ವೃತ್ತಿಯಲ್ಲಿ ಎದುರಾಳಿ ಆದರೆ ಸಲಿಂಗಿ ಮದುವೆ ಮೂಲಕ ಒಂದಾದ ಆಸೀಸ್-ಕಿವೀಸ್ ಕ್ರಿಕೆಟ್ ಆಟಗಾರ್ತಿಯರು!
ಆಸ್ಟ್ರೇಲಿಯಾ ತಂಡದ ನಿಕೋಲಾ ಹ್ಯಾಂಕಾಕ್ ನ್ಯೂಜಿಲ್ಯಾಂಡ್ ಮಹಿಳಾ ತಂಡದ ಆಟಗಾರ್ತಿ ಹೇಯ್ಲೆ ಜೆನ್ಸನ್ ರನ್ನು ಸಲಿಂಗಿ ಮದುವೆಯಾಗಿದ್ದಾರೆ.

Published On :
ಸಿಡ್ನಿ: ಆಸ್ಟ್ರೇಲಿಯಾ ತಂಡದ ನಿಕೋಲಾ ಹ್ಯಾಂಕಾಕ್ ನ್ಯೂಜಿಲ್ಯಾಂಡ್ ಮಹಿಳಾ ತಂಡದ ಆಟಗಾರ್ತಿ ಹೇಯ್ಲೆ ಜೆನ್ಸನ್ ರನ್ನು ಸಲಿಂಗಿ ಮದುವೆಯಾಗಿದ್ದಾರೆ.
ಆಸ್ಟ್ರೇಲಿಯಾದ ಮೆಲ್ಬರ್ನ್ ಸ್ಟಾರ್ ತಂಡದ ಪರ ಬಿಗ್ ಬ್ಯಾಶ್ ಟೂರ್ನಿಯಲ್ಲಿ ಹೇಯ್ಲೆ ಜೆನ್ಸನ್ ಭಾಗವಹಿಸಿದ್ದರು. ಇತ್ತ ಇದೇ ತಂಡದಲ್ಲಿ ಆಡುತ್ತಿದ್ದ ನಿಕೋಲಾ ನಡುವೆ ಪ್ರೇಮಾಂಕುರವಾಗಿ ಒಂದು ವಾರದ ಹಿಂದೆಯಷ್ಟೇ ಮದುವೆಯಾಗಿದ್ದಾರೆ.
2014ರಲ್ಲಿ ಜೆನ್ಸನ್ ನ್ಯೂಜಿಲ್ಯಾಂಡ್ ತಂಡಕ್ಕೆ ಪಾದಾರ್ಪಣೆ ಮಾಡಿದ್ದರು. ಸದ್ಯ ಇಬ್ಬರ ಮದುವೆ ಕುರಿತಂತೆ ಮೆಲ್ಬರ್ನ್ ಕ್ರಿಕೆಟ್ ಕ್ಲಬ್ ತನ್ನ ಟ್ವೀಟರ್ ನಲ್ಲಿ ಪ್ರಕಟಿಸಿ ಫೋಟೋ ಅಪ್ಲೋಡ್ ಮಾಡಿದೆ.
2018ರಲ್ಲಿ ದಕ್ಷಿಣ ಆಫ್ರಿಕಾದ ಆಟಗಾರ್ತಿರಾದ ಡೇನ್ ವ್ಯಾನ್ ನಿಕೆರ್ಕ್, ಮರಿಝೂನ್ ಕಾಪ್ ಸಲಿಂಗಿ ಮದುವೆಯಾಗಿದ್ದರು. ಅಲ್ಲದೇ ನ್ಯೂಜಿಲ್ಯಾಂಡ್ ತಂಡದ ಮಹಿಳಾ ತಂಡದ ಆಮಿ ಸಟರ್ತೈಟ್ ಹಾಗೂ ಲೀ ಟಾಹುಹು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು.
From #TeamGreen, congratulations to Stars bowler Nicola Hancock who married her partner Hayley Jensen last weekend!
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


