4-1 ಅಂತರದಲ್ಲಿ ಸರಣಿ ಸೋತಿದ್ದರೂ ನಾವು ಉತ್ತಮ ಪ್ರದರ್ಶನ ನೀಡಿದ್ದೇವೆ: ವಿರಾಟ್ ಕೊಹ್ಲಿ
ನಿನ್ನೆ ಮುಕ್ತಾಯಗೊಂಡ ಇಂಗ್ಲೆಂಡ್ ವಿರುದ್ಧದ ಐದು ಟೆಸ್ಟ್ ಪಂದ್ಯಗಳ ಟೂರ್ನಿಯಲ್ಲಿ ಭಾರತ 4-1 ಅಂತರದಲ್ಲಿ ಸೋತಿದ್ದರೂ ಇದನ್ನೇ ಆಧಾರವಾಗಿಟ್ಟುಕೊಂಡು ಟೀಂ ಇಂಡಿಯಾ ಆಟ ಆಡಿಲ್ಲ ಎನ್ನುವುದು ಸರಿಯಲ್ಲ, ನಾವು ಉತ್ತಮ ಪ್ರದರ್ಶನ ನೀಡಿದ್ದೇವೆ ಎಂದು ನಾಯಕ ವಿರಾಟ್ ಕೊಹ್ಲಿ ಹೇಳಿದ್ದಾರೆ.

ಲಂಡನ್ : ನಿನ್ನೆ ಮುಕ್ತಾಯಗೊಂಡ ಇಂಗ್ಲೆಂಡ್ ವಿರುದ್ಧದ ಐದು ಟೆಸ್ಟ್ ಪಂದ್ಯಗಳ ಟೂರ್ನಿಯಲ್ಲಿ ಭಾರತ 4-1 ಅಂತರದಲ್ಲಿ ಸೋತಿದ್ದರೂ ಇದನ್ನೇ ಆಧಾರವಾಗಿಟ್ಟುಕೊಂಡು ಟೀಂ ಇಂಡಿಯಾ ಆಟ ಆಡಿಲ್ಲ ಎನ್ನುವುದು ಸರಿಯಲ್ಲ, ನಾವು ಉತ್ತಮ ಪ್ರದರ್ಶನ ನೀಡಿದ್ದೇವೆ ಎಂದು ನಾಯಕ ವಿರಾಟ್ ಕೊಹ್ಲಿ ಹೇಳಿದ್ದಾರೆ.
ಇಂಗ್ಲೆಂಡ್ ನಮ್ಮಗಿಂತ ಉತ್ತಮವಾಗಿ ಆಡಿದ್ದರಿಂದ 4-1 ಅಂತರದಲ್ಲಿ ಸೋತಿದ್ದೇವೆ. ಆದರೆ, ಲಾರ್ಡ್ಸ್ ಟೆಸ್ಟ್ ಹೊರತುಪಡಿಸಿ ಉಳಿದ ಪಂದ್ಯಗಳಲ್ಲಿ ನಾವು ತಕ್ಕ ಪ್ರದರ್ಶನ ನೀಡುವಲ್ಲಿ ವಿಫಲವಾದ್ದೇವು ಎಂದು ಕೊಹ್ಲಿ ಪಂದ್ಯದ ಬಳಿಕ ನಡೆದ ಬಹುಮಾನ ವಿತರಣಾ ಸಮಾರಂಭದಲ್ಲಿ ಹೇಳಿದರು.
ನಾವು ಇಂತಹ ಪಂದ್ಯವನ್ನು ನಿರೀಕ್ಷೆ ಮಾಡಿರಲಿಲ್ಲ. ಆದರೆ, ಉಭಯ ತಂಡಗಳು ಸರಣಿಯನ್ನು ಪೈಪೋಟಿಯಿಂದ ತೆಗೆದುಕೊಂಡಿದ್ದಾಗಿ ತಿಳಿಸಿದ ಕೊಹ್ಲಿ, ಈ ಸರಣಿಯಿಂದ ಟೆಸ್ಟ್ ಕ್ರಿಕೆಟ್ ನಲ್ಲಿ ದೊಡ್ಡ ಪ್ರಚಾರ ಸಿಕ್ಕಂತಾಗಿದೆ ಎಂದರು.
ಇಂಗ್ಲೆಂಡ್ ತಂಡ ವೃತ್ತಿಪರ ಆಟಗಾರರಿಂದ ಕೂಡಿದೆ. ಎರಡರಿಂದ ಮೂರು ಓವರ್ ಗಳಲ್ಲಿ ಪಂದ್ಯ ಬದಲಾಗುತ್ತಿದುದ್ದನ್ನು ನಾವು ಗಮನಿಸಿದ್ದೇವೆ .ಅವರು ನಿರ್ಭೀತಿಯಿಂದ ಆಡಿದ್ದರಿಂದ ನಾವೂ ಸೋಲಬೇಕಾಯಿತು ಎಂದು ವಿರಾಟ್ ಕೊಹ್ಲಿ ತಿಳಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


