ಟಿ20 ಯಲ್ಲಿ ದೊಡ್ಡ ಹೈಡ್ರಾಮಾ: ಧೋನಿ ಅಪೀಲ್‌ಗೆ ಕಂಗಾಲಾಗಿ ಅಂಪೈರ್ ಔಟ್ ತೀರ್ಪು, ವಿವಾದ!
ನ್ಯೂಜಿಲ್ಯಾಂಡ್ ವಿರುದ್ಧದ ಎರಡನೇ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ ಭರ್ಜರಿ ಗೆಲುವು ಸಾಧಿಸಿದೆ. ಈ ಮಧ್ಯೆ ಧೋನಿ ಅಪೀಲ್ ನಿಂದ ಕಂಗಲಾಗಿ ಅಂಪೈರ್...

Published On :
ಆಕ್ಲೆಂಡ್: ನ್ಯೂಜಿಲ್ಯಾಂಡ್ ವಿರುದ್ಧದ ಎರಡನೇ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ ಭರ್ಜರಿ ಗೆಲುವು ಸಾಧಿಸಿದೆ. ಈ ಮಧ್ಯೆ ಧೋನಿ ಅಪೀಲ್ ನಿಂದ ಕಂಗಲಾಗಿ ಅಂಪೈರ್ ಹಾಗೂ 3ನೇ ಅಂಪೈರ್ ಸಹ ನಾಟೌಟನ್ನು ಔಟ್ ಎಂದು ತೀರ್ಪು ನೀಡಿರುವುದು ಇದೀಗ ವಿವಾದಕ್ಕೆ ಕಾರಣವಾಗಿದ್ದು ಈ ವಿಡಿಯೋ ಇದೀಗ ವೈರಲ್ ಆಗಿದೆ.
ಆಕ್ಲೆಂಡ್ ನಲ್ಲಿ ನಡೆದ ಎರಡನೇ ಟಿ20 ಪಂದ್ಯದಲ್ಲಿ ಈ ಘಟನೆ ನಡೆದಿದೆ. ಪಂದ್ಯದ 6ನೇ ಓವರ್ ನಲ್ಲಿ ಕೃಣಾಲ್ ಪಾಂಡ್ಯ ಬೌಲಿಂಗ್ ನಲ್ಲಿ ಡ್ಯಾರಿಲ್ ಮಿಚೆಲ್ ಡಿಫೇನ್ಸ್ ಆಡಲು ಹೋಗಿದ್ದರು. ಈ ವೇಳೆ ಚೆಂಡು ಬ್ಯಾಟ್ ಗೆ ತಲುಗಿ ಪ್ಯಾಡ್ ಗೆ ಬಿದ್ದಿತ್ತು. ಈ ವೇಳೆ ಎಂಎಸ್ ಧೋನಿ ಎಲ್ಬಿಡಬ್ಲ್ಯೂಗೆ ಜೋರಾಗಿ ಅಪೀಲ್ ಮಾಡಿದರು. ಇದರಿಂದ ಮೈದಾನದ ಅಂಪೈರ್ ಔಟ್ ಎಂದು ತೀರ್ಪು ನೀಡಿದರು. ಅಂಪೈರ್ ರ ತೀರ್ಪಿನಿಂದ ಕಂಗಾಲಾದ ಡ್ಯಾರಿಲ್ ಡಿಆರ್ಎಸ್ ಗೆ ಅಪೀಲ್ ಮಾಡಿದರು.
ಅಂತೇ ಮೂರನೇ ಅಂಪೈರ್ ಸಹ ದೃಶ್ಯಗಳನ್ನು ಪರಿಶೀಲಿಸಿದರು. ಈ ವೇಳೆ ಚೆಂಡು ಬ್ಯಾಟ್ ಗೆ ತಗುಲಿದ್ದರು. ಔಟ್ ಎಂದು ತೀರ್ಪು ನೀಡಿರುವುದು ಸದ್ಯ ವಿವಾದಕ್ಕೆ ಕಾರಣವಾಗಿದೆ. ಇನ್ನು ಮೂರನೇ ಅಂಪೈರ್ ತೀರ್ಪಿನ ವಿರುದ್ದ ನೆಟಿಗರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


