ಶಿಖರ್ ಧವನ್ ಗೂ ಮಂಕಡ್ ಚಮಕ್ ಕೊಟ್ಟ ಅಶ್ವಿನ್..! ಧವನ್ ಕೊಟ್ಟ ಪ್ರತಿಕ್ರಿಯೆಗೆ ಕ್ರೀಡಾಂಗಣದಲ್ಲಿ ನಗುವಿನ ಅಲೆ!
ಟೀಂ ಇಂಡಿಯಾದ ಸಹ ಆಟಗಾರ ಶಿಖರ್ ಧವನ್ ಗೂ ಅಶ್ವಿನ್ ಮಂಕಡ್ ರನೌಟ್ ಚಮಕ್ ನೀಡಿದ್ದು, ಅಶ್ವಿನ್ ಚಮಕ್ ಗೆ ಶಿಖರ್ ಧವನ್ ತಮ್ಮದೇ ಆದ ಶೈಲಿಯಲ್ಲಿ ಹಾಸ್ಯಾತ್ಮಕ ತಿರುಗೇಟು ನೀಡಿದ್ದಾರೆ.

Published On :
ನವದೆಹಲಿ: ಟೀಂ ಇಂಡಿಯಾದ ಸಹ ಆಟಗಾರ ಶಿಖರ್ ಧವನ್ ಗೂ ಅಶ್ವಿನ್ ಮಂಕಡ್ ರನೌಟ್ ಚಮಕ್ ನೀಡಿದ್ದು, ಅಶ್ವಿನ್ ಚಮಕ್ ಗೆ ಶಿಖರ್ ಧವನ್ ತಮ್ಮದೇ ಆದ ಶೈಲಿಯಲ್ಲಿ ಹಾಸ್ಯಾತ್ಮಕ ತಿರುಗೇಟು ನೀಡಿದ್ದಾರೆ.
ಹಾಲಿ ಐಪಿಎಲ್ ಟೂರ್ನಿಯಲ್ಲಿ ಬ್ಯಾಟ್ಸಮನ್ ಸಿಕ್ಸರ್ ಗಳಿಗಿಂತಲೂ ಅಶ್ವಿನ್ ಅವರ ಮಂಕಡ್ ವಿಚಾರ ಮತ್ತೆ ಮತ್ತೆ ಚರ್ಚೆಗೆ ಗುರಿಯಾಗುತ್ತಿದ್ದು, ಈ ಹಿಂದೆ ಜಾಸ್ ಬಟ್ಲರ್ ರನ್ನು ಮಂಕಡ್ ರನೌಟ್ ಮಾಡಿ ವಿವಾದಕ್ಕೀಡಾಗಿದ್ದ ಅಶ್ವಿನ್ ಈ ಬಾರಿ ತಮ್ಮ ಸ್ನೇಹಿತ ಸಹ ಆಟಗಾರ ಶಿಖರ್ ಧವನ್ ಗೂ ಮಂಕಡ್ ಚಮಕ್ ನೀಡಿದ್ದಾರೆ. ಅಂತೆಯೇ ಶಿಖರ್ ಧವನ್ ಕೂಡ ತಮ್ಮದೇ ಹಾಸ್ಯಾತ್ಮಕ ಶೈಲಿಯಲ್ಲಿ ಅಶ್ವಿನ್ ಗೆ ತಿರುಗೇಟು ನೀಡಿದ್ದಾರೆ. ಅಶ್ವಿನ್ ಮತ್ತು ಧವನ್ ಪ್ರಸಂಗದಿಂದಾಗಿ ದೆಹಲಿಯ ಫಿರೋಜ್ ಶಾ ಕೋಟ್ಲಾ ಮೈದಾನದಲ್ಲಿ ನೆರೆದಿದ್ದ ಕ್ರೀಡಾಭಿಮಾನಿಗಳು ಕೆಲಕಾಲ ನಗುವಿನ ಅಲೆಯಲ್ಲಿ ತೇಲಿದ್ದರು.
ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ವಿಡಿಯೋವನ್ನು ಸಾಕಷ್ಟು ಮಂದಿ ಶೇರ್ ಮಾಡುತ್ತಿದ್ದಾರೆ.
ಇನ್ನು ಇತ್ತೀಚೆಗಷ್ಟೇ ಕೋಲ್ಕತಾ ನೈಟ್ ರೈಡರ್ಸ್ ತಂಡದ ಬೌಲರ್ ಸುನಿಲ್ ನರೇನ್ ಕೊಹ್ಲಿಗೆ ಮಂಕಡ್ ಚಮಕ್ ನೀಡಿದ್ದಾಗ ಕೊಹ್ಲಿ ಕುಳಿತುಕೊಂಡು ಬ್ಯಾಟ್ ಅನ್ನು ಕ್ರಿಸ್ ನಲ್ಲಿ ಇಡುವ ಮೂಲಕ ನನ್ನನ್ನು ಮಂಕಡ್ ರನೌಟ್ ಮಾಡಲು ಸಾಧ್ಯವಿಲ್ಲ ಎಂಬಂತೆ ತೋರಿಸಿದ್ದರು. ಈ ವಿಡಿಯೋ ಕೂಡ ವ್ಯಾಪಕ ವೈರಲ್ ಆಗಿತ್ತು.
WATCH: Shikhar's dance moves on the crease
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Cricketಕ್ರಿಕೆಟ್ನವದೆಹಲಿNew DelhiShikhar Dhawanಶಿಖರ್ ಧವನ್Ravichandran Ashwinರವಿಚಂದ್ರನ್ ಅಶ್ವಿನ್IPL 2019ಐಪಿಎಲ್ 2019mankadಮಂಕಡ್
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


