ಕ್ರಿಕೆಟ್

ಏಷ್ಯಾಕಪ್: ಟಾಸ್ ಗೆದ್ದ ಅಫ್ಘಾನ್ ಬ್ಯಾಟಿಂಗ್, ಮತ್ತೆ ಕ್ಯಾಫ್ಟನ್ ಕ್ಯಾಪ್ ತೊಟ್ಟ ಧೋನಿ!

ಏಷ್ಯಾ ಕಪ್ ಕ್ರಿಕೆಟ್ ಪಂದ್ಯಾವಳಿ ಸೂಪರ್ ಫೋರ್ ಹಂತದ ಮಂಗಳವಾರದ ಪಂದ್ಯದಲ್ಲಿ ಟಾಸ್ ಗೆದ್ದ ಅಫ್ಘಾನಿಸ್ಥಾನ ಬ್ಯಾಟಿಂಗ್ ಆಯ್ದುಕೊಂಡಿದೆ.

ಏಷ್ಯಾಕಪ್: ಟಾಸ್ ಗೆದ್ದ ಅಫ್ಘಾನ್ ಬ್ಯಾಟಿಂಗ್, ಮತ್ತೆ ಕ್ಯಾಫ್ಟನ್ ಕ್ಯಾಪ್ ತೊಟ್ಟ ಧೋನಿ!
ಎಂಎಸ್ ಧೋನಿ
Published On :
ದುಬೈ: ಏಷ್ಯಾ ಕಪ್ ಕ್ರಿಕೆಟ್ ಪಂದ್ಯಾವಳಿ ಸೂಪರ್ ಫೋರ್ ಹಂತದ ಮಂಗಳವಾರದ ಪಂದ್ಯದಲ್ಲಿ ಟಾಸ್ ಗೆದ್ದ ಅಫ್ಘಾನಿಸ್ಥಾನ ಬ್ಯಾಟಿಂಗ್ ಆಯ್ದುಕೊಂಡಿದೆ. 
ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಅನುಪಸ್ಥಿತಿಯಲ್ಲಿ ಮಹೇಂದ್ರ ಸಿಂಗ್ ಧೋನಿ ಭಾರತ ತಂಡವನ್ನು ಮುನ್ನಡೆಸಲಿದ್ದಾರೆ. ಈ ಮೂಲಕ ಅವರು 200ನೇ ಬಾರಿ ಟೀಂ ಇಂಡಿಯಾ ನಾಯಕರಾದಂತಾಗಿದೆ.
ಆರಂಭಿಕ ಆಟಗಾರರಾದ ಶಿಖರ್ ಧವನ್, ರೋಹಿತ್ ಶರ್ಮಾ, ಬುಮ್ರಾ, ಭುವನೇಶ್ವರ್ ಹಾಗೂ ಚಹಾಲ್ ಅವರನ್ನು ತಂಡದಿಂದ ಕೈಬಿಟ್ಟಿದ್ದು ಇವರುಗಳ ಬದಲಿಗೆ ಕೆ.ಎಲ್. ರಾಹುಲ್, ಮನೀಶ್ ಪಾಂಡೆ, ಖಲೀಲ್ ಅಹ್ಮದ್, ದೀಪಕ್ ಚಹಾರ್ ಮತ್ತು ಸಿದ್ಧಾರ್ಥ್ ಕೌಲ್ ಕಣದಲ್ಲಿದ್ದಾರೆ.
ಇನ್ನು ಅಫ್ಘಾನ್ ತಂಡದ ಸಾಮಿವುಲ್ಲಾ ಹಾಗೂ ಇನ್ಸಾನುಲ್ಲಾ ಅವರೌಗಳಿಗೆ ವಿಶ್ರಾಂತಿ ನೀಡಲಾಗಿದ್ದು ಅವರ ಬದಲಿಗೆ ನಿಜಾಬ್ ಉಲ್ಲಾ ಜಾವೇದ್ ಅಹಮದ್ ತಂಡಕ್ಕೆ ಸೇರ್ಪಡೆಯಾಗಿದ್ದಾರೆ.
ಇತ್ತೀಚಿನ ವರದಿ ಬಂದಾಗ ಅಫ್ಘಾನ್ ತಂಡ 14.2 ಓವರ್ ಗಳಲ್ಲಿ ಒಂದು ವಿಕೆಟ್ ನಷ್ಟಕ್ಕೆ 80 ರನ್ ಗಳಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.