ಈ ಟೂರ್ನಿಗೆ ಅಂತಾ ಮಹತ್ವವಿಲ್ಲವೆಂದು ಬೌಲಿಂಗ್ ಶೈಲಿಯನ್ನೇ ಬದಲಿಸಿದ್ರಾ ಅಶ್ವಿನ್, ವಿಡಿಯೋ ವೈರಲ್!
ರವಿಚಂದ್ರನ್ ಅಶ್ವಿನ್ ಇದೀಗ ಟಿಎನ್‌ಪಿಎಲ್ ನಲ್ಲಿ ವಿಚಿತ್ರ ರೀತಿಯಲ್ಲಿ ಬೌಲಿಂಗ್ ಮಾಡಿ ವಿಕೆಟ್ ಪಡೆದು ಕ್ರಿಕೆಟ್ ಅಭಿಮಾನಿಗಳ ಆಕ್ರೋಶಕ್ಕೆ ಗುರಿಯಾಗಿದ್ದರು. ಆದರೆ ಈ ಟೂರ್ನಿಯಲ್ಲಿ ಹೆಚ್ಚಾಗಿ...

Published On :
ಚೆನ್ನೈ: ರವಿಚಂದ್ರನ್ ಅಶ್ವಿನ್ ಇದೀಗ ಟಿಎನ್‌ಪಿಎಲ್ ನಲ್ಲಿ ವಿಚಿತ್ರ ರೀತಿಯಲ್ಲಿ ಬೌಲಿಂಗ್ ಮಾಡಿ ವಿಕೆಟ್ ಪಡೆದು ಕ್ರಿಕೆಟ್ ಅಭಿಮಾನಿಗಳ ಆಕ್ರೋಶಕ್ಕೆ ಗುರಿಯಾಗಿದ್ದರು. ಆದರೆ ಈ ಟೂರ್ನಿಯಲ್ಲಿ ಹೆಚ್ಚಾಗಿ ಅಶ್ವಿನ್ ಈ ರೀತಿಯ ಬೌಲಿಂಗ್ ಮಾಡುತ್ತಿರುವುದು ಕಾಣಿಸುತ್ತಿದೆ.
ತಮಿಳುನಾಡು ಪ್ರಿಮಿಯರ್ ಲೀಗ್(ಟಿಎನ್‌ಪಿಎಲ್)ನಲ್ಲಿ ದಿಂಡಗಲ್ ಡ್ರಾಗನ್ಸ್ ಪರ ಅಶ್ವಿನ್ ಆಡುತ್ತಿದ್ದಾರೆ. ಇಂದು ನಡೆದ ರುಬಿ ತಿರುಚಿ ವಾರಿಯರ್ಸ್ ವಿರುದ್ಧದ ಪಂದ್ಯದಲ್ಲಿ ಅಶ್ವಿನ್ ಬೌಲಿಂಗ್ ಶೈಲಿಯನ್ನು ಬದಲಿಸಿದ್ದಾರೆ. ಇದೇ ವೇಳೆ ತಿರುಚಿ ತಂಡದ ಬ್ಯಾಟ್ಸ್ ಮನ್ ಮುರಳಿ ವಿಜಯ್ ಎಡಗೈ ಬ್ಯಾಟಿಂಗ್ ಮಾಡಿದ್ದು ಕುತುಹೂಲ ಕೆರಳಿಸಿದೆ. ಟೀಂ ಇಂಡಿಯಾ ಪರ ಆಡುವ ಮುರಳಿ ವಿಜಯ್ ಬಲಗೈ ಬ್ಯಾಟ್ಸ್ ಮ್ಯಾನ್ ಆಗಿದ್ದಾರೆ.
ಈ ಹಿಂದೆ ದಿಂಡಗಲ್ ಡ್ರಾಗನ್ಸ್ ಮತ್ತು ಮಧುರೈ ಪ್ಯಾಂಥರ್ಸ್ ನಡುವಿನ ಪಂದ್ಯ ಹಿಂದೆದೂ ಕಾಣದಂತ ಎಸೆತಕ್ಕೆ ಸಾಕ್ಷಿಯಾಗಿತ್ತು. ಆರ್ ಅಶ್ವಿನ್ ಬೌಲಿಂಗ್ ಶೈಲಿಯನ್ನು ಬಿಟ್ಟು ಚಿಕ್ಕ ಮಕ್ಕಳು ಚೆಂಡನ್ನು ಎಸೆಯುವಂತೆ ಬೌಲಿಂಗ್ ಮಾಡಿ ಎಲ್ ಕೆ ಆಕಾಶ್ ವಿಕೆಟ್ ಪಡೆದಿದ್ದು ಈ ವಿಡಿಯೋ ಸಖತ್ ವೈರಲ್ ಆಗಿತ್ತು.
Murali Vijay batting left handed
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


