ಐದನೇ ಟೆಸ್ಟ್: ಸೋಲಿನ ಭೀತಿಯಲ್ಲೂ ಕೆಎಲ್ ರಾಹುಲ್ ಶತಕ, ಭೋಜನ ವಿರಾಮಕ್ಕೆ ಭಾರತ 167/5
ಭಾರತ-ಇಂಗ್ಲೆಂಡ್ ನಡುವೆ ನಡೆಯುತ್ತಿರುವ ಐದನೇ ಹಾಗೂ ಕಡೆಯ ಟೆಸ್ಟ್ ನಲ್ಲಿ ಭಾರತ ಸೋಲಿನ ಭೀತಿ ಎದುರಿಸುತ್ತಿದೆ. ಇದರ ನಡುವೆಯೇ ಕನ್ನಡಿಗ ಕೆಎಲ್ ರಾಹುಲ್ ಶತಕ ಸಿಡಿಸುವ ಮೂಲಕ ಗಮನ ಸೆಳೆದಿದ್ದಾರೆ.

Published On :
ಓವಲ್: ಭಾರತ-ಇಂಗ್ಲೆಂಡ್ ನಡುವೆ ನಡೆಯುತ್ತಿರುವ ಐದನೇ ಹಾಗೂ ಕಡೆಯ ಟೆಸ್ಟ್ ನಲ್ಲಿ ಭಾರತ ಸೋಲಿನ ಭೀತಿ ಎದುರಿಸುತ್ತಿದೆ. ಇದರ ನಡುವೆಯೇ ಕನ್ನಡಿಗ ಕೆಎಲ್ ರಾಹುಲ್ ಶತಕ ಸಿಡಿಸುವ ಮೂಲಕ ಗಮನ ಸೆಳೆದಿದ್ದಾರೆ.
ಐದನೇ ದಿನದಾಟ ಪ್ರಾರಂಭಿಸಿದಾಗಲೇ ಬಾರತ ಮೂರು ವಿಕೆಟ್ ನಷ್ಟಕ್ಕೆ 58 ರನ್ ಗಳಿಸಿತ್ತು. ಇಂದು ಟೀಂ ಇಂಡಿಯಾ ಮತ್ತೆ ಎರಡು ವಿಕೆಟ್ ಕಳೆದುಕೊಂಡು ಭೋಜನ ವಿರಾಮದ ವೇಳೆಗೆ 167 ರನ್ ಕಲೆ ಹಾಕಿದೆ.
ಅಜಿಂಕ್ಯ ರಹಾನೆ (37) ಹಾಗೂ ಹನುಮ ವಿಹಾರಿ (0) ಬಲು ಬೇಗನೆ ವಿಕೆಟ್ ಒಪ್ಪಿಸಿ ಪೆವಿಲ್ಲಿಯನ್ ಗೆ ತೆರಳಿದ್ದರು ಅದರಲ್ಲಿಯೂ ಪ್ರಥಮ ಟೆಸ್ಟ್ ಆಡುತ್ತಿರುವ ವಿಹಾರಿ ಶೂನ್ಯಗಳಿಕೆ ಮಾಡಿ ನಿರಾಸೆ ಮುಡಿಸಿದ್ದಾರೆ.
ಇದೇ ವೇಳೆ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನಿಡಿದ್ದ ಕೆಎಲ್ ರಾಹುಲ್ ಅಂತರಾಷ್ಟ್ರೀಯ ಟೆಸ್ಟ್ ಕ್ರಿಕೆಟ್ ನಲ್ಲಿ ತಮ್ಮ ಐದನೇ ಶತಕ ಗಳಿಸಿದರು. ಊಟದ ವಿರಾಮದ ವೇಳೆ ರಾಹುಲ್ 107 ರನ್ ಸಂಪಾದಿಸಿದ್ದರು.
ಇದಾಗಲೇ ಸರಣಿ ಸೋಲಿನ ದವಡೆಗೆ ಸಿಕ್ಕಿರುವ ವಿರಾಟ್ ಕೊಹ್ಲಿ ಬಳಗಕ್ಕೆ ಈ ಪಂದ್ಯವೂ ಕೈತಪ್ಪುವ ಭೀತಿ ಎದುರಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


