ಧೋನಿಯ ಚಾಣಾಕ್ಷ ರನೌಟ್, ಆದರೆ ನಾಟೌಟ್; ಯಾಕೆ ಅಂತೀರಾ ಈ ವಿಡಿಯೋ ನೋಡಿ?
ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗ ಎಂಎಸ್ ಧೋನಿ ಹಿಮ್ಮುಖವಾಗಿ ರನೌಟ್ ಮಾಡುವುದರಲ್ಲಿ ನಿಸ್ಸೀಮರು. ಆದರೆ ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧದ ಪಂದ್ಯದಲ್ಲಿ...

Published On :
ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗ ಎಂಎಸ್ ಧೋನಿ ಹಿಮ್ಮುಖವಾಗಿ ರನೌಟ್ ಮಾಡುವುದರಲ್ಲಿ ನಿಸ್ಸೀಮರು. ಆದರೆ ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧದ ಪಂದ್ಯದಲ್ಲಿ ಮಾತ್ರ ರನೌಟ್ ಮಾಡಿದರೂ ನಾಟೌಟ್ ಆಗಿದ್ದು ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧದ ಪಂದ್ಯದ 13ನೇ ಓವರ್ ನಲ್ಲಿ ಕೆಎಲ್ ರಾಹುಲ್ ಬೌಲರ್ ರವೀಂದ್ರ ಜಡೇಜಾರ ಬೌಲಿಂಗ್ ನಲ್ಲಿ ಸ್ಲಿಪ್ ನಲ್ಲಿ ಹೊಡೆದು ಓಡಲು ಯತ್ನಿಸಿದರೂ ಈ ವೇಳೆ ಅಲರ್ಟ್ ಆದ ಧೋನಿ ಓಡಿ ಹೋಗಿ ಚೆಂಡನ್ನು ಹಿಡಿದು ಹಿಮ್ಮುಖವಾಗಿ ಸ್ಟಂಪ್ ಗೆ ಹಾಕಿದರೂ. ಚೆಂಡು ಸ್ಟಂಪ್ ಗೆ ಬಡಿದರೂ ಬೆಲ್ಸ್ ಕೆಳಗೆ ಬೀಳದಿದ್ದ ಕಾರಣ ನಾಟೌಟ್ ಆಗಿದೆ.
ಕೆಎಲ್ ರಾಹುಲ್ ರನೌಟ್ ಆಗಿದ್ದಾರೆ ಎಂದು ಖುಷಿಯಿಂದ ಓಡಿ ಬಂದ ಅಂಬಟ್ಟಿ ರಾಯುಡುಗೆ ಧೋನಿ ಕೂಲಾಗಿ ಉತ್ತರಿಸಿ ಸುಮ್ಮನೆ ಹೋಗು ಎಂದು ಹೇಳಿದ್ದಾರೆ.
ಈ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಪಂಜಾಬ್ ತಂಡವನ್ನು 22 ರನ್ ಗಳಿಂದ ಮಣಿಸಿ ಗೆಲುವಿನ ನಗೆ ಬೀರಿತು.
WATCH: Déjà vu - Dhoni creates magic, but bails still don't fall
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
MS DhoniKL Rahulಎಂಎಸ್ ಧೋನಿಕೆಎಲ್ ರಾಹುಲ್Kings XI Punjabಕಿಂಗ್ಸ್ ಇಲೆವೆನ್ ಪಂಜಾಬ್Cricket Offbeatಕ್ರಿಕೆಟ್ ಸ್ವಾರಸ್ಯIPL 2019ಐಪಿಎಲ್ 2019
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


