ಮೊದಲ ಏಕದಿನ: ಪಂತ್-ಅಯ್ಯರ್ ಅರ್ಧಶತಕ: ವೆಸ್ಟ್ ಇಂಡೀಸ್‌ಗೆ 289 ರನ್ ಗುರಿ
ಶ್ರೇಯಸ್ ಅಯ್ಯರ್ (70 ರನ್) ಹಾಗೂ ರಿಷಭ್ ಪಂತ್(71 ರನ್) ಅವರ ಅರ್ಧಶತಕಗಳ ಬಲದಿಂದ ಭಾರತ ತಂಡ ಮೊದಲನೇ ಏಕದಿನ ಪಂದ್ಯದಲ್ಲಿ ವೆಸ್ಟ್ ಇಂಡೀಸ್‌ಗೆ 289 ರನ್ ನೀಡಿತು.

ಚೆನ್ನೈ: ಶ್ರೇಯಸ್ ಅಯ್ಯರ್ (70 ರನ್) ಹಾಗೂ ರಿಷಭ್ ಪಂತ್(71 ರನ್) ಅವರ ಅರ್ಧಶತಕಗಳ ಬಲದಿಂದ ಭಾರತ ತಂಡ ಮೊದಲನೇ ಏಕದಿನ ಪಂದ್ಯದಲ್ಲಿ ವೆಸ್ಟ್ ಇಂಡೀಸ್‌ಗೆ 289 ರನ್ ನೀಡಿತು.
ಇಲ್ಲಿನ ಎಂ.ಎ ಚಿದಂಬರಂ ಕ್ರೀಡಾಂಗಣದಲ್ಲಿ ಟಾಸ್ ಸೋತು ಬ್ಯಾಟಿಂಗ್ ಮಾಡಿದ ಭಾರತ ತಂಡ, ಕೇವಲ 25 ರನ್ ಗಳಿಗೆ ಎರಡು ವಿಕೆಟ್‌ಗಳನ್ನು ಕಳೆದುಕೊಂಡಿತು. ಆರಂಭದಲ್ಲಿ ಅತ್ಯುತ್ತಮ ಬೌಲಿಂಗ್ ಮಾಡಿದ ಶೆಲ್ಡನ್ ಕಾಟ್ರೆೆಲ್ ಅವರು ಕೆ.ಎಲ್ ರಾಹುಲ್ (6) ಹಾಗೂ ವಿರಾಟ್ ಕೊಹ್ಲಿ(4) ಅವರ ವಿಕೆಟ್‌ಗಳನ್ನು ಬಹುಬೇಗ ಕಬಳಿಸಿ ಭಾರತಕ್ಕೆ ಆರಂಭಿಕ ಆಘಾತ ನೀಡಿದರು. ನಂತರ, ಅತ್ಯುತ್ತಮ ಬ್ಯಾಟಿಂಗ್ ಮಾಡಿದ ರೋಹಿತ್ ಶರ್ಮಾ 56 ಎಸೆತಗಳಲ್ಲಿ 36 ರನ್ ಗಳಿಸಿ ಉತ್ತಮ ಹಾದಿಯಲ್ಲಿ ಸಾಗುತ್ತಿದ್ದರು. ಆದರೆ, ಅವರನ್ನು ಜೋಸೆಫ್ ಔಟ್ ಮಾಡಿದರು.
ಈ ಸಂದರ್ಭ ನಾಲ್ಕನೇ ವಿಕೆಟ್ ಗೆ ಜತೆಯಾದ ಶ್ರೇಯಸ್ ಅಯ್ಯರ್ ಮತ್ತುರಿಷಬ್ ಪಂತ್ ಜೋಡಿ ಅದ್ಭುತ ಪ್ರದರ್ಶನ ನೀಡಿದೆ. ಶ್ರೇಯಸ್ ಅಯ್ಯರ್ ೭೦ ರನ್ ಸಿಡಿಸಿದ್ದರೆ ಪಂತ್ ೭೧ ರನ್ ಗಳಿಸಿ ಟೀಕಾಕಾರರ ಹುಬ್ಬೇರಿಸಿದ್ದಾರೆ
ವಿಡೀಸ್ ಪರವಾಗಿ ಶೆಲ್ಡನ್ ಕಾಟ್ರೆಲ್, ಕೀಮೊ ಪೌಲ್ ಅಲ್ಜಾರಿ ಜೋಸೆಫ್,ತಲಾ ಎರಡು ವಿಕೆಟ್ ಕಿತ್ತರೆ ನಾಯಕ ಕೈರೊನ್ ಪೊಲಾರ್ಡ್ ಒಂದು ವಿಕೆಟ್ ಕಬಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


