ಕ್ರಿಕೆಟ್

ಸತತ 5ನೇ ಪಂದ್ಯ ಸೋಲು: ಆರ್‌ಸಿಬಿ ಬೌಲರ್ಗಳಿಗೆ ಧೈರ್ಯ ಸಾಲದು; ಕೊಹ್ಲಿ ಆಕ್ರೋಶ

ಈ ಸಲ ಕಪ್ ನಮ್ದೆ ಎಂದು ಹೇಳಿಕೊಂಡು ತಿರುಗುತ್ತಿದ್ದ ಆರ್‌ಸಿಬಿ ಅಭಿಮಾನಿಗಳಿಗೆ ತಂಡ ಸತತ ಐದು ಪಂದ್ಯಗಳಲ್ಲಿ ಸೋಲು ಕಂಡಿರುವುದು ಆಕ್ರೋಶಕ್ಕೆ ಕಾರಣವಾಗಿದೆ.

ಸತತ 5ನೇ ಪಂದ್ಯ ಸೋಲು: ಆರ್‌ಸಿಬಿ ಬೌಲರ್ಗಳಿಗೆ ಧೈರ್ಯ ಸಾಲದು; ಕೊಹ್ಲಿ ಆಕ್ರೋಶ
ವಿರಾಟ್ ಕೊಹ್ಲಿ
Published On :
ಬೆಂಗಳೂರು: ಈ ಸಲ ಕಪ್ ನಮ್ದೆ ಎಂದು ಹೇಳಿಕೊಂಡು ತಿರುಗುತ್ತಿದ್ದ ಆರ್‌ಸಿಬಿ ಅಭಿಮಾನಿಗಳಿಗೆ ತಂಡ ಸತತ ಐದು ಪಂದ್ಯಗಳಲ್ಲಿ ಸೋಲು ಕಂಡಿರುವುದು ಆಕ್ರೋಶಕ್ಕೆ ಕಾರಣವಾಗಿದೆ. ಈ ಮಧ್ಯೆ ಆರ್‌ಸಿಬಿ ತಂಡದ ನಾಯಕ ವಿರಾಟ್ ಕೊಹ್ಲಿ ಬೌಲರ್ಗಳಿಗೆ ಧೈರ್ಯ ಸಾಲದು ಎಂದು ಕಿಡಿಕಾರಿದ್ದಾರೆ.
ನಿನ್ನೆ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯದಲ್ಲೂ ಆರ್ಸಿಬಿ 5 ವಿಕೆಟ್ ಗಳಿಂದ ಸೋಲು ಕಂಡಿತ್ತು. ಇದರಿಂದ ಬೌಲರ್ ಗಳ ವಿರುದ್ಧ ವಿರಾಟ್ ಕೊಹ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
206 ರನ್ ಟಾರ್ಗೆಟ್ ನೀಡಿದ್ದರೂ ಈ ಪಂದ್ಯದಲ್ಲಿ ಸೋಲ್ತೀವಿ ಅಂದುಕೊಂಡಿರಲಿಲ್ಲ. ಆದರೆ ಕೊನೆಯ ನಾಲ್ಕು ಓವರ್ ಗಳಲ್ಲಿನ ಬೌಲಿಂಗ್ ಅಂತೂ ಒಪ್ಪಲಾಗದು. ಐಪಿಎಲ್ ನಲ್ಲಿ ನಾವು ನಿಜವಾಗಿ ತೋರಿಸಬೇಕಿರುವ ಆಟ ಆಡಲಾಗುತ್ತಿಲ್ಲ. ಸಾಕಷ್ಟು ಧೈರ್ಯವಿಲ್ಲದೇ ಈ ರೀತಿ ಬೌಲಿಂಗ್ ಮಾಡಿದರೆ ಅಂಗಳದಲ್ಲಿ ರಸಲ್ ನಂತಹ ಹೊಡಿಬಡಿ ಆಟಗಾರನಿದ್ದಾಗ ನಮಗೆ ತೀರ ಕಠಿಣ ಎನಿಸುತ್ತದೆ ಎಂದು ಹೇಳಿಕೊಂಡಿದ್ದಾರೆ.
ಕಳಪೆ ಬೌಲಿಂಗ್ ಪ್ರದರ್ಶನ ನೀಡಿದರೆ ನಾವು ಒತ್ತಡ ಸನ್ನಿವೇಶಗಳನ್ನು ಸಮರ್ಥವಾಗಿ ನಿಭಾಯಿಸಲು ಆಗುವುದಿಲ್ಲ ಎಂದು ವಿರಾಟ್ ಕೊಹ್ಲಿ ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.