ಕ್ರಿಕೆಟ್

ಐಸಿಸಿ ಏಕದಿನ ರ್ಯಾಂಕಿಂಗ್: ಅಗ್ರ ಸ್ಥಾನ ಕಾಯ್ದುಕೊಂಡ ವಿರಾಟ್ ಕೊಹ್ಲಿ, ಬೂಮ್ರಾ

ಸೋಮವಾರ ಐಸಿಸಿ ಬಿಡುಗಡೆ ಮಾಡಿದ ಏಕದಿನ ಶ್ರೇಯಾಂಕದಲ್ಲಿ ಭಾರತ ತಂಡದ ನಾಯಕ ವಿರಾಟ್‌ ಕೊಹ್ಲಿ ಹಾಗೂ ವೇಗಿ ಜಸ್ಪ್ರೀತ್‌ ಬೂಮ್ರಾ ಅವರು ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ....

ಐಸಿಸಿ ಏಕದಿನ ರ್ಯಾಂಕಿಂಗ್: ಅಗ್ರ ಸ್ಥಾನ ಕಾಯ್ದುಕೊಂಡ ವಿರಾಟ್ ಕೊಹ್ಲಿ, ಬೂಮ್ರಾ
ಐಸಿಸಿ ಏಕದಿನ ರ್ಯಾಂಕಿಂಗ್: ಅಗ್ರ ಸ್ಥಾನ ಕಾಯ್ದುಕೊಂಡ ವಿರಾಟ್ ಕೊಹ್ಲಿ, ಬೂಮ್ರಾ
Published On :
ದುಬೈ: ಸೋಮವಾರ ಐಸಿಸಿ ಬಿಡುಗಡೆ ಮಾಡಿದ ಏಕದಿನ ಶ್ರೇಯಾಂಕದಲ್ಲಿ ಭಾರತ ತಂಡದ ನಾಯಕ ವಿರಾಟ್‌ ಕೊಹ್ಲಿ ಹಾಗೂ ವೇಗಿ ಜಸ್ಪ್ರೀತ್‌ ಬೂಮ್ರಾ ಅವರು ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ಕ್ರಮವಾಗಿ ಅಗ್ರ ಸ್ಥಾನದಲ್ಲಿ ಮುಂದುವರಿದಿದ್ದಾರೆ.
ಟೀಂ ಇಂಡಿಯಾ ನಾಯಕ ವಿರಾಟ್‌ ಕೊಹ್ಲಿ,  890 ಅಂಕಗಳೊಂದಿಗೆ ಅಗ್ರ ಸ್ಥಾನದಲ್ಲಿ ಉಳಿದುಕೊಂಡರೆ, ಉಪ ನಾಯಕ ರೋಹಿತ್‌ ಶರ್ಮಾ 839 ಅಂಕಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದಾರೆ. ಬೌಲಿಂಗ್‌ ವಿಭಾಗದಲ್ಲಿ ಜಸ್ಪ್ರೀತ್‌ ಬೂಮ್ರಾ 774 ಅಂಕಗಳೊಂದಿಗೆ ಅಗ್ರ ಸ್ಥಾನ ಪಡೆದರೆ, ಕುಲ್ದೀಪ್‌ ಯಾದವ್‌ ಹಾಗೂ ಯಜುವೇಂದ್ರ ಚಾಹಲ್‌ ಅಗ್ರ 10ರಲ್ಲಿ ಕಾಣಿಸಿಕೊಂಡಿದ್ದಾರೆ.
ಚೈನಾಮನ್‌ ಶೈಲಿಯ ಕುಲ್ದೀಪ್‌ 689 ಅಂಕಗಳೊಂದಿಗೆ 7ನೇ ಸ್ಥಾನ ಹಾಗೂ 680 ಅಂಕಗಳೊಂದಿಗೆ ಚಾಹಲ್‌ 8ನೇ ಸ್ಥಾನ ಪಡೆದಿದ್ದಾರೆ.
ಆಸ್ಟ್ರೇಲಿಯಾ ನಾಯಕ ಆ್ಯರೋನ್‌ ಫಿಂಚ್, ಇತ್ತೀಚೆಗೆ ಮುಕ್ತಾಯವಾದ ಪಾಕಿಸ್ತಾನದ ವಿರುದ್ಧ ಐದು ಪಂದ್ಯಗಳ ಏಕದಿನ ಸರಣಿಯಲ್ಲಿ ಅದ್ಭುತ ಪ್ರದರ್ಶನ ತೋರಿ ಒಟ್ಟು 451 ರನ್‌ ಗಳಿಸಿದ್ದರು. ಇವರ ಬ್ಯಾಟಿಂಗ್‌ ನೆರವಿನಿಂದ ಆಸಿಸ್‌ 5-0 ಅಂತರದಲ್ಲಿ ಸರಣಿಯನ್ನು ವೈಟ್‌ ವಾಶ್‌ ಮಾಡಿಕೊಂಡಿತ್ತು. ಇದರ ಫಲವಾಗಿ ಫಿಂಚ್‌ ಏಕದಿನ ಶ್ರೇಯಾಂಕದ ಅಗ್ರ 10ಕ್ಕೆ ಲಗ್ಗೆ ಇಟ್ಟಿದ್ದಾರೆ.
ಪಾಕ್‌ ವಿರುದ್ಧದ ಸರಣಿಯಲ್ಲಿ ಉತ್ತಮ ಪ್ರದರ್ಶನದ ನೆರವಿನಿಂದ ಆ್ಯರೋನ್‌ ಫಿಂಚ್‌ ಅವರು 12 ಸ್ಥಾನಗಳಲ್ಲಿ ಏರಿಕೆ ಕಂಡು ವೆಸ್ಟ್‌ ಇಂಡೀಸ್‌ ತಂಡದ ಶಾಯ್‌ ಹೋಪ್‌ ಜೊತೆ 9ನೇ ಸ್ಥಾನವನ್ನು ಹಂಚಿಕೊಂಡಿದ್ದಾರೆ. ಹೋಪ್‌ ಹಾಗೂ ಫಿಂಚ್‌ 744 ಅಂಕಗಳನ್ನು ಹೊಂದಿದ್ದಾರೆ.
ಆಸ್ಟ್ರೇಲಿಯಾದ ಆರಂಭಿಕ ಬ್ಯಾಟ್ಸ್‌ಮನ್‌ ಉಸ್ಮಾನ್‌ ಖವಾಜ 6 ಸ್ಥಾನಗಳಲ್ಲಿ ಏರಿಕೆ ಕಂಡು 19ನೇ ಶ್ರೇಯಾಂಕ ಪಡೆದರೆ, ಗ್ಲೇನ್‌ ಮ್ಯಾಕ್ಸ್‌ ವೆಲ್‌ 10ರಲ್ಲಿ ಏರಿಕೆ ಕಂಡು 23ನೇ ಸ್ಥಾನದಲ್ಲಿದ್ದಾರೆ. ಆಸಿಸ್‌ ಸ್ಪಿನ್ನರ್ ಆ್ಯಡಂ ಝಂಪಾ 4 ಸ್ಥಾನ ಏರಿಕೆ ಕಂಡು 45ನೇ ಸ್ಥಾನ ಪಡೆದರು.
ಆಫ್ಘಾನಿಸ್ತಾನದ ರಶೀದ್‌ ಖಾನ್ 356 ಅಂಕಗಳೊಂದಿಗೆ ಆಲ್‌ರೌಂಡರ್ ವಿಭಾಗದಲ್ಲಿ ಅಗ್ರ ಸ್ಥಾನದಲ್ಲಿ ಉಳಿದಿದ್ದಾರೆ. ಬಾಂಗ್ಲಾದ ಶಕೀಬ್‌ ಹಲ್‌ ಹಸನ್ (341) ಎರಡನೇ ಶ್ರೇಯಾಂಕದಲ್ಲಿದ್ದಾರೆ. ತಂಡದ ವಿಭಾಗದಲ್ಲಿ ಇಂಗ್ಲೆಂಡ್ (123) ಅಗ್ರ ಸ್ಥಾನ ಹಾಗೂ 120 ಅಂಕ ಪಡೆದಿರುವ ಭಾರತ ಎರಡನೇ ಸ್ಥಾನದಲ್ಲಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.