ಕ್ರಿಕೆಟ್

ನಾಳೆ ಬಿಸಿಸಿಐ ಅಧಿಕೃತ ಪ್ರಕಟಣೆ: ಇಂದು ಕನಸಿನ ವಿಶ್ವಕಪ್ ತಂಡ ಪ್ರಕಟಿಸಿದ ಸೆಹ್ವಾಗ್, ರಾಹುಲ್‍ ಯಾಕೆ?

2019ರ ವಿಶ್ವಕಪ್ ಮಹಾಸಮರಕ್ಕೆ ಟೀಂ ಇಂಡಿಯಾ ತಂಡವನ್ನು ಬಿಸಿಸಿಐ ನಾಳೆ ಪ್ರಕಟಿಸಲಿದ್ದು ಇದಕ್ಕೆ ಮುನ್ನ ಮಾಜಿ ಆಟಗಾರ ವೀರೇಂದ್ರ ಸೆಹ್ವಾಗ್ ತಮ್ಮ ಕನಸಿನ...

ನಾಳೆ ಬಿಸಿಸಿಐ ಅಧಿಕೃತ ಪ್ರಕಟಣೆ: ಇಂದು ಕನಸಿನ ವಿಶ್ವಕಪ್ ತಂಡ ಪ್ರಕಟಿಸಿದ ಸೆಹ್ವಾಗ್, ರಾಹುಲ್‍ ಯಾಕೆ?
ವೀರೇಂದ್ರ ಸೆಹ್ವಾಗ್
Published On :
ಮುಂಬೈ: 2019ರ ವಿಶ್ವಕಪ್ ಮಹಾಸಮರಕ್ಕೆ ಟೀಂ ಇಂಡಿಯಾ ತಂಡವನ್ನು ಬಿಸಿಸಿಐ ನಾಳೆ ಪ್ರಕಟಿಸಲಿದ್ದು ಇದಕ್ಕೆ ಮುನ್ನ ಮಾಜಿ ಆಟಗಾರ ವೀರೇಂದ್ರ ಸೆಹ್ವಾಗ್ ತಮ್ಮ ಕನಸಿನ ವಿಶ್ವಕಪ್ ತಂಡವನ್ನು ಪ್ರಕಟಿಸಿದ್ದು ಯಾರೆಲ್ಲಾ ತಂಡದಲ್ಲಿ ಸ್ಥಾನಪಡೆದಿದ್ದಾರೆ.
ಈ ಹಿಂದಿನ ಟೀಂ ಇಂಡಿಯಾ ಪ್ರವಾಸದಲ್ಲಿ ಕನ್ನಡಿಗ ಕೆಎಲ್ ರಾಹುಲ್ ಹೇಳಿಕೊಳ್ಳುವಂತಾ ಆಟ ಪ್ರದರ್ಶಿಸಿಲ್ಲ. ಇದರಿಂದ ಟೀಕಾ ಪ್ರಹಾರಕ್ಕೆ ಗುರಿಯಾಗಿದ್ದರು. ಆದರೆ ಐಪಿಎಲ್ ನಲ್ಲಿ ಪಂಬಾಜ್ ಪರ ಆಡುತ್ತಿರುವ ಕೆಎಲ್ ರಾಹುಲ್ ಉತ್ತಮವಾಗಿ ಆಡುತ್ತಿದ್ದು ಇದರಿಂದಾಗಿ ಸೆಹ್ವಾಗ್ ತಮ್ಮ ತಂಡದಲ್ಲಿ ರಾಹುಲ್ ಗೆ ಸ್ಥಾನ ನೀಡಿದ್ದಾರೆ.
2015ರ ವಿಶ್ವಕಪ್ ತಂಡದ ಕೆಲ ಆಟಗಾರರನ್ನೇ ಸೆಹ್ವಾಗ್ ತಮ್ಮ ಕನಸಿನ ತಂಡಕ್ಕೆ ಆಯ್ಕೆ ಮಾಡಿಕೊಂಡಿದ್ದಾರೆ. 2015ರಲ್ಲಿ ಬೌಲಿಂಗ್ ತಂಡವನ್ನು ಸೆಹ್ವಾಗ್ ಮುಂದುವರೆಸಿಲ್ಲ. 
ಸೆಹ್ವಾಗ್ ಕನಸಿನ ತಂಡದಲ್ಲಿರುವ ಆಟಗಾರರು
ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಶಿಖರ್ ಧವನ್, ಎಂಎಸ್ ಧೋನಿ, ರವೀಂದ್ರ ಜಡೇಜಾ, ಭುವನೇಶ್ವರ್ ಕುಮಾರ್, ಮೊಹಮ್ಮದ್ ಶಮಿ, ಕೇದಾರ್ ಜಾದವ್, ಕೆಎಲ್ ರಾಹುಲ್, ಹಾರ್ದಿಕ್ ಪಾಂಡ್ಯ, ಕುಲದೀಪ್ ಯಾದವ್, ಯಜುವೇಂದ್ರ ಚಹಾಲ್, ವಿಜಯ್ ಶಂಕರ್

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.