ಕ್ರಿಕೆಟ್

ನ್ಯೂಜಿಲೆಂಡ್ ನಲ್ಲಿ ಕ್ರಿಕೆಟ್ ಆಡುವಾಗ ಮೈದಾನದಲ್ಲೇ ಕುಸಿದು ಭಾರತ ಮೂಲದ ಕ್ರಿಕೆಟಿಗನ ಸಾವು!

ಕ್ರಿಕೆಟ್ ಆಡುವಾಗಲೇ ಭಾರತ ಮೂಲದ ಕ್ರಿಕೆಟಿಗನೋರ್ವ ಮೈದಾನದಲ್ಲಿ ಕುಸಿದು ಪ್ರಾಣ ಬಿಟ್ಟಿರುವ ಘಟನೆ ನೂಜಿಲೆಂಡ್ ನಲ್ಲಿ ನಡೆದಿದೆ.

ನ್ಯೂಜಿಲೆಂಡ್ ನಲ್ಲಿ ಕ್ರಿಕೆಟ್ ಆಡುವಾಗ ಮೈದಾನದಲ್ಲೇ ಕುಸಿದು ಭಾರತ ಮೂಲದ ಕ್ರಿಕೆಟಿಗನ ಸಾವು!
ಮೃತ ಹರೀಶ್ ಗಂಗಾಧರನ್
Published On :
ವೆಲ್ಲಿಂಗ್ಟನ್: ಕ್ರಿಕೆಟ್ ಆಡುವಾಗಲೇ ಭಾರತ ಮೂಲದ ಕ್ರಿಕೆಟಿಗನೋರ್ವ ಮೈದಾನದಲ್ಲಿ ಕುಸಿದು ಪ್ರಾಣ ಬಿಟ್ಟಿರುವ ಘಟನೆ ನೂಜಿಲೆಂಡ್ ನಲ್ಲಿ ನಡೆದಿದೆ.
ನ್ಯೂಜಿಲ್ಯಾಂಡ್ ಕ್ಲಬ್​ ಪರ ಆಡುತ್ತಿದ್ದ ಭಾರತೀಯ ಮೂಲದ ಕ್ರಿಕೆಟಿಗ ಹರೀಶ್​ ಗಂಗಾಧರನ್ ಮೈದಾನದಲ್ಲೇ ಕುಸಿದು ಸಾವನ್ನಪ್ಪಿದ್ದು, ನ್ಯೂಜಿಲೆಂಡ್ ನ ಡ್ಯುನೆಡಿನ್​ನಲ್ಲಿ ನಡೆಯುತ್ತಿದ್ದ ಪಂದ್ಯದಲ್ಲಿ ಈ ಅವಘಡ ಸಂಭವಿಸಿದೆ. ಹರೀಶ್ ಕಿವೀಸ್​ನ ಗ್ರೀನ್ ಐಲ್ಯಾಂಡ್​ ಕ್ರಿಕೆಟ್​ ಕ್ಲಬ್ ತಂಡದ ಆಟಗಾರರಾಗಿದ್ದು, ಕೆಲ ವರ್ಷಗಳಿಂದ ಈ ತಂಡವನ್ನು​ ಪ್ರತಿನಿಧಿಸುತ್ತಿದ್ದರು.
ಶನಿವಾರ ಸಂಜೆ ಗ್ರೀನ್​ಲ್ಯಾಂಡ್​ ಸನ್ನಿವೇಲ್ ಸ್ಪೋರ್ಟ್ಸ್​ ಸೆಂಟರ್​ನಲ್ಲಿ ಆಡುತ್ತಿದ್ದ ವೇಳೆ ಹರೀಶ್ ದಿಢೀರ್ ಉಸಿರಾಟದ ತೊಂದರೆಗೆ ಸಿಲುಕಿದ್ದರು. ಓವರ್ ಎಸೆದ ನಂತರ ಉಸಿರಾಟದ ಒತ್ತಡಕ್ಕೊಳಗಾಗಿ ಮೈದಾನದಲ್ಲೇ ಕುಸಿದು ಬಿದ್ದರು.  ಪ್ರಜ್ಞೆ ಕಳೆದುಕೊಂಡಿದ್ದ ಹರೀಶ್ ಅವರಿಗೆ  ಸಹ ಆಟಗಾರರು ಚಿಕಿತ್ಸೆ ಕೊಡಿಸಲು ಪ್ರಯತ್ನಿಸಿದರೂ, ಫಲಕಾರಿಯಾಗದೇ ಅವರು ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.
ಕಳೆದ ಕೆಲ ವರ್ಷಗಳಿಂದ ನ್ಯೂಜಿಲ್ಯಾಂಡ್​ ಕ್ಲಬ್ ಪರವಾಗಿ ಆಡುತ್ತಿರುವ 33ರ ಹರೆಯದ ಹರೀಶ್ ಗಂಗಾಧರನ್ ಸಾವಿಗೆ ಗ್ರೀನ್​ ಐಲ್ಯಾಂಡ್​ ಕ್ರಿಕೆಟ್​ ಕ್ಲಬ್​ ಕಂಬನಿ ಮಿಡಿದಿದೆ. ಹಾಗೆಯೇ ನ್ಯೂಜಿಲ್ಯಾಂಡ್​ ಕ್ರಿಕೆಟ್​ ಅಧಿಕಾರಿ ರಿಚರ್ಡ್​ ಬೂಕ್ ಆಟಗಾರನ ದುರಂತ ಅಂತ್ಯಕ್ಕೆ ಸಂತಾಪ ಸೂಚಿಸಿದ್ದು, ನ್ಯೂಜಿಲೆಂಡ್ ಕ್ರಿಕೆಟ್ ಸಂಸ್ಥೆ ಕೂಡ ಹರೀಶ್ ನಿಧನಕ್ಕೆ ಸಂತಾಪ ಸೂಚಿಸಿದೆ.
ಇನ್ನು ಕ್ಲಬ್​ ಕ್ರಿಕೆಟ್ ನಲ್ಲಿ ಉತ್ತಮ ಆಟಗಾರನಾಗಿ ಗುರುತಿಸಿಕೊಂಡಿದ್ದ ಹರೀಶ್ ಅವರು ಪತ್ನಿ ನಿಶಾ, ಮಗಳು ಗೌರಿ ಹಾಗೂ ಅಪಾರ ಕ್ರಿಕೆಟ್‌ ಅಭಿಮಾನಿಗಳನ್ನು ಹರೀಶ್‌ ಅಗಲಿದ್ದಾರೆ. ಕೇರಳದ ಕೊಚ್ಚಿ ಮೂಲದ ಹರೀಶ್ ಗಂಗಾಧರನ್ 5 ವರ್ಷಗಳ ಹಿಂದಷ್ಟೇ ನ್ಯೂಜಿಲೆಂಡ್ ಗೆ ತೆರಳಿ ನೆಲೆಸಿದ್ದರು. ಗ್ರೀನ್ ಐಲ್ಯಾಂಡ್ ಕ್ಲಬ್ ತಂಡದ ಪರ ಆಡುತ್ತಿದ್ದ ಹರೀಶ್ ಉತ್ತಮ ಆಲ್ರೌಂಡರ್ ಆಗಿದ್ದರು.
ಇತ್ತೀಚೆಗಷ್ಟೇ ಶ್ರೀಲಂಕಾ ಮತ್ತು ಆಸ್ಟೇಲಿಯಾ ನಡುವಿನ ಸರಣಿಯಲ್ಲಿ ಆಸಿಸ್ ವೇಗಿಗಳ ಬೌನ್ಸರ್ ಗಳಿಗೆ ಲಂಕಾದ ಇಬ್ಬರು ಬ್ಯಾಟ್ಸಮನ್ ಗಳು ಗಾಯಗೊಂಡು ಆಸ್ಪತ್ರೆ ಪಾಲಾಗಿದ್ದರು. ಅದೃಷ್ಟವಶಾತ್ ಇಬ್ಬರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.