ಐಪಿಎಲ್ 2019: ಆರ್‌ಸಿಬಿ ಗೆಲುವಿಗೆ 188 ಗುರಿ
ಐಪಿಎಲ್ 2019ನೇ ಆವೃತ್ತಿಯ ಭಾನುವಾರದ ಪಂದ್ಯದಲ್ಲಿ ಟಾಸ್ ಗೆದ್ದ ಡೆಲ್ಲಿ ಕ್ಯಾಪಿಟಲ್ಸ್ ನಿಗದಿತ ೨೦ ಓವರ್ ಗಳಲ್ಲಿ 5.ವಿಕೆಟ್ ನಷ್ಟಕ್ಕೆ 187 ರನ್ ಗಳಿಸಿದೆ. ಈ ಮೂಲಕ ಆರ್‌ಸಿಬಿಗೆ ಗೆಲ್ಲಲು 188ರನ್ ಟಾರ್ಗೆಟ್ ನೀಡಿದೆ.

Published On :
ನವದೆಹಲಿ: ಐಪಿಎಲ್ 2019ನೇ ಆವೃತ್ತಿಯ ಭಾನುವಾರದ ಪಂದ್ಯದಲ್ಲಿ ಟಾಸ್ ಗೆದ್ದ ಡೆಲ್ಲಿ ಕ್ಯಾಪಿಟಲ್ಸ್ ನಿಗದಿತ 20 ಓವರ್ ಗಳಲ್ಲಿ 5.ವಿಕೆಟ್ ನಷ್ಟಕ್ಕೆ 187 ರನ್ ಗಳಿಸಿದೆ. ಈ ಮೂಲಕ ಆರ್‌ಸಿಬಿಗೆ ಗೆಲ್ಲಲು 188ರನ್ ಟಾರ್ಗೆಟ್ ನೀಡಿದೆ.
ಪ್ರಾರಂಭಿಕ ಆಟಗಾರನಾಗಿದ್ದ ಶಿಖರ್ ಧವನ್ (50) ಹಾಗೂ ನಾಯಕ ಶ್ರೇಯಸ್ ಅಯ್ಯರ್ (52) ಉತ್ತಮ ಪ್ರದರ್ಶನ ನೀಡುವುದರೊಡನೆ ಡೆಲ್ಲಿ ಸ್ಪರ್ಧಾತ್ಮಕ ಮೊತ್ತ ಪೇರಿಸಲು ನೆರವಾದರು.
ಇನ್ನು ಪೃಥ್ವಿ ಶಾ 18, ರಿಷಬ್ ಪಂತ್ 7, ಕಾಲಿನ್ ಇನ್‌ಗ್ರಾಂ 11, ಶೆರ್ಫಾನ್ ರುಥರ್‌ಫಾರ್ಡ್ ಔಟಾಗದೆ 28 ರನ್ ಹಾಗೂ ಅಕ್ಷರ್ ಪಟೇಲ್ 16 ರನ್ ಕಲೆ ಹಾಕಿದ್ದರು.
ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ವೈ. ಚಹಾಲ್ 2, ನವದೀಪ್ ಸಾನಿ, ಉಮೇಶ್ ಯಾದವ್, ವಾಷಿಂಗ್ಟನ್ ಸುಂದರ್ ತಲಾ ಒಂದೊಂದು ವಿಕೆಟ್ ಕಬಳಿಸಿ ಗಮನ ಸೆಳೆದರು.
ಡೆಲ್ಲಿ ಕ್ಯಾಪಿಟಲ್ ಒಡ್ಡಿರುವ ಗುರಿಯನ್ನು ಬೆನ್ನತ್ತಿರುವ ವಿರಾಟ್ ಕೊಹ್ಲಿ ಪಡೆ ಇತ್ತೀಚಿನ ವರದಿ ಬಂದಾಗ 9 ಓವರ್ ಗಳಲ್ಲಿ 2 ವಿಕೆಟ್ ನಷ್ಟಕ್ಕೆ 82 ರನ್ ಗಳಿಸಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


