ಕ್ರಿಕೆಟ್

ಏಷ್ಯಾಕಪ್: ಶೆಹ್ಜಾದ್ ಶತಕ, ಭಾರತಕ್ಕೆ ಗೆಲ್ಲಲು 253 ರನ್ ಗುರಿ!

ಯುಎಇನಲ್ಲಿನಡೆಯುತ್ತಿರುವ ಏಷ್ಯಾಕಪ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಮಂಗಳವಾರದ ಪಂದ್ಯದಲ್ಲಿ ಅಫ್ಘಾನಿಸ್ಥಾನ ಭಾರತಕ್ಕೆ ಗೆಲ್ಲಲು 253 ರನ್ ಗುರಿ ನೀಡಿದೆ.

ಏಷ್ಯಾಕಪ್: ಶೆಹ್ಜಾದ್ ಶತಕ, ಭಾರತಕ್ಕೆ ಗೆಲ್ಲಲು 253 ರನ್ ಗುರಿ!
ಮೊಹಮ್ಮದ್ ಶೆಹ್ಜಾದ್
Published On :
ದುಬೈ: ಯುಎಇನಲ್ಲಿನಡೆಯುತ್ತಿರುವ ಏಷ್ಯಾಕಪ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಮಂಗಳವಾರದ ಪಂದ್ಯದಲ್ಲಿ ಅಫ್ಘಾನಿಸ್ಥಾನ ಭಾರತಕ್ಕೆ ಗೆಲ್ಲಲು 253 ರನ್ ಗುರಿ ನೀಡಿದೆ.
ಟಾಸ್ ಗೆದ್ದು ಬ್ಯಾಟಿಂಗ್ ಪ್ರಾರಂಭಿಸಿದ ಅಫ್ಘಾನ್ ಪರ ಮೊಹಮ್ಮದ್ ಶೆಹ್ಜಾದ್ ಅದ್ಭುತ ಶತಕ (124) ದಾಖಲಿಸಿ ತಂಡವು ಗೌರವಯುತ ಮೊತ್ತ ಕಲೆಹಾಕಲು ನೆರವಾಗಿದ್ದಾರೆ.
ಇದಲ್ಲದೆ ಮೊಹಮ್ಮದ್ ನಬಿ ಅರ್ಧಶತಕ, (64) ಗಳಿಸಿದ್ದು ಅಫ್ಘಾನ್ ನಿಗದಿತ ಐವತ್ತು ಓವರ್ ಗಳಲ್ಲಿ ಎಂಟು ವಿಕೆಟ್ ನಷ್ಟಕ್ಕೆ 252 ರನ್‌ ಪಡೆಯುವಲ್ಲಿ ಸಮರ್ಥವಾಗಿದೆ.
ಟೀಂ ಇಂಡಿಯಾ ಬೌಲರ್ ಗಳಾದ ರವೀಂದ್ರ ಜಡೇಜಾ 3, ಕುಲದೀಪ್ ಯಾದವ್ 2 ಹಾಗೂ ಕೆ. ಅಹಮದ್, ದೀಪಕ್ ಚಹಾರ್, ಕೇದಾರ್ ಜಾಧವ್ ತಲಾ ಒಂದೊಂದು ವಿಕೆಟ್ ಕಬಳಿಸಿ ಗಮನ ಸೆಳೆದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.