ಪಾಕ್ ವೇಗಿ ಹಸನ್ ಅಲಿ ಮದುವೆಯಾಗುತ್ತಿರುವ ಭಾರತೀಯ ವಧು ಇವರೆ, ಆಕೆ ಮಾಡುತ್ತಿರುವುದೇನು?
ಪಾಕ್ ಕ್ರಿಕೆಟಿಗ ಶೋಯೆಬ್ ಮಲಿಕ್ ಸಾನಿಯಾ ಮಿರ್ಜಾ ವಿವಾಹದ ನಂತರ ಇದೇ ಮಾದರಿಯಲ್ಲಿ ಮತ್ತೋರ್ವ ಪಾಕಿಸ್ತಾನದ ಕ್ರಿಕೆಟಿಗ ಭಾರತೀಯ ಯುವತಿಯನ್ನು ದುಬೈನಲ್ಲಿ ಆಗಸ್ಟ್ 20ರಂದು ವಿವಾಹವಾಗಲಿದ್ದಾರೆ.

Published On :
ನವದೆಹಲಿ: ಪಾಕ್ ಕ್ರಿಕೆಟಿಗ ಶೋಯೆಬ್ ಮಲಿಕ್ ಸಾನಿಯಾ ಮಿರ್ಜಾ ವಿವಾಹದ ನಂತರ ಇದೇ ಮಾದರಿಯಲ್ಲಿ ಮತ್ತೋರ್ವ ಪಾಕಿಸ್ತಾನದ ಕ್ರಿಕೆಟಿಗ ಭಾರತೀಯ ಯುವತಿಯನ್ನು ದುಬೈನಲ್ಲಿ ಆಗಸ್ಟ್ 20ರಂದು ವಿವಾಹವಾಗಲಿದ್ದಾರೆ.
ಪಾಕಿಸ್ತಾನದ ಬಲಗೈ ವೇಗಿ ಹಸನ್ ಅಲಿ ಭಾರತೀಯ ಮೂಲದ ಶಾಮಿಯಾ ಅರ್ಜೂ ಅವರನ್ನು ಮದುವೆಯಾಗಲಿದ್ದಾರೆ. ಅರ್ಜೂ ದೆಹಲಿಯಲ್ಲಿ ನೆಲೆಸಿದ್ದು ವಿಮಾನ ಇಂಜಿನಿಯರ್ ಆಗಿದ್ದು ಎಮಿರೇಟ್ಸ್ ಏರ್ ಲೈನ್ಸ್ ನಲ್ಲಿ ಕೆಲಸ ಮಾಡುತ್ತಿದ್ದಾರೆ.
ದುಬೈ ನಲ್ಲಿ ಇಬ್ಬರ ವಿವಾಹ ನಡೆಯಲಿದೆ. 25 ವರ್ಷದ ಹಸನ್ ಅರ್ಜೂ ನಡುವೆ ವಿಶ್ವಕಪ್ ಟೂರ್ನಿ ವೇಳೆ ಪ್ರೇಮಾಂಕುರವಾಗಿತ್ತು.
ಶೋಯೆಬ್ ಮಲೀಕ್, ಜಹೀರ್ ಅಬ್ಬಾಸ್, ಮೊಹ್ಸಿನ್ ಖಾನ್ ಬಳಿಕ ಭಾರತೀಯ ಯುವತಿಯನ್ನು ವಿವಾಹವಾಗುತ್ತಿರುವ 4 ನೇ ಪಾಕ್ ಕ್ರಿಕೆಟಿಗ ಹಸನ್ ಅರ್ಜೂ ಆಗಿದ್ದಾನೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
CricketDubaiದುಬೈPakistanIndian girlಪಾಕಿಸ್ತಾನ ಕ್ರಿಕೆಟಿಗಭಾರತೀಯ ಯುವತಿHasan Aliಹಸನ್ ಅಲಿShamia Arzooಶಾಮಿಯಾ ಅರ್ಜೂ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


