಈ ವಿಡಿಯೋ ನೋಡಿ!
ಟೀಂ ಇಂಡಿಯಾದ ಮಾಜಿ ನಾಯಕ, ವಿಕೆಟ್ ಕೀಪರ್ ಧೋನಿ ಸ್ಟಂಪಿಂಗ್ ಮಾಡುವುದರಲ್ಲಿ ನಿಸ್ಸೀಮರೋ ಅದೇ ರೀತಿ ಸ್ಟಂಪಿಂಗ್ ಔಟ್ ನಿಂದ ತಪ್ಪಿಸಿಕೊಳ್ಳುವುದರಲ್ಲೂ ಅಷ್ಟೇ ನಿಸ್ಸೀಮರು ಎಂಬುದಕ್ಕೆ ಇಲ್ಲಿದೆ ಸಾಕ್ಷಿ.

Published On :
ಆಕ್ಲೆಂಡ್: ಟೀಂ ಇಂಡಿಯಾದ ಮಾಜಿ ನಾಯಕ, ವಿಕೆಟ್ ಕೀಪರ್ ಎಂಎಸ್ ಧೋನಿ ಸ್ಟಂಪಿಂಗ್ ಮಾಡುವುದರಲ್ಲಿ ನಿಸ್ಸೀಮರು. ಅದೇ ರೀತಿ ಸ್ಟಂಪಿಂಗ್ ಔಟ್ ನಿಂದ ತಪ್ಪಿಸಿಕೊಳ್ಳುವುದರಲ್ಲೂ ನಿಸ್ಸೀಮರು ಎಂಬುದಕ್ಕೆ ಇಲ್ಲಿದೆ ಸಾಕ್ಷಿ.
ಹೌದು, ನ್ಯೂಜಿಲ್ಯಾಂಡ್ ವಿರುದ್ಧದ ಎರಡನೇ ಟಿ20 ಪಂದ್ಯದಲ್ಲಿ ಎಂಎಸ್ ಧೋನಿ ಕಿವೀಸ್ ಬೌಲರ್ ಇಶ್ ಸೋಧಿ ಬೌಲಿಂಗ್ ನಲ್ಲಿ ಮುಂದಕ್ಕೆ ಬಂದು ಬಿರುಸಿನ ಹೊಡೆತಕ್ಕೆ ಮುಂದಾದರು. ಇದನ್ನು ಗಮನಿಸಿದ ಸೋಧಿ ಚೆಂಡು ಧೋನಿ ಬ್ಯಾಟ್ ಗೆ ಸಿಗದಂತೆ ವೈಡ್ ಹಾಕಿ ಕೀಪರ್ ಗೆ ಸಿಗುವಂತೆ ಎಸೆದರು.
ಆದರೆ ಇದನ್ನು ಗಮನಿಸಿದ ಧೋನಿ ಮುಂದಕ್ಕೆ ಬಂದರು ಸಹ ಚೆಂಡನ್ನು ಹೊಡೆದರು. ಇಲ್ಲಿ ಚೆಂಡು ಮಿಸ್ ಆಗಿ ಕೀಪರ್ ಕೈಗೆ ಹೋಗಬಹುದೆಂದು ಬ್ಯಾಟ್ ಅನ್ನು ಕ್ರೀಸ್ ನಲ್ಲಿ ಇಡಲು ಪ್ರಯತ್ನಿಸಿದ್ದಾರೆ. ಒಟ್ಟಿನಲ್ಲಿ ಧೋನಿಯ ಈ ಸುರಕ್ಷಿತ ಆಟ ಅವರ ಚಾಕಚಕ್ಯತೆಗೆ ಹಿಡಿದ ಕನ್ನಡಿಯಂತಿದೆ.
Dhoni ...
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
ಟೀಂ ಇಂಡಿಯಾTeam IndiaNew ZealandMS Dhoniಎಂಎಸ್ ಧೋನಿನ್ಯೂಜಿಲ್ಯಾಂಡ್Eden ParkCricket Offbeatಕ್ರಿಕೆಟ್ ಸ್ವಾರಸ್ಯಈಡೆನ್ ಪಾರ್ಕ್
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


