ಹೋಟೆಲ್ ಮಹಿಳಾ ಸಿಬ್ಬಂದಿ ಜೊತೆ ಕುಲದೀಪ್ ಸೇರಿ ದೆಹಲಿ ಅಂಡರ್-23 ಆಟಗಾರರ ಅಸಭ್ಯ ವರ್ತನೆ!
ಸಿಕೆ ನಾಯ್ಡು ಟ್ರೋಫಿ ಸಂಬಂದ ಕೋಲ್ಕತ್ತಾಗೆ ತೆರಳಿರುವ ದೆಹಲಿ ಅಂಡರ್ 23 ತಂಡದ ಆಟಗಾರರಾದ ಕುಲದೀಪ್ ಯಾದವ್ ಮತ್ತು ಲಕ್ಷ್ಯಾ ತರೇಜಾ ಅಸಭ್ಯ ವರ್ತನೆ ತೋರಿದ್ದಾರೆ.

ಕೋಲ್ಕತ್ತಾ: ಸಿಕೆ ನಾಯ್ಡು ಟ್ರೋಫಿ ಸಂಬಂದ ಕೋಲ್ಕತ್ತಾಗೆ ತೆರಳಿರುವ ದೆಹಲಿ ಅಂಡರ್ 23 ತಂಡದ ಆಟಗಾರರಾದ ಕುಲದೀಪ್ ಯಾದವ್ ಮತ್ತು ಲಕ್ಷ್ಯಾ ತರೇಜಾ ಅಸಭ್ಯ ವರ್ತನೆ ತೋರಿದ್ದಾರೆ.
ಕೋಲ್ಕತ್ತಾದ ಹೊಟೇಲ್ ವೊಂದರಲ್ಲಿ ದೆಹಲಿ ಅಂಡರ್ 23 ತಂಡದ ಆಟಗಾರರು ತಂಗಿದ್ದರು. ಈ ವೇಳೆ ಇಬ್ಬರು ಆಟಗಾರರು ಹೋಟೆಲ್ ನ ಮಹಿಳಾ ಸಿಬ್ಬಂದಿ ಜೊತೆ ಅಸಭ್ಯವಾಗಿ ವರ್ತಿಸಿದ್ದಾರೆ ಎಂಬ ಆರೋಪ ಹಿನ್ನೆಲೆಯಲ್ಲಿ ಡಿಡಿಸಿಎ ಅವರನ್ನು ಮನೆಗೆ ಕಳುಹಿಸಿದೆ.
ದೆಹಲಿ ಪರ ಆಡಿದ್ದ ತರೇಜಾ ಎರಡು ಅರ್ಧ ಶತಕ ಸಿಡಿಸಿದ್ದರು. ಇನ್ನು ವೇಗಿ ಕುಲದೀಪ್ ಯಾದವ್ ಮುಂದಿನ ಪಂಜಾಬ್ ವಿರುದ್ಧದ ರಣಜಿ ಟ್ರೋಫಿಗೆ ಇಶಾಂತ್ ಶರ್ಮಾ ಬದಲಿಗೆ ಕಣಕ್ಕಿಳಿಯುವ ಸಾಧ್ಯತೆ ಇತ್ತು.
ಈ ಸಂಬಂಧ ಪೊಲೀಸರಿಗೆ ದೂರು ನೀಡಿಲ್ಲ. ಪರಿಸ್ಥಿತಿಯನ್ನು ತಿಳಿಗೊಳಿಸಲು ಡಿಡಿಸಿಎ ನಿರ್ದೇಶಕ ಸಂಜಯ್ ಭಾರದ್ವಜ್ ಅವರನ್ನು ಕೋಲ್ಕತ್ತಾಗೆ ಕಳುಹಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


