ಎಂಎಸ್ ಧೋನಿ ಔಟಾಗಿದ್ದಕ್ಕೆ ಅಭಿಮಾನಿಗಳು ಕೆಎಲ್ ರಾಹುಲ್‌ರನ್ನು ಬಲಿಪಶು ಮಾಡಿದ್ದೇಕೆ?
ಏಷ್ಯಾಕಪ್ ಕ್ರಿಕೆಟ್ ಟೂರ್ನಿಯ ಆಫ್ಘಾನಿಸ್ತಾನ ವಿರುದ್ಧದ ಪಂದ್ಯದಲ್ಲಿ ಗೆಲ್ಲುವ ಪಂದ್ಯದಲ್ಲಿ ಟೀಂ ಇಂಡಿಯಾ ಟೈ ಸಾಧಿಸಿತ್ತು. ಇನ್ನು ಪಂದ್ಯದಲ್ಲಿ ಎಂಎಸ್ ಧೋನಿ...

Published On :
ದುಬೈ: ಏಷ್ಯಾಕಪ್ ಕ್ರಿಕೆಟ್ ಟೂರ್ನಿಯ ಆಫ್ಘಾನಿಸ್ತಾನ ವಿರುದ್ಧದ ಪಂದ್ಯದಲ್ಲಿ ಗೆಲ್ಲುವ ಪಂದ್ಯದಲ್ಲಿ ಟೀಂ ಇಂಡಿಯಾ ಟೈ ಸಾಧಿಸಿತ್ತು. ಇನ್ನು ಪಂದ್ಯದಲ್ಲಿ ಎಂಎಸ್ ಧೋನಿ ಔಟಾಗಿದ್ದಕ್ಕೆ ಅಭಿಮಾನಿಗಳು ಕೆಎಲ್ ರಾಹುಲ್ ರನ್ನು ಬಲಿಪಶು ಮಾಡಿದ್ದಾರೆ.
ಆಫ್ಘಾನ್ ವಿರುದ್ಧದ ಪಂದ್ಯದಲ್ಲಿ ಟೀಂ ಇಂಡಿಯಾ ನಾಯಕರಾಗಿದ್ದ ಎಂಎಸ್ ಧೋನಿ ಮತ್ತು ದಿನೇಶ್ ಕಾರ್ತಿಕ್ ತಪ್ಪು ಎಲ್ಬಿಡಬ್ಲ್ಯೂ ತೀರ್ಪಿಗೆ ಬಲಿಯಾಗಿದ್ದರು. ಇಬ್ಬರಿಗೂ ಡಿಆರ್ಎಸ್(ಅಂಪೈರ್ ತೀರ್ಪು ಮರುಪರಿಶೀಲನೆ) ಮನವಿ ಸಲ್ಲಿಸಲು ಅವಕಾಶವಿಲ್ಲದಿದ್ದರಿಂದ ಪೆವಿಲಿಯನ್ ನತ್ತ ಹೆಜ್ಜೆ ಹಾಕಿದ್ದರು. ಇದು ಧೋನಿ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ.
ಎಂಎಸ್ ಧೋನಿ 200ನೇ ಪಂದ್ಯಕ್ಕೆ ನಾಯಕತ್ವ ವಹಿಸಿದ್ದು ಅವರು ಔಟಾಗಲು ಕೆಎಲ್ ರಾಹುಲ್ ಕಾರಣವೆಂದು ಹಿಗ್ಗಾಮುಗ್ಗಾ ಟೀಕಿಸಿದ್ದಾರೆ. 8 ರನ್ ಗಳಿಸಿದ್ದ ಧೋನಿ 26ನೇ ಓವರ್ ನಲ್ಲಿ ಎಲ್ಬಿಗೆ ಬಲಿಯಾದರು. ಇದಕ್ಕೂ ಮುನ್ನ 21ನೇ ಓವರ್ ನಲ್ಲಿ ಕೆಎಲ್ ರಾಹುಲ್ ಔಟಾಗಿದ್ದರು. ಡಿಆರ್ಎಸ್ ಗೆ ಮನವಿ ಮಾಡಿದ್ದು ಧೋನಿ ಡಿಆರ್ಎಸ್ ತೆಗೆದುಕೊಳ್ಳಲು ಸಾಧ್ಯವಾಗಲಿಲ್ಲ ಎಂದು ಟೀಕಿಸುತ್ತಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Cricketಕ್ರಿಕೆಟ್ಟೀಂ ಇಂಡಿಯಾTeam IndiaMS DhoniAfghanistanKL Rahulಎಂಎಸ್ ಧೋನಿಕೆಎಲ್ ರಾಹುಲ್ಆಫ್ಘಾನಿಸ್ತಾನ್Asia Cup 2018ಏಷ್ಯಾಕಪ್ 2018ಭಾರತೀಯ ಅಭಿಮಾನಿIndian Fans
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


