ಮುಂಬೈ ವಿರುದ್ಧ ಆರ್‌ಸಿಬಿ ಮುಗ್ಗರಿಸಲು ನೆಹ್ರಾ ಕಾರಣನಾ? ಕೊಹ್ಲಿ ವಿರುದ್ದ ವ್ಯಾಪಕ ಟೀಕೆ, ಏನಿದು ವಿಡಿಯೋ!
ಸತತ ಆರು ಪಂದ್ಯಗಳ ಸೋಲಿನ ಬಳಿಕ ಏಳನೇ ಪಂದ್ಯದಲ್ಲಿ ಗೆಲುವು ಸಾಧಿಸುವ ಮೂಲಕ ಆರ್‌ಸಿಬಿ ತಂಡ ಕೊಂಚ ಭರವಸೆ ಮೂಡಿಸಿತ್ತು. ಆದರೆ 8 ಪಂದ್ಯದಲ್ಲೂ ಮುಂಬೈ ವಿರುದ್ಧ ಕೊಹ್ಲಿ ಪಡೆ ಮತ್ತೆ ಮುಗ್ಗರಿಸಿದೆ.

Published On :
ಮುಂಬೈ: ಸತತ ಆರು ಪಂದ್ಯಗಳ ಸೋಲಿನ ಬಳಿಕ ಏಳನೇ ಪಂದ್ಯದಲ್ಲಿ ಗೆಲುವು ಸಾಧಿಸುವ ಮೂಲಕ ಆರ್‌ಸಿಬಿ ತಂಡ ಕೊಂಚ ಭರವಸೆ ಮೂಡಿಸಿತ್ತು. ಆದರೆ 8 ಪಂದ್ಯದಲ್ಲೂ ಮುಂಬೈ ವಿರುದ್ಧ ಕೊಹ್ಲಿ ಪಡೆ ಮತ್ತೆ ಮುಗ್ಗರಿಸಿದ್ದು ತಂಡದ ಸೋಲಿಗೆ ಬೌಲಿಂಗ್ ಕೋಚ್ ಆಶಿಶ್ ನೆಹ್ರಾ ಕಾರಣಾನಾ? ಈ ವಿಡಿಯೋವನ್ನು ಟ್ವೀಟ್ ಮಾಡುತ್ತಾ ನೆಟಿಗರು ನಾಯಕ ಕೊಹ್ಲಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮುಂಬೈ ವಿರುದ್ಧದ ಪಂದ್ಯದ ವೇಳೆ ತಂಡದ ನಾಯಕ ವಿರಾಟ್ ಕೊಹ್ಲಿಯನ್ನು ಬೌಲಿಂಗ್ ಕೋಚ್ ಆಶಿಶ್ ನೆಹ್ರಾ ನಿಯಂತ್ರಿಸುತ್ತಿರುವುದು ಕಂಡುಬಂದಿತ್ತು. ನಿರ್ಣಾಯಕ 19ನೇ ಓವರ್ ಪವನ್ ನೇಗಿಗೆ ನೀಡಲು ನೆಹ್ರಾ ಅವರೇ ಸಲಹೆ ಮಾಡುತ್ತಿದ್ದರು.
ಆಶಿಶ್ ನೆಹ್ರಾ ಅವರ ಸಲಹೆಯನ್ನು ಚಾಚು ತಪ್ಪದೇ ಕೊಹ್ಲಿ ಅನುಸರಿಸುತ್ತಿದ್ದದ್ದೆ ಸೋಲಿಗೆ ಕಾರಣ ಎನ್ನಲಾಗುತ್ತಿದೆ. ಇದಕ್ಕೆ ಸಂಬಂಧಿಸಿದಂತೆ ವ್ಯಾಪಕ ಟ್ರೋಲ್ ಗಳು ಹರಿದಾಡುತ್ತಿದೆ. 19ನೇ ಓವರ್ ಅನ್ನು ಕೊಹ್ಲಿ ಬಲಗೈ ವೇಗಿ ನವದೀಪ್ ಸೈನಿಗೆ ನೀಡಲು ಮುಂದಾಗಿದ್ದರು. ಈ ಹಂತದಲ್ಲಿ ಸ್ಪಿನ್ನರ್ ಗೆ ನೀಡಲು ನೆಹ್ರಾ ಸೂಚಿಸಿದ್ದರು. ಪರಿಣಾಮ ಪವನ್ ನೇಗಿ ದಾಳಿಯಲ್ಲಿ 22 ರನ್ ಚಚ್ಚಿಸಿಕೊಂಡರು. ಇದರೊಂದಿಗೆ ಇನ್ನು ಒಂದು ಓವರ್ ಬಾಕಿ ಇರುವಂತೆ ಪಂದ್ಯದಲ್ಲಿ ಮುಂಬೈ ಗೆಲುವು ಸಾಧಿಸಿತ್ತು.
Sir Ashish Nehra told to go for spinner "Pawan Negi"
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Virat Kohliವಿರಾಟ್ ಕೊಹ್ಲಿRCBಆರ್‌ಸಿಬಿAshish NehraCricket Offbeatಕ್ರಿಕೆಟ್ ಸ್ವಾರಸ್ಯಆಶಿಶ್ ನೆಹ್ರಾIPL 2019ಐಪಿಎಲ್ 2019
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


