'ಡಿಆರ್ ಎಸ್ ಕಿಂಗ್': ಡಿಆರ್ ಎಸ್ ಎಂದರೆ 'ಧೋನಿ ರಿವ್ಯೂ ಸಿಸ್ಟಮ್' ಎಂಬುದು ಮತ್ತೆ ಸಾಬೀತು!
ಆಧುನಿಕ ಕ್ರಿಕೆಟ್ ದಿಗ್ಗಜ ಮತ್ತು ಭಾರತ ಕಂಡ ಸರ್ವಶ್ರೇಷ್ಠ ನಾಯಕ ಮಹೇಂದ್ರ ಸಿಂಗ್ ಧೋನಿ ತಾವು ಡಿಆರ್ ಎಸ್ ಕಿಂಗ್ ಎಂಬುದನ್ನು ಮತ್ತೊಮ್ಮೆ ಸಾಬೀತು ಮಾಡಿದ್ದಾರೆ.

Published On :
ದುಬೈ: ಆಧುನಿಕ ಕ್ರಿಕೆಟ್ ದಿಗ್ಗಜ ಮತ್ತು ಭಾರತ ಕಂಡ ಸರ್ವಶ್ರೇಷ್ಠ ನಾಯಕ ಮಹೇಂದ್ರ ಸಿಂಗ್ ಧೋನಿ ತಾವು ಡಿಆರ್ ಎಸ್ ಕಿಂಗ್ ಎಂಬುದನ್ನು ಮತ್ತೊಮ್ಮೆ ಸಾಬೀತು ಮಾಡಿದ್ದಾರೆ.
ಭಾರತ ಆಡುವ ಯಾವುದೇ ಪಂದ್ಯದಲ್ಲಿ ರನೌಟ್ ಅಥವಾ ಡಿಆರ್ ಎಸ್ ಗೆ ಧೋನಿ ಎತ್ತಿದ ಕೈ. ಧೋನಿ ಸಕಾರಾತ್ಮಕವಾಗಿದ್ದಾರೆ ಎಂದರೆ ಖಂಡಿತಾ ಅದು ಔಟ್ ಎಂದು ಅರ್ಥ. ಆ ಮೂಲಕ ಧೋನಿ ಡಿಎರ್ ಎಸ್ (ಡಿಸಿಷನ್ ರಿವ್ಯೂ ಸಿಸ್ಟಮ್)ನ ಕಿಂಗ್ ಎಂದು ಖ್ಯಾತರಾಗಿದ್ದಾರೆ. ಇದೇ ಕಾರಣಕ್ಕೆ ಡಿಆರ್ ಎಸ್ ಎನ್ನು ಧೋನಿ ರಿವ್ಯೂ ಸಿಸ್ಟಮ್ ಎಂದೂ ಹಾಸ್ಯ ಮಾಡಲಾಗುತ್ತದೆ.
ಇದು ಮತ್ತೊಮ್ಮೆ ಸಾಬೀತಾಗಿದ್ದು, ನಿನ್ನೆ ನಡೆದ ಏಷ್ಯಾ ಕಪ್ ಕ್ರಿಕೆಟ್ ಟೂರ್ನಿಯ ಪಾಕಿಸ್ತಾನ ವಿರುದ್ದದ ಪಂದ್ಯದಲ್ಲಿ ಧೋನಿ ಮಾಸ್ಟರ್ ಮೈಂಡ್ ಗೆ ಪಾಕಿಸ್ತಾನದ ಆರಂಭಿಕ ಆಟಗಾರ ಇಮಾಮ್ ಉಲ್ ಹಕ್ ಬಲಿಯಾಗಿದ್ದಾರೆ. ಪಂದ್ಯದ 8ನೇ ಓವರ್ ನಲ್ಲಿ ಚಾಹಲ್ ಬೌಲಿಂಗ್ ನಲ್ಲಿ ಇಮಾಮ್ ಉಲ್ ಹಕ್ ಎಲ್ ಬಿ ಬಲೆಗೆ ಬಿದಿದ್ದರು. ಆದರೆ ಚಾಹಲ್ ಅಪೀಲ್ ಮಾಡಿದರೂ ಅಂಪೈರ್ ತೀರ್ಪು ನೀಡಿರಲಿಲ್ಲ. ಕೂಡಲೇ ಧೋನಿ ಡಿಆರ್ ಎಸ್ ಗೆ ಮನವಿ ಮಾಡಿದರು.
ಅಂಪೈರ್ ತೀರ್ಪು ನೀಡದ ಕಾರಣ ನೇರ ಧೋನಿ ಬಳಿ ಹೋದ ಸ್ಪಿನ್ನರ್ ಚಾಹಲ್ ಮತ್ತು ನಾಯಕ ರೋಹಿತ್ ಶರ್ಮಾ ಚರ್ಚೆ ನಡೆಸಿದರು. ಬಳಿಕ ಡಿಆರ್ ಎಸ್ ತೆಗೆದು ಕೊಳ್ಳಲು ನಿರ್ಧರಿಸಿದರು. ರಿವ್ಯೂ ಸಿಸ್ಟಮ್ ನಲ್ಲೂ ಚೆಂಡು ಬ್ಯಾಟ್ ಗೆ ತಗುಲದೇ ಪ್ಯಾಡ್ ಗೆ ಸ್ಪರ್ಶ ಮಾಡಿರುವುದು ಸ್ಪಷ್ಟವಾಗಿತ್ತು. ಆ ಮೂಲಕ ಇಮಾಮ್ ಎಲ್ ಬಿ ಬಲೆಗೆ ಬಿದ್ದಿದ್ದರು. ಧೋನಿ ಮಾಸ್ಚರ್ ಮೈಂಡ್ ಕುರಿತು ಡಗೌಟ್ ನಲ್ಲಿದ್ದ ವೀಕ್ಷಕ ವಿವರಣೆಗಾರರೂ ಕೂಡ ಶ್ಲಾಘನೆ ವ್ಯಕ್ತಪಡಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
indiaDubaiದುಬೈಪಾಕಿಸ್ತಾನMS Dhoniಎಂಎಸ್ ಧೋನಿCricket Offbeatಕ್ರಿಕೆಟ್ ಸ್ವಾರಸ್ಯAsia Cup 2018ಏಷ್ಯಾ ಕಪ್ 2018PaksitanKing Of DRSಕಿಂಗ್ ಆಫ್ ಡಿಆರ್ ಎಸ್
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


