ಐಪಿಎಲ್ 2019: ನಾಯಕತ್ವದಿಂದ ರಹಾನೆ ಕಿಕ್ ಔಟ್, ಸ್ಟೀವ್ ಸ್ಮಿತ್ ರಾಜಸ್ಥಾನ ರಾಯಲ್ಸ್ ಹೊಸ ಸಾರಥಿ..!
ಹಾಲಿ ಐಪಿಎಲ್ ಟೂರ್ನಿಯಲ್ಲಿ ರಾಜಸ್ಥಾನ ತಂಡದ ಟೀಮ್ ಮ್ಯಾನೇಜ್ ಮೆಂಟ್ ಮಹತ್ತರ ಬದಲಾವಣೆ ಮಾಡಿದ್ದು, ನಾಯಕನ ಸ್ಥಾನದಿಂದ ಅಜಿಂಕ್ಯಾ ರಹಾನೆ ಅವರನ್ನು ಕಿಕ್ ಔಟ್ ಮಾಡಲಾಗಿದೆ.

Published On :
ಜೈಪುರ: ಹಾಲಿ ಐಪಿಎಲ್ ಟೂರ್ನಿಯಲ್ಲಿ ರಾಜಸ್ಥಾನ ತಂಡದ ಟೀಮ್ ಮ್ಯಾನೇಜ್ ಮೆಂಟ್ ಮಹತ್ತರ ಬದಲಾವಣೆ ಮಾಡಿದ್ದು, ನಾಯಕನ ಸ್ಥಾನದಿಂದ ಅಜಿಂಕ್ಯಾ ರಹಾನೆ ಅವರನ್ನು ಕಿಕ್ ಔಟ್ ಮಾಡಲಾಗಿದೆ.
ಅಂತೆಯೇ ಐಪಿಎಲ್ ನ ರಾಜಸ್ಥಾನ ರಾಯಲ್ಸ್ ತಂಡದ ನೂತನ ನಾಯಕನಾಗಿ, ಆಸ್ಟ್ರೇಲಿಯಾ ಮಾಜಿ ಕ್ಯಾಪ್ಟನ್ ಸ್ಟೀವ್ ಸ್ಮಿತ್ ಆಯ್ಕೆಯಾಗಿದ್ದಾರೆ. ನಾಯಕತ್ವದಿಂದ ಅಜಿಂಕ್ಯಾ ರಹಾನೆಗೆ ಆರ್ ಆರ್ ಮ್ಯಾನೇಜ್ಮೆಂಟ್ ಕೊಕ್ ನೀಡಿದೆ. ಟೂರ್ನಿಯಲ್ಲಿ ರಾಯಲ್ಸ್ ಆಡಲಿರುವ ಉಳಿದ ಪಂದ್ಯಗಳಲ್ಲಿ ತಂಡವನ್ನ ಸ್ಮಿತ್ ಮುನ್ನಡೆಸಲಿದ್ದಾರೆ.
ಈ ಬಾರಿಯ ಐಪಿಎಲ್ನಲ್ಲಿ ರಹಾನೆ ನಾಯಕತ್ವದಲ್ಲಿ ಆರ್ಆರ್ ಕಳಪೆ ಪ್ರದರ್ಶನ ನೀಡಿದ್ದು, 8 ಪಂದ್ಯಗಳಲ್ಲಿ 2ರಲ್ಲಿ ಮಾತ್ರ ಜಯಗಳಿಸಿದೆ. ಪಾಯಿಂಟ್ ಪಟ್ಟಿಯಲ್ಲಿ 7ನೇ ಸ್ಥಾನದಲ್ಲಿದೆ. ಕಠಿಣ ಸಂದರ್ಭದಲ್ಲು ರಹಾನೆ ತಂಡವನ್ನ ಉತ್ತಮವಾಗಿ ಮುನ್ನಡೆಸಿದ್ದಾರೆ. ಆದರೆ ನಾಯಕನಾಗಿ ಸ್ಮಿತ್ ಉತ್ತಮ ದಾಖಲೆ ಹೊಂದಿದ್ದಾರೆ. ಹೀಗಾಗಿ ಅವರನ್ನು ಹೊಸ ನಾಯಕರಾಗಿ ನೇಮಕ ಮಾಡಲಾಗಿದೆ ಎಂದು ಆರ್ ಆರ್ ತಂಡದ ಮೂಲಗಳು ತಿಳಿಸಿವೆ. ಸದ್ಯ ಮುಂಬೈ ಇಂಡಿಯನ್ಸ್ ವಿರುದ್ಧ ನಡೆದ ಪಂದ್ಯದಿಂದಲೇ ಸ್ಮಿತ್ ಆರ್ ಆರ್ ಸಾರಥ್ಯ ವಹಿಸಿ ಹಾಲಿ ಟೂರ್ನಿಯ ಮೊದಲ ಪಂದ್ಯದಲ್ಲೇ ಗೆಲುವು ಸಾಧಿಸಿದ್ದು, ತಂಡದ ನಿರ್ಧಾರಕ್ಕೆ ನ್ಯಾಯ ಒದಗಿಸಿದ್ದಾರೆ ಎನ್ನಲಾಗುತ್ತಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Cricketಕ್ರಿಕೆಟ್JaipurಜೈಪುರAjinkya RahaneSteve SmithRajasthan Royalsರಾಜಸ್ತಾನ ರಾಯಲ್ಸ್ಸ್ಟೀವ್ ಸ್ಮಿತ್ಅಜಿಂಕ್ಯಾ ರಹಾನೆIPL 2019ಐಪಿಎಲ್ 2019
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


