ವಿಶ್ವಕಪ್ ತಂಡದಲ್ಲಿ ರಿಷಬ್ ಪಂತ್‌ಗೆ ಸ್ಥಾನ ಸಿಗದೇ ಇರುವುದು ಬೇಸರ ತಂದಿದೆ: ರಿಕ್ಕಿ ಪಾಂಟಿಂಗ್
ಸ್ಟಾರ್ ಆಟಗಾರ ರಿಷಭ್ ಪಂತ್ ಅವರಿಗೆ ಭಾರತ ವಿಶ್ವಕಪ್ ತಂಡದಲ್ಲಿ ಸ್ಥಾನ ಲಭಿಸದಕ್ಕೆ ಆಸ್ಟ್ರೇಲಿಯಾ ವಿಶ್ವ ವಿಜೇತ ತಂಡದ ನಾಯಕ, ಡೆಲ್ಲಿ ತಂಡದ ಮುಖ್ಯ ಕೋಚ್ ರಿಕ್ಕಿ ಪಾಂಟಿಂಗ್ ನಿರಾಸೆ ವ್ಯಕ್ತಪಡಿಸಿದ್ದಾರೆ.

Published On :
ನವದೆಹಲಿ: ವಿಶ್ವಕಪ್ ಮಹಾಸಮರಕ್ಕೆ ಸ್ಟಾರ್ ಆಟಗಾರ ರಿಷಭ್ ಪಂತ್ ಅವರಿಗೆ ಟೀಂ ಇಂಡಿಯಾ ತಂಡದಲ್ಲಿ ಸ್ಥಾನ ಲಭಿಸದಕ್ಕೆ ಆಸ್ಟ್ರೇಲಿಯಾ ವಿಶ್ವ ವಿಜೇತ ತಂಡದ ನಾಯಕ, ಡೆಲ್ಲಿ ತಂಡದ ಮುಖ್ಯ ಕೋಚ್ ರಿಕ್ಕಿ ಪಾಂಟಿಂಗ್ ನಿರಾಸೆ ವ್ಯಕ್ತಪಡಿಸಿದ್ದಾರೆ.
ರಿಕ್ಕಿ ಪಾಂಟಿಂಗ್ ಅವರು ಪಂತ್ ಪರ ಹಲವು ಬಾರಿ ಬ್ಯಾಟ್ ಮಾಡಿದ್ದರು. ಆದರೆ ಆಯ್ಕೆ ಸಮಿತಿ ಪಂತ್ ಅವರನ್ನು ಕೈ ಬಿಟ್ಟು ಎರಡನೇ ವಿಕೆಟ್ ಕೀಪರ್ ರೂಪದಲ್ಲಿ ಅನುಭವಿ ದಿನೇಶ್ ಕಾರ್ತಿಕ್ ಅವರಿಗೆ ಮಣೆ ಹಾಕಿದೆ.
'ನಾನು ಪಂತ್ ಅವರೊಂದಿಗೆ ಸೋಮವಾರ ರಾತ್ರಿ ಮಾತನಾಡಿದ್ದು, ಅವರಿಗೆ ಕೊಂಚ ಬೇಸರವಾಗಿದೆ. ಅವರು ಬೇರೆ ಆಟಗಾರರಂತೆ ವಿಶ್ವಕಪ್ ತಂಡದಲ್ಲಿ ಸ್ಥಾನ ಲಭಿಸದ ನೋವು ಆಗಿದೆ. ಪಂತ್ ಗೆ ಇನ್ನು ಸಾಕಷ್ಟು ಅವಕಾಶವಿದ್ದು, ಕನಿಷ್ಠ ಮೂರರಿಂದ ನಾಲ್ಕು ವಿಶ್ವಕಪ್ ಆಡಬಲ್ಲರು' ಎಂದು ಪಾಂಟಿಂಗ್ ಅಭಿಪ್ರಾಯ ಪಟ್ಟಿದ್ದಾರೆ.
ಭಾರತ ತಂಡದಲ್ಲಿ ಸ್ಥಾನ ಸಿಗದೇ ಇರುವುದು ಪಂತ್ ಗೆ ಕೊಂಚ ಬೇಸರ ಮೂಡಿಸಿದೆ. ಆದರೆ ಅವರು ಈ ಎಲ್ಲ ಒತ್ತಡ ಮೆಟ್ಟಿನಿಂತು ಡೆಲ್ಲಿ ಕ್ಯಾಪಿಟಲ್ಸ್ ಪರ ಸ್ಥಿರ ಪ್ರದರ್ಶನ ನೀಡಬಲ್ಲರು. ಈ ಹಿಂದೆ ತಿಳಿಸಿರುವಂತೆ ಪಂತ್ ಪಂದ್ಯದ ಗತಿಯನ್ನು ಬದಲಿಸಬಲ್ಲ ಆಟಗಾರ ಎಂದು ತಿಳಿಸಿದ್ದಾರೆ.
ಪಂತ್ ಅವರು ಇನ್ನಷ್ಟು ಕಠಿಣ ಅಭ್ಯಾಸ ನಡೆಸಿ ಭಾರತ ತಂಡ ಸೇರಲಿ. ಇನ್ನು ಅವರು ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆಯಲು ಏನು ಮಾಡಲು ಸಾಧ್ಯವಿಲ್ಲ. ಆದರೆ ಡೆಲ್ಲಿ ತಂಡಕ್ಕೆ ಮುಂದಿನ ದಿನಗಳಲ್ಲಿ ಪಂದ್ಯ ಗೆಲ್ಲಿಸುವಲ್ಲಿ ಪ್ರಮುಖ ಪಾತ್ರ ವಹಿಸಬೇಕಿದೆ ಎಂದು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Cricketಕ್ರಿಕೆಟ್ಟೀಂ ಇಂಡಿಯಾTeam IndiaRishabh PantRicky Pontingರಿಕ್ಕಿ ಪಾಂಟಿಂಗ್ರಿಷಬ್ ಪಂತ್World Cup 2019ವಿಶ್ವಕಪ್ 2019
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


