ಆ್ಯಶಸ್: ಮತ್ತೆ ಆಂಗ್ಲರ ಪಾಲಿಗೆ ಆಪದ್ಭಾಂದವನಾದ ಬೆನ್ ಸ್ಟೋಕ್ಸ್, 3ನೇ ಪಂದ್ಯ ಗೆದ್ದ ಇಂಗ್ಲೆಂಡ್!
ಇಂಗ್ಲೆಂಡ್ ನ ಬೆನ್ ಸ್ಟೋಕ್ಸ್ ಸಾಹಸದಿಂದಾಗಿ ಆ್ಯಶಸ್ ಸರಣಿಯ ಆಸ್ಟ್ರೇಲಿಯ ವಿರುದ್ಧದ 3ನೇ ಪಂದ್ಯದಲ್ಲಿ ಇಂಗ್ಲೆಂಡ್ ತಂಡ ರೋಚಕ ಗೆಲುವು ಸಾಧಿಸಿದೆ.

ಪ್ರಬಲ ಆಸಿಸ್ ವಿರುದ್ಧ 1 ವಿಕೆಟ್ ಗಳ ರೋಚಕ ಜಯ ಸಾಧಿಸಿದ ಇಂಗ್ಲೆಂಡ್
ಲೀಡ್ಸ್: ಇಂಗ್ಲೆಂಡ್ ನ ಬೆನ್ ಸ್ಟೋಕ್ಸ್ ಸಾಹಸದಿಂದಾಗಿ ಆ್ಯಶಸ್ ಸರಣಿಯ ಆಸ್ಟ್ರೇಲಿಯ ವಿರುದ್ಧದ 3ನೇ ಪಂದ್ಯದಲ್ಲಿ ಇಂಗ್ಲೆಂಡ್ ತಂಡ ರೋಚಕ ಗೆಲುವು ಸಾಧಿಸಿದೆ.
ಲೀಡ್ಸ್‌ನ ಹೆಡ್ಡಿಂಗ್ಲಿಯಲ್ಲಿ ಭಾನುವಾರ ನಡೆದ ಇಂಗ್ಲೆಂಡ್-ಆಸ್ಟ್ರೇಲಿಯಾ ನಡುವಣ 3ನೇ ಆ್ಯಶಸ್ ಟೆಸ್ಟ್ ನಲ್ಲಿ ವಿಶ್ವ ಚಾಂಪಿಯನ್ ಇಂಗ್ಲೆಂಡ್ ಪವಾಡ ರೀತಿಯಲ್ಲಿ ಕೇವಲ 1 ವಿಕೆಟ್ ಗಳ ಗೆಲುವು ಸಾಧಿಸಿದೆ. ಆಲ್ ರೌಂಡರ್ ಬೆನ್ ಸ್ಟೋಕ್ಸ್ ಸ್ಫೋಟಕ ಸಾಹಸದ ಬ್ಯಾಟಿಂಗ್ ನಿಂದಾಗಿ ಇಂಗ್ಲೆಂಡ್ ಅಚ್ಚರಿಯ ಗೆಲುವು ಸಾಧಿಸಿದೆ.
2ನೇ ಇನ್ನಿಂಗ್ಸ್ ನಲ್ಲಿ ಆಸ್ಟ್ರೇಲಿಯಾ ನೀಡಿದ್ದ 362 ರನ್ ಗಳ ಬೃಹತ್ ಗುರಿಯನ್ನು ನೀಡಿತು. ಈ ಮೊತ್ತವನ್ನು ಬೆನ್ನು ಹತ್ತಿದ ಇಂಗ್ಲೆಂಡ್ ತಂಡಕ್ಕೆ ಜಾಶ್ ಹೇಜಲ್ ವುಡ್ ಮಾರಕವಾಗಿ ಪರಿಣಮಿಸಿದರು. ಆದರೆ ಆಸಿಸ್ ವಿರುದ್ಧ ಸಾಹಸದ ಶತಕ ಸಿಡಿಸಿದ ಬೆನ್ ಸ್ಟೋಕ್ಸ್ (135 ರನ್) ಇಂಗ್ಲೆಂಡ್ ತಂಡದ ಗೆಲುವಿನ ರೂವಾರಿಯಾದರು. ಇಂಗ್ಲೆಂಡ್ ತಂಡ 286 ರನ್ ಗಳಿಗೆ 9 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಈ ಹಂತದಲ್ಲಿ ಕ್ರೀಸ್ ಗೆ ಅಂಟಿಕೊಂಡ ಬೆನ್ ಸ್ಟೋಕ್ಸ್ ಅಂತಿಮ ರನ್ ವರೆಗೂ ಕ್ರೀಸ್ ನಲ್ಲಿದ್ದು ಇಂಗ್ಲೆಂಡ್ ಪಾಲಿಗೆ ಮತ್ತೊಂದು ಅಮೋಘ ಜಯ ತಂದಿತ್ತರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


